ಗೋಕಾಕ:ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವು
ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವು
ಗೋಕಾಕ ಡಿ 3: ಚಳಿ ತಾಳಲಾರದೆ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ವೃದ್ಧ ಮಹಿಳೆಯೊಬ್ಬಳ ಬಟ್ಟೆಗಳಿಗೆ ಅಕಸ್ಮಿಕ ಬೆಂಕಿ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಳವಿ ಗ್ರಾಮದಲ್ಲಿ ಜರುಗಿದೆ.
ನಾಗವ್ವ ಭೀಮಪ್ಪ ಪೂಜೇರಿ (70) ಎಂಬ ವೃದ್ಧ ಮಹಿಳೆ ದಿ. 28ರಂದು ಸಂಜೆ ವೇಳೆಯಲ್ಲಿ ಚಳಿಯಿಂದ ಯಳಿಯಲು ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿರುವಾಗ ಅಕಸ್ಮಿಕವಾಗಿ ಆಕೆಯ ಬಟ್ಟೆಗಳಿಗೆ ಬೆಂಕಿ ಹತ್ತಿ ತೀವ್ರ ಗಾಯಗೊಂಡಳು. ಕೂಡಲೇ ಆಕೆಯನ್ನು ಇಲ್ಲಿಯ ಸರಕಾರಿ ಆಸ್ಪತ್ರೆಗೆ ಸೇರಿಸಿದರೂ ಉಪಚಾರ ಫಲಿಸದೆ ದಿ. 3ರಂದು ಸಂಜೆ ಸಾವನ್ನಪ್ಪಿದಳು.
ಈ ಬಗ್ಗೆ ಗೋಕಾಕ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.