RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನ್ಯಾಯವಾದಿಗಳ ಸಂಘದ ಅಧ್ಯಕ್ಷರ ನೇತೃತ್ವದಲ್ಲಿಯೇ ಜಿಲ್ಲಾ ಹೋರಾಟ

ಗೋಕಾಕ:ನ್ಯಾಯವಾದಿಗಳ ಸಂಘದ ಅಧ್ಯಕ್ಷರ ನೇತೃತ್ವದಲ್ಲಿಯೇ ಜಿಲ್ಲಾ ಹೋರಾಟ 

ನ್ಯಾಯವಾದಿಗಳ ಸಂಘದ ಅಧ್ಯಕ್ಷರ ನೇತೃತ್ವದಲ್ಲಿಯೇ ಜಿಲ್ಲಾ ಹೋರಾಟ

ಗೋಕಾಕ ಡಿ 11: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆ ಘೋಷಿಸಲು ಆಗ್ರಹಿಸಿ ನಡೆಯುವ ಹೋರಾಟದ ಸಂಬಂಧವಾಗಿ ನ್ಯಾಯವಾದಿಗಳ ಸಂಘದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೋರಾಟದ ನೇತೃತ್ವವನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಅವರೇ ವಹಿಸಿಕೊಳ್ಳಬೇಕೆಂದು ಸೋಮವಾರದಂದು ನಡೆದ ನ್ಯಾಯವಾದಿಗಳ ಸಂಘದ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಕೊಳ್ಳಲಾಗಿದೆ.

ಜಿಲ್ಲಾ ಹೋರಾಟದ ರೂಪುರೇಷೆ ರೂಪಿಸಲು ನಾಳೆ ದಿ. 12ರಂದು ಮುಂಜಾನೆ 11 ಗಂಟೆಗೆ ನಗರದ ಶೂನ್ಯ ಸಂಪಾದನ ಮಠದಲ್ಲಿ ಕರೆಯಲಾಗಿರುವ ಪೂರ್ವಭಾವಿ ಸಭೆಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಪಾಲ್ಗೊಳ್ಳಬೇಕೆಂದು ನಿರ್ಧರಿಸಲಾಗಿದೆ.
ಸಭೆಯಲ್ಲಿ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಗಿಡ್ಡನವರ, ಹಿರಿಯ ನ್ಯಾಯವಾದಿ, ಬಿ.ಆರ್.ಕೊಪ್ಪ, ಸಿ.ಡಿ.ಹುಕ್ಕೇರಿ, ಕೆ.ಆರ್.ಪವಾರ, ಬಿ.ಆರ್.ಕೊಟಗಿ, ಬಿ.ಟಿ.ಬೀರನಗಡ್ಡಿ, ಎಸ್.ಎಂ ತಿಗಡಿ, ಆರ್.ಎಸ್.ನಿಡಸೋಸಿ, ಎಂ.ಐ.ಯಕ್ಕುಂಡಿ, ಜಿ.ಎಸ್.ನಂದಿ, ಎಲ್.ಎನ್.ಬೂದಿಗೊಪ್ಪ, ಬಿ.ಬಿ.ಮರೆಪ್ಪಗೋಳ, ಬಿ.ಆರ್.ಕಾಪಸಿ, ಡಿ.ವಾಯ್ .ಖಂಡೇಪಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: