ಗೋಕಾಕ: ನೂತನ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಡಿ.15 ರಂದು ಗೋಕಾಕ ಬಂದ್ : ಗೋಕಾಕ ಜಿಲ್ಲಾ ಹೋರಾಟ ಸಮಿತಿ ನಿರ್ಣಯ
ಗೋಕಾಕ ನೂತನ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಡಿ.15 ರಂದು ಗೋಕಾಕ ಬಂದ್ : ಗೋಕಾಕ ಜಿಲ್ಲಾ ಹೋರಾಟ ಸಮಿತಿ ನಿರ್ಣಯ
ಗೋಕಾಕ ಡಿ 8: ವಾಸುದೇವ, ಹುಂಡೆಕರ, ಗದ್ದಿಗೌಡರ ಆಯೋಗಗಳು ಗೋಕಾಕ ಜಿಲ್ಲೆಯಾಗಿಸಲು ಸಮರ್ಥ ಸ್ಥಳವಾಗಿದೆ ಎಂದು ವರದಿ ನೀಡಿದ್ದಲ್ಲದೇ ಮಾಜಿ ಮುಖ್ಯಮಂತ್ರಿ ದಿ.ಜೆ ಎಚ್ ಪಟೇಲರು ಗೋಕಾಕ ಜಿಲ್ಲೆ ಎಂದು ಘೋಷಿಸಿ ನೋಟಿಪಿಕೇಷನ್ ಹೋರಡಿಸಿದ್ದರು. ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಹೀಗಾಗಿ ಸಾರ್ವಜನಿಕವಾಗಿ ಸಂಘಟಿಸಿ ನ್ಯಾಯವಾದಿಗಳ ಸಂಘದ ನೇತ್ರತ್ವದಲ್ಲಿ ಗೋಕಾಕ ಜಿಲ್ಲಾ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು.
ಅವರು, ನಗರದ ನ್ಯಾಯಾಲಯದ ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿ ಗೋಕಾಕ ಜಿಲ್ಲಾ ರಚನೆ ಕುರಿತು, ಗೋಕಾಕ ಜಿಲ್ಲಾ ಹೋರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ,ಮುಖಂಡರ ಸಭೆಯಲ್ಲಿ ಮಾತನಾಡಿ, ಗೋಕಾಕ ತಾಲೂಕಿನಲ್ಲಿ ಸಾಕಷ್ಟು ಜನಸಂಖ್ಯೆ ಹೆಚ್ಚಳ, ಹಳ್ಳಿ ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ ಅಭಿವೃದ್ಧಿ ಹೊಂದುತ್ತಿವೆ. ಹೀಗಾಗಿ ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ ಪಕ್ಷಾತೀತವಾಗಿ ಹೋರಾಟವನ್ನು ಕೈಗೊಂಡು ಗೋಕಾಕ ಜಿಲ್ಲಾ ರಚನೆ ಮಾಡುವಲ್ಲಿ ಶ್ರಮಿಸೋಣ ಎಂದರು.
ಮಾಜಿ ಜಿಪಂ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಅನೇಕ ಹೋರಾಟಗಳನ್ನು ಮಾಡುತ್ತ ಬಂದಿದ್ದು ನಾನಾ ಕಾರಣಗಳಿಂದ ಬೆಳಗಾವಿ ಜಿಲ್ಲೆ ವಿಭಜಣೆಗೆ ಅನಾವಶ್ಯಕವಾಗಿ ಕನ್ನಡಪರ ಸಂಘಟನೆಗಳು ವಿರೋಧ ಮಾಡುವದರಲ್ಲಿ ಹುರುಳಿಲ್ಲ ಎಂದರು.
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾತನಾಡಿ ಮೂಡಲಗಿ ಹೋರಾಟಕ್ಕೆ ಶಕ್ತಿ ನೀಡಿದ ನ್ಯಾಯವಾದಿಗಳ ನೇತ್ರತ್ವದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ರಾಜಕಾರಣಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮನವೊಲಿಸಿ ಗೋಕಾಕ ಜಿಲ್ಲಾ ಹೋರಾಟ ಹಮ್ಮಿಕೊಳ್ಳಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ವಿ ದೇಮಶೆಟ್ಟಿ ಮಾತನಾಡಿ, ಗೋಕಾಕ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಇದೆ.15 ರಂದು ಗೋಕಾಕ ಸಂಪೂರ್ಣ ಬಂದ್ ಮಾಡಿ, ದಿ20 ರಂದು ಒಂದು ದಿನ ಸಾಂಕೇತಿಕ ಧರಣಿ ಹಾಗೂ ದಿ.21 ರಂದು ನಗರಕ್ಕೆ ಆಗಮಿಸಲಿರುವ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಮಾಡಲಾಗುವುದು ಎಂದರು.
ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ ಬಿ ಗಿಡ್ಡನವರ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಹಾಂತೇಶ ಮಠಪತಿ, ಶಕೀಲ ಧಾರವಾಡಕರ, ಲಕ್ಕಪ್ಪ ತಹಶೀಲ್ದಾರ, ಹಿರಿಯ ನ್ಯಾಯವಾದಿ ಬಿ ಆರ್ ಕೊಪ್ಪ, ನ್ಯಾಯವಾದಿಗಳಾದ ಎಲ್ ಎನ್ ಬೂದಿಗೊಪ್ಪ, ಸಿ ಡಿ ಹುಕ್ಕೇರಿ, ಬಸವರಾಜ ಕಾಪಶಿ, ಎಮ್ ಆಯ್ ಜಮಾದಾರ, ವಾಯ್ ಕೆ ಕೌಜಲಗಿ, ವಿಷ್ಣು ಲಾತೂರ, ಕರವೇ ಅಧ್ಯಕ್ಷ ಕಿರಣ ಡಮಾಮಗರ ಸೇರಿದಂತೆ ಅನೇಕರು ಇದ್ದರು.