ಘಟಪ್ರಭಾ:ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು : ಎಸ್.ಐ.ಬೆಣವಾಡಿ
ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು : ಎಸ್.ಐ.ಬೆಣವಾಡಿ
ಘಟಪ್ರಭಾ ಡಿ 11: ಮದ್ಯ ಮತ್ತು ಮಾಧಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣವು ಸ್ಥಳಿಯ ಎಸ್‍ಡಿಟಿ ಶಾಲಾ ಮೈದಾನದಲ್ಲಿ ಸೋಮವಾರ ಜರುಗಿತು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾಡಳಿತ ಬೆಳಗಾವಿ, ಇಂಟಿಗ್ರೇಟೆಡ್ ರೂರಲ್ ಡೆವಲಪಮೆಂಟ ಸೆಂಟರ್ ಹುಕ್ಕೇರಿ, ಸಿಡಿಪಿಓ ತಾಲೂಕಾ ಘಟಕ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಪ್ರಬಂದ ಹಾಗೂ ಭಾಷಣ ಸ್ಪರ್ಧೇ ಜರುಗಿದವು.
ಮಕ್ಕಳು ಮದ್ಯಪಾನದ ದಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಸ್ಪರ್ಧೇಯಲ್ಲಿ ಭಾಗವಹಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಧುಪದಾಳ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ವಿಶೇಷವಾಗಿ ಯುವ ಜನಾಂಗ ದುಷ್ಚಟಗಳಿಗೆ ಬಲಿಯಾಗುತ್ತಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕೆಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಶ್ರೀ ಅನ್ನದಾನೇಶ್ವರ ದೇವರು ಆಶೀರ್ವಚನ ನೀಡಿ, ಅತ್ಯಂತ ಚಿಕ್ಕ ವಯಸ್ಸಿನ ಯುವಕರು ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆದೋಲನ ನಡೆಸುವ ಅವಶ್ಯಕತೆ ಇದೆ ಎಂದು ನುಡಿದರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶರಾದ ಅರವಿಂದ ಬಾನೆ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಪ.ಪಂ ಅಧ್ಯಕ್ಷೆ ಸುಜಾತಾ ಪೂಜೇರಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಪ್ರಕಾಶ ಡಾಂಗೆ, ಜಿ.ಎಸ್.ಉಡಿಗೇರಿ, ತಾ.ಪಂ ಸದಸ್ಯ ಲಗಮನ್ನಾ ನಾಗನ್ನವರ, ಗಣೇಶ ಗಾಣಿಗ, ಶಂಕರ ಕುರಣಗಿ, ಪ.ಪಂ ಸದಸ್ಯ ಸಲೀಮ ಕಬ್ಬೂರ, ಮಲ್ಲು ಕೋಳಿ, ಹಿರಿಯರಾದ ಅಲ್ತಾಫ ಉಸ್ತಾದ, ಬಾಹುಬಲಿ ಕಟಹಟ್ಟಿ, ಮಾಹವೀರ ಹುಲ್ಲೋಳಿ, ಸಚಿನ ಖಡಬಡಿ, ದಿಲಾವರ ಬಾಳೇಕುಂದ್ರಿ, ನವೀನ ಹೊಸಮನಿ, ಕೆ.ಬಿ.ಪಾಟೀಲ, ಎಸ್.ಎಚ್.ದೇಸಾಯಿ, ಕೆ.ಡಿ.ವಾಲಿಕಾರ, ಜೆ.ಸಿ.ಮಠಪತಿ, ಎಸ್.ಜಿ.ಅಂಗಡಿ, ಬೆ.ಕೆ.ಕರಿಗಾರ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಎಸ್.ಎಸ್.ಹಿರೇಮಠ ನಿರೂಪಿಸಿ, ವಂದಿಸಿದರು.