RNI NO. KARKAN/2006/27779|Thursday, November 21, 2024
You are here: Home » breaking news » ಮೂಡಲಗಿ:ಹಿಡಕಲ್ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದ ಶಾಸಕ ಬಾಲಚಂದ್ರ

ಮೂಡಲಗಿ:ಹಿಡಕಲ್ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದ ಶಾಸಕ ಬಾಲಚಂದ್ರ 

ಹಿಡಕಲ್ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದ ಶಾಸಕ ಬಾಲಚಂದ್ರ
ಮೂಡಲಗಿ ನ 29: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಂಗಳವಾರದಂದು ಇಡೀ ದಿನ ಕುಲಗೋಡ ವಿತರಣಾ ಕಾಲುವೆ ಸೇರಿದಂತೆ ಘಟಪ್ರಭಾ ಬಲದಂಡೆ ಕಾಲುವೆಯ ವ್ಯಾಪ್ತಿಯ ಹಳ್ಳಿಗಳಿಗೆ ಸಂಚರಿಸಿ ಹಿಡಕಲ್ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದರು.

ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಯಿಂದ ಕುಲಗೋಡ ವಿತರಣಾ ಕಾಲುವೆಯ ಕೊನೆಯ ಭಾಗದವರೆಗೆ 19 ಕಿ.ಮೀ ಅಂತರವಿದ್ದು, ಕಳೆದ 10 ವರ್ಷಗಳಿಂದ ಈ ಜಮೀನುಗಳಿಗೆ ನೀರು ತಲುಪಿರಲಿಲ್ಲ. ಅಲ್ಲದೇ ಯಾದವಾಡ ವಿತರಣಾ ಕಾಲುವೆ ಕೊನೆಯ ಭಾಗದ ರೈತರ ಜಮೀನುಗಳಿಗೂ ನೀರು ಮುಟ್ಟುತ್ತಿರಲಿಲ್ಲ. ರೈತರ ಕಷ್ಟಗಳಿಗೆ ಸ್ಪಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊನೆಗೂ ನೀರಿನಿಂದ ವಂಚಿತಗೊಂಡ ಜಮೀನುಗಳಿಗೆ ಜಲಾಶಯದಿಂದ ನೀರು ಹರಿಸುವಲ್ಲಿ ಯಶಶ್ವಿಯಾಗಿ ರೈತರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಿದ್ದಾರೆ.
ಕುಲಗೋಡ ವಿತರಣಾ ಕಾಲುವೆಯಡಿ ಬರುವ ಕಿ.ಮೀ 1 ರಿಂದ 10 ರವರೆಗೆ ಕಾಲುವೆ ಕಾಮಗಾರಿ ಆರಂಭವಾಗಲಿದೆ. ರೈತರು ಬಹುದಿನಗಳಿಂದ ಬೇಡಿಕೆಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಹಿಡಕಲ್ ಜಲಾಶಯದಿಂದ ಈ ಭಾಗದ ರೈತರಿಗೆ ನೀರು ಹರಿಯುತ್ತಿರಲಿಲ್ಲ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈ ಬಗ್ಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರನ್ನು ಕೋರಿರುವುದಾಗಿ ಹಾಗೂ ಟೇಲ್‍ಎಂಡ್ ರೈತರಿಗೆ ನೀರು ತಲುಪಿಸಲು ಅಗತ್ಯ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿಕೊಂಡಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಲಕ್ಷ್ಮೇಶ್ವರ, ಸುಣಧೋಳಿ, ಕುಲಗೋಡ, ಹೊಸಟ್ಟಿ, ಹೊನಕುಪ್ಪಿ ಹಾಗೂ ಭೈರನಟ್ಟಿ ಗ್ರಾಮಗಳ 3227.11 ಹೆಕ್ಟರ್ ಜಮೀನು ನೀರಾವರಿ ಪ್ರದೇಶಕ್ಕೆ ಒಳಪಡಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕುಲಗೋಡ ವಿತರಣಾ ಕಾಲುವೆಯ ಭಾಗದ ರೈತ ಸಮುದಾಯಕ್ಕೆ ಭರವಸೆ ನೀಡಿದಂತೆ ಡಿಸೆಂಬರ್ ತಿಂಗಳೊಳಗೆ ನೀರನ್ನು ಹರಿಸುವುದಾಗಿ ತಿಳಿಸಿದ್ದೆ. ಅದರಂತೆ ಈ ಭಾಗದ ರೈತರ ಜಮೀನುಗಳಿಗೆ ನೀರು ಈಗಾಗಲೇ ಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ಈಗ ನೀಡಲಾಗುತ್ತಿರುವ ಸಹಕಾರವನ್ನು ಮುಂದೆಯೂ ನೀಡುವಂತೆ ರೈತ ಸಮೂಹವನ್ನು ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ.
ಹಿಡಕಲ್ ಜಲಾಶಯದಿಂದ ಬಿಡುಗಡೆಯಾಗುವ ನೀರನ್ನು ಟೇಲ್‍ಎಂಡ್‍ವರೆಗೆ ಮುಟ್ಟಿಸುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಕುಲಗೋಡ ವಿತರಣಾ ಕಾಲುವೆಯ ಎಲ್ಲ ಹಳ್ಳಿಗಳಿಗೆ ನೀರು ತಲುಪಿಸುವ ದೃಷ್ಟಿಯಿಂದ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹಾಗೂ ತಾಪಂ ಸದಸ್ಯ ರಮೇಶ ಗಡಗಿ ಅವರು ಕಾಲುವೆ ವ್ಯಾಪ್ತಿಯಲ್ಲಿ ಇದ್ದುಕೊಂಡು ರೈತರ ಜಮೀನುಗಳಿಗೆ ನೀರು ತಲುಪಿಸುವಂತೆ ಈಗಾಗಲೇ ಸೂಚಿಸಿದ್ದೇನೆ. ರೈತರೊಂದಿಗೆ ಅಧಿಕಾರಿಗಳು ಸಹ ಸಹಕಾರ ನೀಡಬೇಕು. ನೀರನ್ನು ರೈತರು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಇಡೀ ದಿನ ರೈತರೊಂದಿಗೆ ಮಾಹಿತಿ ಪಡೆದುಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಮುಂದಿನ ದಿನಗಳಲ್ಲಿ ಕುಲಗೋಡ ವಿತರಣಾ ಕಾಲುವೆಯ ಅಂದಾಜು ಪತ್ರಿಕೆಯನ್ನು ನಿಗಮಕ್ಕೆ ಸಲ್ಲಿಸಿದ್ದು, ಇಷ್ಟರಲ್ಲಿಯೇ 24.40 ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಸರ್ಕಾರ ಮಂಜೂರಾತಿ ನೀಡಲಿದೆ ಎಂದು ಹೇಳಿದರು.
ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಭೂ ನ್ಯಾಯ ಮಂಡಳಿ ಸದಸ್ಯ ಬಸನಗೌಡ ಪಾಟೀಲ, ಸುಣಧೋಳಿ ತಾಪಂ ಸದಸ್ಯ ರಮೇಶ ಗಡಗಿ, ಸಂಜು ಗಡಗಿ, ಎಪಿಎಂಸಿ ನಿರ್ದೇಶಕ ರೇವಣ್ಣಾ ಕನಕಿಕೋಡಿ, ಬಸಪ್ಪ ಕಪರಟ್ಟಿ, ಬಿ.ಕೆ. ಗಂಗರಡ್ಡಿ, ಇಮಾಮ ಮೋಮಿನ, ಸಿದ್ದಪ್ಪ ಸಿದ್ಧಾಪೂರ, ಸಂತ್ರಾಮ ಹಲಗಿ, ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಮುಂತಾದವರು ಉಪಸ್ಥಿತರಿದ್ದರು.

Related posts: