RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ : ಶಾಸಕ ಬಾಲಚಂದ್ರ

ಗೋಕಾಕ:ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ : ಶಾಸಕ ಬಾಲಚಂದ್ರ 

ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ : ಶಾಸಕ ಬಾಲಚಂದ್ರ

ಗೋಕಾಕ ಡಿ 8 : ಪ್ರಸಕ್ತ ಸಾಲಿನಲ್ಲಿ ಅರಭಾವಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 2460 ಮನೆಗಳು ಮಂಜೂರಾಗಿವೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ದುರದುಂಡಿ ಗ್ರಾಮ ಪಂಚಾಯತಿಯ ಪ್ರಸಕ್ತ ಸಾಲಿನ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಬಸವ ವಸತಿ ಯೋಜನೆಯಡಿ ಪ್ರತಿ ಫಲಾನುಭವಿಗೆ 1.52 ಲಕ್ಷ ರೂ.ಗಳನ್ನು ಮನೆಗಳ ನಿರ್ಮಾಣಕ್ಕೆ ಕೊಡಲಾಗುತ್ತಿದೆ. ಇದರಲ್ಲಿ 1.32 ಲಕ್ಷ ರೂ. ಸರ್ಕಾರದಿಂದ ಹಾಗೂ 20 ಸಾವಿರ ರೂ.ಗಳು ನರೇಗಾ ಯೋಜನೆಯಡಿ ನೀಡಲಾಗುತ್ತಿದೆ. ಅರಭಾವಿ ಮತಕ್ಷೇತ್ರದಲ್ಲಿ ಬಸವ ವಸತಿ ಯೋಜನೆಯಡಿ 2460 ಮನೆಗಳ ನಿರ್ಮಾಣಕ್ಕೆ ಒಟ್ಟು ಸರ್ಕಾರದಿಂದ 37.39 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಅರ್ಹ ಬಡ ಕುಟುಂಬಗಳನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಫಲಾನುಭವಿಗಳು ಸರ್ಕಾರದ ಸೌಲಭ್ಯ ಪಡೆಯಲು ಮದ್ಯಸ್ಥಿಕರಿಗೆ ಹಣವನ್ನು ನೀಡದಂತೆ ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದುರದುಂಡಿ ಗ್ರಾಮ ಪಂಚಾಯತಿಗೆ ಮಂಜೂರಾಗಿರುವ 58 ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು.
ಗ್ರಾಪಂ ಅಧ್ಯಕ್ಷ ಭೀಮಶಿ ಹುಕ್ಕೇರಿ, ಗ್ರಾಪಂ ಸದಸ್ಯರಾದ ಮಹಾನಂದಾ ಪೂಜೇರಿ, ಗಂಗವ್ವಾ ಪೂಜೇರಿ, ಮಲ್ಲವ್ವ ಅರಭಾವಿ, ಸಿದ್ರಾಮ ಅಂತರಗಟ್ಟಿ, ಯಲ್ಲವ್ವಾ ವಗ್ಗನ್ನವರ, ಬಿಜೆಪಿ ಅರಭಾವಿ ಮಂಡಲ ಉಪಾಧ್ಯಕ್ಷೆ ಇಂದಿರಾ ಸಿದ್ದಪ್ಪ ಅಂತರಗಟ್ಟಿ, ಮುಂತಾದವರು ಉಪಸ್ಥಿತರಿದ್ದರು.

Related posts: