RNI NO. KARKAN/2006/27779|Saturday, October 19, 2024
You are here: Home » breaking news » ಖಾನಾಪುರ:ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ : ಪಾಂಡುರಂಗ ಮಿಟಗಾರ

ಖಾನಾಪುರ:ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ : ಪಾಂಡುರಂಗ ಮಿಟಗಾರ 

ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ : ಪಾಂಡುರಂಗ ಮಿಟಗಾರ

ಖಾನಾಪುರ ಡಿ 4: ಮಾನವ ಕುಲಕ್ಕೆ ಪ್ರೀತಿ, ಪ್ರೇಮ, ಮಮತೆ, ಮತ್ತು ಸಹೋದರತೆಯ ಮಹತ್ವವನ್ನು ಸಾರಿ ಹೇಳಿದ ಪ್ರವಾದಿ ಮೊಹಮ್ಮದ ಪೈಗಂಬರರ ತತ್ವದರ್ಶಗಳನ್ನು ಇಂದಿನ ಜನತೆ ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಸ್ಯೆಗಳಿಲ್ಲದ, ಸುಂದರವಾದ, ಶಾಂತಿಯುತ ಸಮಾಜ ನಿರ್ಮಾಣವಾಗುದರಲ್ಲಿ ಸಂಶಯವಿಲ್ಲ ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಬೆಳಗಾವಿ ಜಿಲ್ಲಾ ಸದಸ್ಯರಾದ ಪಾಂಡುರಂಗ ಮಿಟಗಾರ ಹೇಳಿದರು.
ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ ಯಂಗ್ ಕಮೀಟಿ ನೇತೃತ್ವದಲ್ಲಿ ಇತ್ತಿಚೆಗೆ ಹಮ್ಮಿಕೊಂಡಂತಹ ಇದ್-ಮಿಲಾದ-ಉನ-ನಬಿ (ಮೊಹಮ್ಮದ ಪೈಗಂಬರರ ಜನ್ಮದಿನಾಚರಣೆ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯತಿಥಿಗಳಾಗಿ ಮಾತನಾಡಿದರು.
ಜಗತ್ತಿಗೆ ಶಾಂತಿ ಸಾಮರಸ್ಯದ ಸಂದೇಶ ಸಾರಿದ ಪ್ರವಾದಿ ಮೊಹಮ್ಮದ ಪೈಗಂಬರರು, ಈ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬರಿಗೂ ಕರುಣೆ ತೋರುವ ಮೂಲಕ ಸಂಕಷ್ಟದಲ್ಲಿರುವವರಿಗೆ ಕೈಲಾದ ನೆರವಿನ ಹಸ್ತ ಚಾಚುವವನೇ ನಿಜವಾದ ಮನುಷ್ಯ, ಆದ್ದರಿಂದ ನಾವೆಲ್ಲರೂ ಸೇರಿಕೊಂಡು ಒಗ್ಗಟ್ಟಾಗಿ ಜೀವಿಸೋಣ ಎಂದರು.
ಗ್ರಾಮದ ಬಿ.ಜೆ.ಪಿ. ಮುಖಂಡರಾದ ರಾಜು ರಪಾಟಿ ಮಾತನಾಡಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಆದರೂ ಕೂಡಾ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಕೂಡಿ ನಡೆದರೆ ಮಾತ್ರ ಮಾನವ ಕುಲ ಶ್ರೇಷ್ಠ ಎಂದು ಹೇಳಲು ಸಾಧ್ಯ. ಜೊತೆಗೆ ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ ಎಂಬ ಬಸವಣ್ಣನವರ ವಚನವನ್ನು ನೆನೆಪಿಸಿಕೊಂಡು ಮೊದಲು ನಮ್ಮಷ್ಟಕ್ಕೆ ನಾವು ಪೂಜಿಸಿಕೊಳ್ಳೋಣ ಎಂದು ನುಡಿದರು.
ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯವನ್ನು ಹಮ್ಮಿಕೊಳ್ಳುವುದರ ಮೂಲಕ ಮುಸ್ಲಿಂ ಮತ್ತು ಹಿಂದೂ ಬಾಂಧವರು ಸೇರಿ ವಿಶೇಷವಾಗಿ ಪ್ರವಾದಿ ಮಹ್ಮದ ಪೈಗಂಬರ ದಿನಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರವಾದಿ ಮಹ್ಮದ ಪೈಗಂಬರರವರ ಕುರಿತು ಭಾಷಣ, ಭಕ್ತಿಗೀತೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಕಾಣಿಕೆಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಫೀಕ ಕಕ್ಕೇರಿ ಇವರು ಮಾತನಾಡಿ ಇದ್-ಮಿಲಾದ-ಉನ-ನಬಿ (ಮೊಹಮ್ಮದ ಪೈಗಂಬರರ ಜನ್ಮದಿನಾಚರಣೆ) ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಮುಸ್ಲಿಂ ಜಮಾತ ಅಧ್ಯಕ್ಷ ಅಸಮತಲಿ ಹಟ್ಟಿಹೊಳಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕ್ಬರಸಾಬ ಖಾನಾಪೂರ, ಎಮ್.ಆರ್. ಲಂಗೋಟಿ, ಮುನ್ನಾ ಜಾಮೀನದಾರ, ಟಿಪ್ಪು ತೇರಗಾಂವ್, ಹಸನ ಶೇಖ, ಶಾಮೀರ ಹಟ್ಟಿಹೊಳಿ, ಇಕಬಾಲ ದಾದೂನವರ, ಮುಸ್ತಫಾ ದಾಸ್ತಿಕೊಪ್ಪ, ರಾಘವೇಂದ್ರ ಸಂಗೋಳ್ಳಿ, ಬಸವರಾಜ ಮುಗಳಿಹಾಳ ಹಜರತ್ ಟಿಪ್ಪು ಸುಲ್ತಾನ ಯಂಗ್ ಕಮೀಟಿಯ ಸರ್ವ ಸದಸ್ಯರು, ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರÀಮವನ್ನು ಶಿಕ್ಷಕರಾದ ಜಾವೀದ ತಹಶೀಲ್ದಾರ ನಿರೂಪಿಸಿದರು. ಪತ್ರಕರ್ತ ಕಾಶೀಮ ಹಟ್ಟಿಹೊಳಿ ಸ್ವಾಗತಿಸಿದರು ಮತ್ತು ಶಿಕ್ಷಕ ಶಿರಾಜ ಬಾಗವಾನ ವಂದಿಸಿದರು.

Related posts: