RNI NO. KARKAN/2006/27779|Friday, November 22, 2024
You are here: Home » breaking news » ಖಾನಾಪುರ:ಸಮಸ್ಯೆಗಳನ್ನು ಗ್ರಾಮದ ಪಂಚರ ಸಮ್ಮುಖದಲ್ಲೇ. ಬಗೆಹರಿಸಿಕೊಳ್ಳಿ : ಉ.ಎಸ್.ಅವಟೆ

ಖಾನಾಪುರ:ಸಮಸ್ಯೆಗಳನ್ನು ಗ್ರಾಮದ ಪಂಚರ ಸಮ್ಮುಖದಲ್ಲೇ. ಬಗೆಹರಿಸಿಕೊಳ್ಳಿ : ಉ.ಎಸ್.ಅವಟೆ 

ಸಮಸ್ಯೆಗಳನ್ನು ಗ್ರಾಮದ ಪಂಚರ ಸಮ್ಮುಖದಲ್ಲೇ. ಬಗೆಹರಿಸಿಕೊಳ್ಳಿ : ಉ.ಎಸ್.ಅವಟೆ

ಖಾನಾಪುರ ನ 29: ಗ್ರಾಮೀಣ ಮಟ್ಟದಲ್ಲಿ ಸಣ್ಣ-ಪುಟ್ಟ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ, ನೇರವಾಗಿ ಕೋರ್ಟು ಕಛೇರಿಗಳಿಗೆ ಅಲೆದಾಡಲೂ ಹೋಗಬೇಡಿ, ಅಂತಹ ಸಮಸ್ಯೆಗಳನ್ನು ಗ್ರಾಮದ ಪಂಚರ ಸಮ್ಮುಖದಲ್ಲಿ ಅಲ್ಲಿಯೇ ಬಗೆಹರಿಸಿಕೊಳ್ಳಿರಿ ಎಂದು ನಂದಗಡ ಪೋಲಿಸ ಠಾಣೆಯ ಪಿ.ಎಸ್,ಐ ಯು,ಎಸ್.ಅವಟೆ ಹೇಳಿದರು.

ತಾಲೂಕಿನ ಲಿಂಗನಮಠ ಗ್ರಾಮದ ಚೆನ್ನಬಸವೇಶ್ವರ(ನಂದೀಶ್ವರ) ದೇವಸ್ಥಾನದ ಹತ್ತಿರ ಮಂಗಳವಾರ ದಿನದಂದು ಸಾಯಂಕಾಲ ನಡೆದ “ಬಿಟ್ ಸದಸ್ಯರ” ಸಭೆಯಲ್ಲಿ ಮಾತನಾಡಿದರು.

ನಮ್ಮ ವಸ್ತುಗಳ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಮತ್ತು ನಮ್ಮ ಕರ್ತವ್ಯವಾಗಿದೆ. ಏಕೆಂದರೆ ಯಾವೂದೇ ಒಂದು ವಸ್ತುವನ್ನು ಕೊಳ್ಳುವ ಮುಂಚೆ ಅದರ ರಕ್ಷಣೆ ಹೇಗೆ ಮಾಡಬೇಕು ಅದನ್ನು ಮೊದಲು ಅರಿತು ಕೊಳ್ಳಬೇಕು, ತದನಂತರ ವಸ್ತುವನ್ನು ಕೊಳ್ಳಬೇಕು. ಹೀಗೆ ನಮ್ಮ ಹಳ್ಳಿಗಳ ರೈತರು ದನ-ಕರುಗಳನ್ನು ಊರಿನಿಂದ ಅನಂತ ದೂರದಲ್ಲಿರುವ ಹೊಲ(ತೋಟ)ಗಳಲ್ಲಿ ಬಿಟ್ಟು ಬಂದು ಮನೆಗಳಲ್ಲಿ ವಿಶ್ರಮಿಸಲು ಹೋಗಬೇಡಿ ಅದರ ರಕ್ಷಣೆಯನ್ನು ಸಹ ಸರಿಯಾಗಿ ಮಾಡಿದರೆ ಅದರ ಒಳಿತು ನಮಗೆ ಆಗುತ್ತದೆ. ಜೋತೆಗೆ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ “ಸಿಸಿ ಟಿವಿ” ಕಳುವು ಪ್ರಕರಣದ ತನಿಖೆಯು ಚಾಲ್ತಿಯಲ್ಲಿದ್ದು, ಇಂತಹ ಪ್ರಕರಣಗಳಿಗೆ ಗ್ರಾಮದವರು ಸಹಕಾರ ನೀಡಿದರೇ ಶಿಕ್ಷಣ ಸಂಸ್ಥೆಯ ಹಾಳಾಗುವಿಕೆಯನ್ನು ತಡೆದು ತಪ್ಪಿಸಸ್ಥರಿಗೆ ಕಾನೂನು ಕ್ರಮ ಕೈಗೆತ್ತಿಕೊಳ್ಳಲಾಗುವದು.

ಇದಕ್ಕೂ ಮೊದಲು ಗ್ರಾಮದ ಪತ್ರಕರ್ತ ಕಾಶೀಮ ಹಟ್ಟಿಹೊಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಮಲಪ್ರಭಾ ಮತ್ತು ಕಳಸಾ ನದಿಗಳ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಸಂಗೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಎ,ಪಿ.ಎಮ್.ಸಿ ಸದಸ್ಯ ಬಸವರಾಜ ಮುಗಳಿಹಾಳ, ಮುಸ್ಲಿಂ ಸಮಾಜದ ಮುಖಂಡ ಗಫಾರಸಾಬ ಕಟ್ಟಿಮನಿ, ರಮೇಶ ಮಾಟೋಳ್ಳಿ, ಮಹಾಂತೇಶ ಬೆಳಗಾವಿ, ಶಾಮೀರ ಹಟ್ಟಿಹೊಳಿ, ರಾಘವೇಂದ್ರ ಸಂಗೋಳ್ಳಿ ಗ್ರಾಮದ ಹಿರಿಯರು, ಎಲ್ಲ ಸಂಘಟನೆಗಳ ಪಧಾಧಿಕಾರಿಗಳು ಹಾಗೂ ಯುವಕರು ಹಾಜರಿದ್ದರು.

ಕಾರ್ಯಕ್ರಮವನ್ನು ಕೆಪಿಸಿಸಿ ಹಿಂದುಳಿದ ವಿಭಾಗ ಜಿಲ್ಲಾ ಸದಸ್ಯ ಪಾಂಡುರಂಗ ಮಿಟಗಾರ ನಿರೂಪಿಸಿ, ಸ್ವಾಗತಿಸಿ ಮತ್ತು ವಂದಿಸಿದರು.

Related posts: