ಬೈಲಹೊಂಗಲ:ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ : ಮಾತೆ ಗಂಗಾದೇವಿ
ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ : ಮಾತೆ ಗಂಗಾದೇವಿ
ಬೈಲಹೊಂಗಲ ಡಿ 6: ಕನ್ನಡಿಗರ ಧರ್ಮ ಲಿಂಗಾಯತ, ಇದು ಜಗತ್ತಿಗೆ ಸಮಾನತೆಯ, ಸಂದೇಶ ಸಾರುವ ಶರಣರಿಂದ ಕೂಡಿದ ಧರ್ಮವಾಗಿದೆ. ಲಿಂಗಾಯತ ಹೋರಾಟಕ್ಕಾಗಿ ಪ್ರತಿಯೊಬ್ಬರು ಒಗ್ಗೂಡಿ ಎಂದು ಬಸವಧರ್ಮ, ಪೀಠದ ದ್ವಿತೀಯ ಮಹಿಳಾ ಜಗದ್ಗುರು ಮಾತೆ ಗಂಗಾದೇವಿ ಕರೆ ನೀಡಿದರು.
ತಾಲೂಕಿನ ಬುಡರಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ 31 ನೇ ಶರಣಮೇಳ ಪ್ರಚಾರ ಕಾರ್ಯ ಕ್ರಮದ ನಿಮಿತ್ತ ಪ್ರವಚನ ನೀಡಿದ ಅವರು, ಸರ್ವರೂ ಲಿಂಗಾಯತ ಹೋರಾಟಕ್ಕೆ ಒಗ್ಗಟಿನಿಂದ ಭಾಗಿಯಾಗಿ ಶಿಖ್ರಂತೆ ಒಗ್ಗಟ್ಟು ಪ್ರದರ್ಶಿಸಿ, ರಾಷ್ಟ್ರೀಯ ಬಸವದಳ ಅಂದರೆ ಮೊದಲು ರಾಷ್ಟ್ರೀಯತೆ ನಂತರ ಬಸವಣ್ಣನ ಸಂಘಟನೆ ಎಂಬುವುದನ್ನು ತೋರಿಸಬೇಕು ಎಂದರು. ಮಾನವತ್ವದಿಂದ ದೈವತ್ವದ ಕಡೆಗೆ ಕೊಂಡೋಯ್ಯುವ ಶಕ್ತಿ ಬಸವಣ್ಣನವರ ವಚನ ಸಾಹಿತ್ಯಕ್ಕಿದೆ, ಇದೆಲ್ಲಾ ತನು, ಮನ, ಪ್ರಾಣ ಶುದ್ಧಿ ಪೂಜೆ, ಪ್ರಾರ್ಥನೆ, ಜ್ಞಾನದಿಂದ ಸಾಧ್ಯವಾಗುವುದು ಎಂದರು. ರುದ್ರಯ್ಯಾ ಪೂಜೇರ, ಮಹಾಂತೇಶ ಕಮತ, ಮಡಿವಾಳಪ್ಪ ಹಕಾರಿ, ರಾಮನಗೌಡ ಪಾಟೀಲ್ ಬುಡರಕಟ್ಟಿ ಸೇರಿದಂತೆ ಗ್ರಾಮದ ಹಲವು ಗಣ್ಯರು ಉಪಸ್ಥಿತರಿದ್ದರು. ಬಸವರಾಜ ಮಂಗಳಗಟ್ಟಿ ಕಾರ್ಯಕ್ರಮವನ್ನು ಸ್ವಾಗತಿಸಿದರು, ಬಸನಗೌಡರ್ ಮಾತನಾಡಿದರು ಬಾಳಪ್ಪ ಶಿವಬಸಣ್ಣನವರ ನಿರೂಪಿಸಿದರು,