RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ

ಗೋಕಾಕ:ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ 

ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ

ಗೋಕಾಕ ಡಿ 11: ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್-2017 ತಾಲೂಕಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳು ರವಿವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಿದವು. ಕಳೆದ ವರ್ಷದ ಚಾಂಪಿಯನ್ ಶ್ರೀರಾಮ ದೊಡಮನಿ ಸ್ಪರ್ಧೆಗಳನ್ನು ಉದ್ಘಾಟಿಸಿದರು.
ಈ ಸ್ಪರ್ಧೆಯಲ್ಲಿ ನಗರದ ಬಾಡಿಲೈನ್ ಜಿಮ್‍ನ ಸುನೀಲ ಬಾಗಲಕೋಟಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಆಯ್ಕೆಗೊಂಡು 75,555ರೂ. ನಗದು ಹಾಗೂ ಟ್ರೋಫಿ ಪಡೆದರು. ಬೆಸ್ಟ ಪೋಜರ್ ಆಗಿ ಮೋಹನ ಗೋಕಾವಿ ಆಯ್ಕೆಗೊಂಡು 10,000ರೂ. ನಗದು ಹಾಗೂ ಟ್ರೋಫಿ ಪಡೆದರು.
ಇನ್ನುಳಿದ ವಿವಿಧ ವಿಭಾಗಗಳಲ್ಲಿ ಆಯ್ಕೆಗೋಂಡ ಸ್ಪರ್ಧಾಳುಗಳ ವಿವರ.
55 ಕೆ.ಜಿ.ವಿಭಾಗ: ಕಲ್ಲೋಳಿ ಬಾಗಲಕೋಟಿ (ಪ್ರಥಮ), ಕಲ್ಲೇಶ ತಳವಾರ(ದ್ವಿತೀಯ), ಅಶ್ವಿನಿಕುಮಾರ ಯಡಹಳ್ಳಿ (ತೃತೀಯ), ಇರ್ಫಾನ್ ಇರಾನಿ(ಚತುರ್ಥ), ಗೋಪಾಲ ಭೋವಿ(5ನೇ ಸ್ಥಾನ).
60 ಕೆಜಿ. ವಿಭಾಗ : ಮೋಹನ ಗೋಕಾವಿ (ಪ್ರಥಮ), ಮಹಾಂತೇಶ ಕುರುಬಗಟ್ಟಿ (ದ್ವಿತೀಯ), ಅಫಸರ ಕಡಲಗಿ (ತೃತೀಯ), ಅಂಬರ್ ಇರಾನಿ (ಚತುರ್ಥ), ಸಂಜು ಶಿಂಗಾಡೆ (5ನೇ ಸ್ಥಾನ)
60 ಕೆಜಿ.ಗೆ ಮೇಲ್ಪಟ್ಟ ವಿಭಾಗ: ಸುನೀಲ ಬಾಗಲಕೋಟಿ (ಪ್ರಥಮ), ಅನೀಲಕುಮಾರ ಕಟ್ಟೀಮನಿ (ದ್ವಿತೀಯ), ಪರುಶರಾಮ ಪುಡಕಲಕಟ್ಟಿ (ತೃತೀಯ), ಪರುಶರಾಮ ಹಳ್ಳೂರ (ಚತುರ್ಥ), ಮಹಾನಿಂಗ ಬಂಗಾರಿ (5ನೇ ಸ್ಥಾನ) ಈ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಥಮ 5000ರೂ., ದ್ವಿತೀಯ 4000ರೂ., ತೃತೀಯ 3000ರೂ., ಚತುರ್ಥ 2000ರೂ. ಹಾಗೂ 5ನೇ ಸ್ಥಾನಕ್ಕೆ 1000ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘಟಕರಾದ ಎಸ್.ಎ.ರಾಮಗಾನಟ್ಟಿ, ರಿಯಾಜ ಚೌಗಲಾ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ತೀರ್ಪುಗಾರರಾದ ಗಂಗಾಧರ ಎಂ., ಪ್ರಶಾಂತ ಸುಗಂಧಿ, ಬಸವರಾಜ ಅರಳೀಮಟ್ಟಿ, ಸುನೀಲ ರಾಹುತ, ಸುನೀಲ ಪವಾರ, ಕಾಟೇಶ ಗೋಕಾವಿ, ರಮೇಶ ಕಳ್ಳೀಮನಿ, ಸಂಜಯ ದೊಡಮನಿ, ಮಹೇಶ ಸಾತಪುತ, ಎ.ಆರ್.ಪುಡಕಲಕಟ್ಟಿ, ಎ.ಜಿ.ಕೋಳಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

Related posts: