ಘಟಪ್ರಭಾ:ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಮನವಿ
ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಮನವಿ
ಘಟಪ್ರಭಾ ಡಿ 6: ಸಮೀಪದ ಕೊಣ್ಣೂರ ನಗರದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ನಗರ ಘಟಕದವತಿಯಿಂದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಇತ್ತೀಚಿಗೆ ಕೊಣ್ಣೂರ ನಗರದಲ್ಲಿ ಜನತೆಗೆ ಶುದ್ಧ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲಾ. ಪೂರೈಕೆಯಾಗುತ್ತಿರುವ ನೀರು ತೀರಾ ಅಶುಧ್ಧವಾಗಿದ್ದು, ಅಶುದ್ಧ ನೀರನ್ನು ಕುಡಿಯುವದರಿಂದ ನಾಗರಿಕರಿಗೆ, ಚಿಕ್ಕ ಮಕ್ಕಳಿಗೆ ಜಲಭಾದೆ, ವಾಂತಿ ಮುಂತಾದ ಬೇನೆಗಳು ಕಾಣಿಸಿತೊಡಗಿವೆ. ಪುರಸಭೆ ಅನುದಾನದಡಿಯಲ್ಲಿ ಜಲ ಶುದ್ದಿಕರಣ ಘಟಕಗಳನ್ನು ಪಟ್ಟಣದಲ್ಲಿಯೇ ಸ್ಥಾಪಿಸಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಬೇಕು. ಅಲ್ಲದೇ ಮನವಿಯನ್ನು ಗಂಭಿರವಾಗಿ ಪರಿಗಣಿಸಿ ನಾಗರಿಕರ ಕ್ಷೇಮ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಸೂಕ್ತ ಕ್ರಮ ಜರುಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಲೀಕಜಾನ ತಳವಾರ, ಗೋಕಾಕ ತಾಲೂಕಾಧ್ಯಕ್ಷ ಹೈದರಅಲಿ ಮುಲ್ಲಾ, ನಗರ ಘಟಕ ಅಧ್ಯಕ್ಷ ಅನಿಸ್ ಮುಲ್ಲಾ, ಉಪಾಧ್ಯಕ್ಷ ಅಕ್ಷಯ ಮೇಕಲಿ, ಮೌಲಾ ಪುಲತಾಂಬೆ, ಅಜೀಜ ಮೋಕಾಶಿ, ಮೌಸಿನ ಪೈಲವಾನ, ಬಬಲು ಬಾಗೆವಾಡಿ, ಕುಮಾರ ಕಾಮೆವಾಡಿ, ಯಲ್ಲಪ್ಪ ಲಂಕನವಾಡಿ, ರಮೇಶ ಪೂಜೇರಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.