RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:‘ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ’ ಟೀಕಿಸುತ್ತಿರುವದು ಅತ್ಯಂತ ಖಂಡನೀಯ : ದಲಿತ ಸಂಘರ್ಷ ಸಮಿತಿ ಆಕ್ರೋಶ

ಗೋಕಾಕ:‘ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ’ ಟೀಕಿಸುತ್ತಿರುವದು ಅತ್ಯಂತ ಖಂಡನೀಯ : ದಲಿತ ಸಂಘರ್ಷ ಸಮಿತಿ ಆಕ್ರೋಶ 

‘ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ’ ಟೀಕಿಸುತ್ತಿರುವದು ಅತ್ಯಂತ ಖಂಡನೀಯ : ದಲಿತ ಸಂಘರ್ಷ ಸಮಿತಿ ಆಕ್ರೋಶ
ಗೋಕಾಕ ಡಿ : 3 ಮನುವಾದಿಗಳ ಕೈಗೊಂಬೆಯಾಗಿರುವ ಶಂಕರ ಮುನವಳ್ಳಿ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದ ‘ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ’ ಸಮಾವೇಶವನ್ನು ಟೀಕಿಸುತ್ತಿರುವದು ಅತ್ಯಂತ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಹೇಳಿದರು.
ದಲಿತ ಮುಖಂಡರಾದ ರಮೇಶ ಸಣ್ಣಕ್ಕಿ, ಲಕ್ಷ್ಮಣ ತೆಳಗಡೆ, ಬಾಳೇಶ ಬನಹಟ್ಟಿ, ಶಾಬು ಸಣ್ಣಕ್ಕಿ, ರಾಮಣ್ಣ ಈಟಿ, ಶಾಂತಪ್ಪಣ್ಣ ಹಿರೇಮೇತ್ರಿ ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡಕರ ಅವರು ತಮ್ಮ ಜೀವನ ಪರ್ಯಂತ ದಲಿತರಲ್ಲಿಯ ಮೌಢ್ಯತೆ ಹಾಗೂ ಅಂಧವಿಶ್ವಾಸವನ್ನು ಹೋಗಲಾಡಿಸಲು ಶ್ರಮಿಸಿದರು. ಅವರ ಕಾರ್ಯವನ್ನು ಮುಂದುವರೆಸಿ ಶಾಸಕ ಸತೀಶ ಜಾರಕಿಹೊಳಿ ಅವರು ಡಾ. ಅಂಬೇಡಕರರ ಮಹಾಪರಿನಿರ್ವಾಣ ದಿನದಂದು ಒಂದಲ್ಲ ಒಂದು ದಿನ ಪ್ರತಿಯೊಬ್ಬರೂ ಹೋಗಲೇಬೇಕಾದ ಅತ್ಯಂತ ಪವಿತ್ರವಾದ ಸ್ಮಶಾನ ಭೂಮಿಯಲ್ಲಿ ಡಾ. ಅಂಬೇಡಕರರು ಹಾಗೂ ಇತರ ಮಹಾಪುರುಷರ ಭಾವಚಿತ್ರಗಳನ್ನು ಪೂಜಿಸಿ ಜನರಲ್ಲಿರುವ ಮೌಢ್ಯತೆ ಹಾಗೂ ಅಂಧವಿಶ್ವಾಸವನ್ನು ಹೋಗಲಾಡಿಸಲು ಕಾರ್ಯಕ್ರಮ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದ ದಲಿತ ಮುಖಂಡರು ಮನುವಾದಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಶಂಕರ ಮುನವಳ್ಳಿ ದಲಿತರಲ್ಲಿ ಜಾಗೃತಿ ಮೂಡಿದರೆ ಸಮಾಜದ ಮುಖಂಡನೆÉಂದು ಹೇಳಿಕೊಳ್ಳುವ ತನ್ನ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ಅಂಜಿಕೆಯಿಂದ ಅಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಆರೋಪಿಸಿದರಲ್ಲದೆ ಇನ್ನುಮುಂದೆಯೂ ತನ್ನ ಪ್ರವ್ಲತ್ತಿಯನ್ನು ಮುಂದುವರೆಸಿದರೆ ಅವರ ವಿರುದ್ಧ ತೀವ್ರ ಹೋರಾಟ ನಡೆಸಲಾಗುವದೆಂದು ಎಚ್ಚರಿಕೆ ನೀಡಿದರು.
ಡಾ. ಅಂಬೇಡಕರರು ದಲಿತ ಹಾಗೂ ಬಡ ಶೋಷಿತ ಜನರ ಕಲ್ಯಾಣಕ್ಕಾಗಿ ಹೊರಡಿಸಿರುವ ರಥವನ್ನು ಶಾಸಕ ಸತೀಶ ಜಾರಕಿಹೊಳಿ ಅವರು ಮುಂದಕ್ಕೆ ಒಯ್ಯುತ್ತಿದ್ದು ಡಿಸೆಂಬರ 6ರಂದು ಸಂಘಟಿಸಲಾದ ‘ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.
ಈಗಾಗಲೆ ಗೋಕಾಕ ತಾಲೂಕಿನದಾದ್ಯಂತ ಈ ಕಾರ್ಯಕ್ರಮದ ಬಗ್ಗೆ ದಲಿತ ಮತ್ತು ಇತರೆ ಜನಾಂಗದವರಿಗೆ ತಿಳುವಳಿಕೆ ನೀಡಲಾಗಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆಂದು ತಿಳಿಸಿದರು.

Related posts: