ಬೆಳಗಾವಿ:ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ ಚಿಂತೆಯಿಲ್ಲ ನನಗೆ ನನ್ನ ಸಿದ್ದಾಂತ ಮುಖ್ಯ : ಶಾಸಕ ಸತೀಶ
ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ ಚಿಂತೆಯಿಲ್ಲ ನನಗೆ ನನ್ನ ಸಿದ್ದಾಂತ ಮುಖ್ಯ : ಶಾಸಕ ಸತೀಶ
ಬೆಳಗಾವಿ ಡಿ 6 : ನನಗೆ ಈ ಬಾರಿ MLA ಟಿಕೇಟ್ ಕೊಡಲಿ-ಬಿಡಲಿ, ಬೇಕಾದ್ರೆ ಎಐಸಿಸಿ ಸೆಕ್ರೆಟರಿ ಹುದ್ದೆ ಹಿಂಪಡೆಯಲಿ ಚಿಂತೆಯಿಲ್ಲ ನನಗೆ ನನ್ನ ಸಿದ್ದಾಂತ ಮುಖ್ಯ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ಅವರು ಬುಧವಾರ ನಗರದ ಸದಾಶಿವ ಸಶ್ಮಾನ ಭೂವಿಯಲ್ಲಿ ಮಾನವ ಬಂಧುತ್ವ ವೇದಿಕೆ ಹಮ್ಮಿಕೊಂಡಿದ್ದ ಮೌಢ್ಯವಿರೋಧಿ ಸಂಕಲ್ಪ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ನಾನು ಸಾಕಷ್ಟು ರಾಜಕೀಯ ಜೀವನ ಅನುಭವಿಸಿದ್ದು, ಕಳೆ 20 ವರ್ಷದಿಂದ 4 ಬಾರಿ ಶಾಸಕನಾಗಿ , ಸಚಿವನಾಗಿ ಕಾರ್ಯ ಮಾಡಿದ್ದೇನೆ . ನನಗೆ ರಾಜಕೀಯ ಅಧಿಕಾರದ ವ್ಯಾಮೋಹ ಇಲ್ಲ. ನನಗೆ ನನ್ನ ಸಿದ್ಧಾಂತ ಮುಖ್ಯ ವೆಂದ ಅವರು ಸಮಾಜಕಾರ್ಯದಲ್ಲಿ ಆಸಕ್ತಿಯಿದ್ದು, ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತಗಳಡಿ ಸಮಾಜಸೇವೆಯನ್ನು ಮುಂದುವರೆಸುತ್ತೇನೆ ಎಂದು ನುಡಿದರು
ಶಂಕರ ಮುನ್ನೋಳಿ ಒಬ್ಬ ಬ್ಯಾಕ್ ಮೇಲರ ನನ್ನ ವಿರುದ್ಧ ಹಾಯ್ ಕಮಾಂಡ್ ವರೆಗೆ ದೂರು ನೀಡಿದ್ದಾರೆ. ಅವರ ಸಲಹೆ ಕೇಳಿ ಸಮಾಜ ಸೇವೆ ಮಾಡುವ ಅನಿವಾರ್ಯತೆ ನನ್ನಗಿಲ ಸ್ಮಶಾನದಲ್ಲಿ ಜನಜಾಗೃತಿ ಮಾಡುವ ನನ್ನ ಹೋರಾಟ ಮುಂದುವರೆಯುತ್ತದೆ.
ಸ್ಮಶಾನದಲ್ಲಿ ವಸತಿ ಮಾಡುವಾಗ ಬಸ್ ನಲ್ಲಿ ಮಲಗದಂತೆ ಮುನ್ನೋಳಿ ಕೊಟ್ಟಿರುವ ಸಲಹೆ ಒಂದನ್ನು ಮಾತ್ರ ಸ್ವೀಕರಿಸಿ ಇಂದಿನ ದಿನ ಸ್ಮಶಾನದಲ್ಲಿ ಹೊರಗೆ ಮಲಗುತ್ತೇನೆ ಎಂದು ತೆರೆದ ಸಭೆಯಲ್ಲಿ ತಿಳಿಸಿದರು.
ಸಂಜಯ ಪಾಟೀಲ ಜೋತೆಗಿನ ಗೆಳೆತನ ಗಟ್ಟಿಯಾಗಿದೆ :
ಶಾಸಕ ಸಂಜಯ ಪಾಟೀಲ ಬಗ್ಗೆ ನಾನು ನೀಡಿದ ಹೇಳಿಕೆ
ತಿರುಚಲಾಗಿದೆ ನನ್ನ ಹೇಳಿಕೆಯ ಉದ್ದೇಶ ಹಿಂದು ಧರ್ಮಕ್ಕಿಂತ ಜೈನ ಧರ್ಮ ಶ್ರೇಷ್ಠ ವೆಂದಿತ್ತು ಆದರೆ ಕೆಲವರು ಅರ್ಪಾಥ ಭಾವಿಸಿದ್ದಾರೆ ರಾಜಕೀಯವಾಗಿ ಪರ ವಿರೋಧ ಹೇಳಿಕೆ ನೀಡುವುದು ಸಹಜ ಅಂದ ಮಾತ್ರಕ್ಕೆ ವಿರೋಧಿಗಳು ಎಂದು ಭಾವಿಸುವುದು ಸರಿಯಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದರು
ವೇದಿಕೆಯಲ್ಲಿ ಅಥಣಿಯ ಮೋಟಗಿ ಮಠದ ಶ್ರೀಗಳು , ಬೆಳವಿಯ ಬಸವ ದೇವರು , ಚಿತ್ರ ನಟ ಪ್ರಕಾಶ ರೈ , ಸೇರಿದಂತೆ ಅನೇಕ ಪ್ರಗತಿಪರ ಚಿಂತಕರು ಇದ್ದರು