RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಗೋಕಾಕ:ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ 

ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಗೋಕಾಕ ನ 28: ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಗೆ ಸಮೀಪದ ಹಡಗಿನಾಳ ಗ್ರಾಮದಲ್ಲಿ ಮಂಗಳವಾರದಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲೀಕರಣ ಇಲಾಖೆಯಿಂದ 40 ಲಕ್ಷ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಹಡಗಿನಾಳ ಗ್ರಾಮದ ಕುದರಿ ತೋಟ, ಆಡೀನ ತೋಟ, ಮಂಗಿ ತೋಟ ಹಾಗೂ ವಡೇರ ತೋಟದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲಾಖೆಯಿಂದ 40 ಲಕ್ಷ ರೂ.ಗಳ ಅನುದಾನ ಮಂಜೂರಾಗಿದೆ. ಒಂದು ಲಕ್ಷ ಲೀಟರ್ ನೀರಿನ ಸಾಮಥ್ರ್ಯ ಹೊಂದಿರುವ ಜಲಸಂಗ್ರಹಾಲಯದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸೂಚಿಸಿದರು. ಇದರಲ್ಲಿ ಕೊಳವೆ ಬಾವಿ ಹಾಗೂ ಪೈಪಲೈನ್ ಕಾಮಗಾರಿಯೂ ಸಹ ಒಳಗೊಂಡಿದೆ. ಜನರ ಮೂಲ ಸೌಕರ್ಯಕ್ಕೆ ಹೆಚ್ಚಿನಾಧ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಹಡಗಿನಾಳದಿಂದ ಹಡಗಿನಾಳ ಕ್ರಾಸವರೆಗಿನ ರಸ್ತೆ ಕಾಮಗಾರಿಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಗ್ರಾಮದಲ್ಲಿ ಬಾಕಿ ಉಳಿದಿರುವ ಕಾಂಕ್ರೀಟ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಅಲ್ಲದೇ ಆದಷ್ಟು ಬೇಗ ಸಾರ್ವಜನಿಕರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಶಿಕ್ಷಣಕ್ಕೆ ನೀಡುತ್ತಿರುವ ಪ್ರಾಶಸ್ತ್ಯವನ್ನು ನೀರಾವರಿ ಕ್ಷೇತ್ರಕ್ಕೂ ನೀಡಲಾಗುತ್ತಿದೆ. ಅರಭಾವಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಸಂಕಲ್ಪ ಹೊಂದಿದ್ದು, ಈಗಾಗಲೇ ಯೋಜನೆಯೊಂದನ್ನು ರೂಪಿಸಲಾಗಿದೆ. ರಸ್ತೆ, ನೀರು, ವಿದ್ಯುತ್ ಸೇರಿದಂತೆ ಜನರ ಬವನೆಗಳನ್ನು ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಅರಭಾವಿ ಮತಕ್ಷೇತ್ರವನ್ನು ನಂದನವನ ಮಾಡಿ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆ ನನ್ನದಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ದಂಡಿನಮಾರ್ಗದಿಂದ ಕುದರಿ ತೋಟದವರೆಗೆ 20 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿದರು.
ಪ್ರಮುಖರಾದ ಮುತ್ತೇನಗೌಡ ಪಾಟೀಲ, ನಾಗಪ್ಪ ಮಂಗಿ, ಮುದಕಪ್ಪ ತಳವಾರ, ಮಾಯಪ್ಪ ವಡೇರ, ರವಿ ವಡೇರ, ಮಹಾದೇವ ದಳವಾಯಿ, ಸಿದ್ದಪ್ಪ ಆಡಿನ, ಕಲ್ಲಪ್ಪ ಕುದರಿ, ದುಂಡಪ್ಪ ಕುದರಿ, ಮಲ್ಲಪ್ಪ ಗುಡದಾರ, ಮುತ್ತೆಪ್ಪ ಆಡಿನ, ಲಕ್ಷ್ಮಣ ಅರಬನ್ನವರ, ಮಾರುತಿ ಸಾಯನ್ನವರ, ರಾಯಪ್ಪ ತಿರಕನ್ನವರ, ಲಕ್ಕಪ್ಪ ಕುರೇರ, ಯಮನಪ್ಪ ವಾಳದ, ಮುತ್ತೆಪ್ಪ ಮನ್ನಾಪೂರ, ಬಸು ಯರಗುದ್ರಿ, ಶಂಭುಲಿಂಗ ದಳವಾಯಿ, ಗುತ್ತಿಗೆದಾರ ಬಸವರಾಜ ಕಸ್ತೂರಿ, ಗ್ರಾ.ಕು.ನೀ.ಸ ಮತ್ತು ನೈ ಇಲಾಖೆಯ ಎಇಇ ಐ.ಎಂ.ದಫೆದಾರ, ಮುಂತಾದವರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಲಕ್ಷ್ಮೀ ದೇವಸ್ಥಾನದಲ್ಲಿ ಸತ್ಕರಿಸಿದರು.

Related posts: