RNI NO. KARKAN/2006/27779|Thursday, December 12, 2024
You are here: Home » breaking news » ಬೈಲಹೊಂಗಲ:ಆದುನಿಕ ಯುಗದಲ್ಲಿ ಉದಾರತೆಯ ಮನೋಭಾವನೆಯ ಶ್ರೀಮಂತ ಮನೆತನಗಳು ಸಿಗುವುದು ಕಡಿಮೆ :ಸಿದ್ದೇಶ್ವರ ಮಹಾಸ್ವಾಮೀಜಿ

ಬೈಲಹೊಂಗಲ:ಆದುನಿಕ ಯುಗದಲ್ಲಿ ಉದಾರತೆಯ ಮನೋಭಾವನೆಯ ಶ್ರೀಮಂತ ಮನೆತನಗಳು ಸಿಗುವುದು ಕಡಿಮೆ :ಸಿದ್ದೇಶ್ವರ ಮಹಾಸ್ವಾಮೀಜಿ 

ಆದುನಿಕ ಯುಗದಲ್ಲಿ ಉದಾರತೆಯ ಮನೋಭಾವನೆಯ ಶ್ರೀಮಂತ ಮನೆತನಗಳು ಸಿಗುವುದು ಕಡಿಮೆ :ಸಿದ್ದೇಶ್ವರ ಮಹಾಸ್ವಾಮೀಜಿ

ಬೈಲಹೊಂಗಲ ಡಿ 8: ಇದು ಮನೆಯಲ್ಲ ಮಹಾಮನೆ, ಮನೆಯಷ್ಠೇ ದೊಡ್ಡ ಮನಸ್ಸು ಈ ಮನೆಯವರದು ಇಂತಹ ಆಚಾರ ವಿಚಾರ ಸಂಸ್ಕ್ರತಿ ಹಳ್ಳಿಯಲ್ಲದೇ ಎಲ್ಲಿ ಸಿಗಬೇಕು ನಿರಂತರ ದಾಸೋಹ ನಡೆಯವಂತಹ ಅನ್ನದ ಮನೆಯಾಗಿದೆ ಮನಸ್ಸಿಗೆ ಸಂತೋಷವಾಗುತ್ತದೆ. ಆದುನಿಕ ಯುಗದಲ್ಲಿ ಇಂತಹ ಉದಾರತೆಯ ಮನೋಭಾವನೆಯ ಹೊಂದಿದ ಶ್ರೀಮಂತ ಮನೆತನಗಳು ಸಿಗುವುದು ಕಡಿಮೆ ಇದು ಮನೆಯಲ್ಲ ಮಹಾಮನೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿಗಳು ಹೇಳಿದರು.
ನೇಗಿನಹಾಳ ಗ್ರಾಮದಲ್ಲಿ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ನೂತನವಾಗಿ ಸಂತ ಜ್ಞಾನದೇವ ತುಕಾರಾಮ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಯ ವಾರ್ಷೀಕೋತ್ಸವದ ಹಾಗೂ ಧಾರವಾಡ ಜಿಲ್ಲೆಯ ಗರಗದ ಮಡಿವಾಳೇಶ್ವರ ಮಠದ ಪೀಠಾಧೀಪತಿಗಳಾದ ಚನ್ನಬಸವ ಮಹಾಸ್ವಾಮೀಜಿಗಳ 81ನೆಯ ಹುಟ್ಟುಹಬ್ಬ ಹಾಗೂ 50ನೆಯ ವರ್ಷದ ಪೀಠಾರೋಹಣ ಕಾರ್ಯಕ್ರಮಗಳ ಸಯುಂಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆದ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿ ಕಿತ್ತೂರ ಮತಕ್ಷೇತ್ರದ ಯುವ ಧುರೀಣ ಬಾಬಾಸಾಹೇಬ ಪಾಟೀಲರ ಮನೆಗೆ ಆಗಮಿಸಿ ಮಾತನಾಡಿದರು. ಗ್ರಾಮದ ಹೊರವಯದಲ್ಲಿ ಬಿಳ್ಕೊಡುವ ಸಂದರ್ಭದಲ್ಲಿ ಶ್ರೀಗಳು ಬಾಬಾಸಾಹೇಬ ಪಾಟೀಲರನ್ನು ಸತ್ಕರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲ, ನಾನಾಸಾಹೇಬ ಪಾಟೀಲ, ಎ.ಪಿ.ಎಮ್.ಸಿ ಅದ್ಯಕ್ಷ ಸಂಗನಗೌಡ ಪಾಟೀಲ, ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಮುದಕಪ್ಪ ಮರಡಿ, ಬೋಮ್ಮನಾಯ್ಕ ಪಾಟೀಲ, ಚಂದ್ರು ಬೆಳಗಾವಿ, ಮಹರುದ್ರಪ್ಪ ಭೋಳೆತ್ತಿನ, ಮಹಾದೇವ ಮುದ್ದೆನ್ನವರ, ಸತ್ಯಪ್ಪ ತಳವಾರ, ಗೌಡಪ್ಪ ಕರಿಮುದಕನ್ನವರ, ಉದಯ ಮಾರೀಹಾಳ ಮತ್ತಿತ್ತರರು ಉಪಸ್ಥಿತರಿದ್ದರು.

Related posts: