RNI NO. KARKAN/2006/27779|Thursday, November 7, 2024
You are here: Home » breaking news » ಬೆಳಗಾವಿ:ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ

ಬೆಳಗಾವಿ:ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ 

ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ : ವಿಜಯ ಕುಲಕರ್ಣಿ

ಬೆಳಗಾವಿ ಡಿ 5 :  ಕಳಸಾ ಬಂಡೂರಿ ಮತ್ತು ಮಹದಾಯಿ ಕೊಳ್ಳ ಜೋಡಣೆ ವಿಷಯದಲ್ಲಿ ಮೂರು ರಾಜಕೀಯ ಪಕ್ಷಗಳು‌ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿವೆ ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ನಗರದ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಉತ್ತರ ಕರ್ನಾಟಕ ಜನರು ಪಾಠ ಕಲಿಸಬೇಕಾದ ಅನಿವಾರ್ಯತೆ ಈಗ ಬಂದಿದೆ. ಮೂರು ಪಕ್ಷಗಳು ಮಹದಾಯಿ ನೀರು ಹರಿಸುವುದಾಗಿ ಭರವಸೆ ನೀಡುತ್ತಿದ್ದಾರೆ ವಿನಃ ಅನುಷ್ಠಾನಗೊಳಿಸಲು ಹಿಂದೆಟ್ಟು ಹಾಕುತ್ತಿದ್ದಾರೆ. ಕೂಡಲೇ ಭರವಸೆ ಈಡೇರಿಸಿ ಗೇಜೆಟ್  ಹೊರಡಿಸಲಿ. ಮೇಕೆದಾಟು, ಎತ್ತಿನಹೊಳೆ, ಕಾವೇರಿ ನದಿ ನೀರಿನ ಯೋಜನೆ ಕೂಡಲೇ ಮಾಡಿಕೊಳ್ಳುತ್ತಾರೆ ಆದರೆ ಕಳಸಾ ಯೋಜನೆಯನ್ನು ಕಡೆಗಣಿಸುತ್ತಿದ್ದಾರೆ . ತಮ್ಮ ಸಂಬಳ ಟಿಎ/ ಡಿಎ ಹೆಚ್ಚಿಸಿಕೊಳ್ಳುತ್ತಾರೆ. ಆದ್ರೆ ಉತ್ತರ ಕರ್ನಾಟಕದಲ್ಲಿ ಏಳೂವರೆ ಟಿಎಂಸಿ ಮಹದಾಯಿ ನೀರು ಹರಿಸುವಂತೆ ಕಳೆದ 20 ವರ್ಷಗಳಿಂದ ಹೋರಾಟ ನಡೆಸಿದರೂ ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು.

ಡಿಸೆಂಬರ 15ರೊಳಗೆ ಮಹಾದಾಯಿ ನೀರು ಹರಿಸುವುದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಬೆಂಗಳೂರಿನಲ್ಲಿ ನಡೆಯುವ  ರೈತರ ಸಮಾವೇಶದಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು. ಸರಕಾರದ ಮಲತಾಯಿ ಧೋರಣೆ ಹಾಗೂ ಕಳಸಾ ಬಂಡೂರಿ‌, ಮಹದಾಯಿ ವಿಚಾರದಲ್ಲಿ ಡಿ. 15 ರಂದು ಬೆಂಗಳೂರಿನಲ್ಲಿ ರೈತ ಸಂಘಟನೆಗಳ ಪದಾಧಿಕಾರಿಗಳ ಬೃಹತ ರಾಜ್ಯ ಮಟ್ಟದ ಸಮಾವೇಶ ನಡೆಸಲಾಗುವುದು. ಈ‌ ಸಮಾವೇಶದಲ್ಲಿ ಸುಮಾರು ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ವಿಕಾಸ ಸೊಪ್ಪಿನ ಮಾತನಾಡಿ, ಕಳಸಾ ಬಂಡೂರಿ ನದಿ ಇತ್ಯರ್ಥವಾಗಬೇಕಾದರೆ ರಾಜ್ಯ ಸರಕಾರದ ಜವಾಬ್ದಾರಿ ಪ್ರಮುಖವಾಗಿದೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜ್ಯ ಸರಕಾರದೊಂದಿಗೆ ಚರ್ಚೆ‌ಮಾಡಬೇಕು. ಅದರಂತೆ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ಅವರೊಂದಿಗೆ ಮಾತನಾಡಿ ನೀರಿನ ಸಮಸ್ಯೆ ಬಗೆ ಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಡಾ. ಅಯ್ಯಪ್ಪ, ಗುರುರಾಜ ಹುಳ್ಳೇರ, ಪ್ರೊ. ಟಿ.ಟಿ.ಮುರಕಟ್ನಾಳ, ಶಿವಾನಂದ ಮೇಟಿ, ಸಿದಗೌಡ ಮೋದಗಿ ಇತರರು ಉಪಸ್ಥಿತರಿದ್ದರು.

Related posts: