ಗೋಕಾಕ:ಉಚಿತ ನೇತ್ರ ತಪಾಸಣಾ ಶಿಬಿರ : 26 ರೋಗಿಗಳು ಉಚಿತ ನೇತ್ರ ಚಿಕಿತ್ಸೆಗೆ ಆಯ್ಕೆ
ಉಚಿತ ನೇತ್ರ ತಪಾಸಣಾ ಶಿಬಿರ : 26 ರೋಗಿಗಳು ಉಚಿತ ನೇತ್ರ ಚಿಕಿತ್ಸೆಗೆ ಆಯ್ಕೆ
ಗೋಕಾಕ ಡಿ 9: ಇಲ್ಲಿಯ ಲಯನ್ಸ್ ಕ್ಲಬ್ ಮತ್ತು ಲಯನೆಸ್ಸ್ ಕ್ಲಬ್ ಇವುಗಳು ಹುಬ್ಬಳ್ಳಿಯ ಡಾ. ಎಂ.ಎಂ.ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ 18ನೇ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 15 ಅನಾಥ ಮಕ್ಕಳು ಸೇರಿದಂತೆ ಒಟ್ಟು 77 ನೇತ್ರ ರೋಗಿಗಳ ತಪಾಸಣೆ ನಡೆಸಿ, ಆ ಪೈಕಿ 26 ರೋಗಿಗಳನ್ನು ಉಚಿತ ನೇತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಇಲ್ಲಿಯ ಡಾ. ಅಶೋಕ ಮುರಗೋಡ ಅವರ ಮುರಗೋಡ ಮೆಮೋರಿಯಲ್ ಹಾಗೂ ಸರ್ಜಿಕಲ್ ಆಸ್ಪತ್ರೆಯಲ್ಲಿ ನಡೆದ ಶಿಬಿರದಲ್ಲಿ ಹುಬ್ಬಳ್ಳಿಯಿಂದ ಆಗಮಿಸಿದ್ದ ನೇತ್ರ ತಜ್ಞ ವೈದ್ಯೆ ಡಾ. ಲಕ್ಷ್ಮೀಪ್ರಿಯಾ ಮತ್ತು ಡಾ. ಪವನ ಕುಲಕರ್ಣಿ ನೇತೃತ್ವದ ವೈದ್ಯರ ತಂಡ ರೋಗಿಗಳ ತಪಾಸಣೆ ನಡೆಸಿತು.
ಚಿಕಿತ್ಸೆಗೆ ಆಯ್ಕೆಗೊಂಡ 26 ನೇತ್ರ ರೋಗಿಗಳನ್ನು ಇದೇ ಮಂಗಳವಾರ ದಿ. 12 ರಂದು ಹುಬ್ಬಳ್ಳಿಗೆ ಉಚಿತವಾಗಿ ಕರೆದೊಯ್ಯಲಾಗುವುದು ಎಂದು ಲಯನ್ಸ್ ಕ್ಲಬ್ ಚೇರಮನ್ ವಿಜಯಕುಮಾರ ಬಾಫನಾ ಮತ್ತು ಝೋನಲ್ ಚೇರ ಪರ್ಸನ್ ಗುರುದೇವ ಸಿದ್ದಾಪೂರಮಠ ಶಿಬಿರದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಇದೇ ಶಿಬಿರದಲ್ಲಿ ಎಲುಬುಗಳಲ್ಲಿಯ ಸಾಂದ್ರತೆ ತಪಾಸಣೆಯನ್ನು ಎಲುವು-ಕೀಲುಗಳ ತಜ್ಞ ವೈದ್ಯ ಡಾ. ಬೀರನಗಡ್ಡಿ ಮತ್ತು ಸೀಳು ತುಟಿಗಳ ತಪಾಸಣೆಯನ್ನು ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಿಂದ ಆಗಮಿಸಿದ್ದ ಪ್ಲಾಸ್ಟಿಕ್ ಸರ್ಜರಿ ವೈದ್ಯರಾದ ಡಾ. ಪವಾರ, ಡಾ. ಅಮೃತಾ ಗಾಡವಿ, ಡಾ. ಶ್ರುತಿ ಮತ್ತು ಡಾ. ಕಿರಣ ಅವರನ್ನೊಳಗೊಂಡ ವೈದ್ಯಕೀಯ ತಂಡ ನಡೆಸಿತು.
ಶಿಬಿರದ ಉಸ್ತುವಾರಿಯನ್ನು ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ಅಶೋಕ ಮುರಗೋಡ, ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿಶ್ವನಾಥ ಬೆಲ್ಲದ, ಜಯಪ್ಪ ನೇಗಿನಾಳ ಮೊದಲಾದವರು ವಹಿಸಿದ್ದರು.