ಬೆಳಗಾವಿ:ಪ್ರೇಮಿಗಳನ್ನು ಕಾಡಿ ವಿಡಿಯೋ ಮಾಡಿದ ಕಿರಾತಕರನ್ನು ಅಂದರ ಮಾಡಿದ ಬೆಳಗಾವಿ ಪೊಲೀಸರು
ಪ್ರೇಮಿಗಳನ್ನು ಕಾಡಿ ವಿಡಿಯೋ ಮಾಡಿದ ಕಿರಾತಕರನ್ನು ಅಂದರ ಮಾಡಿದ ಬೆಳಗಾವಿ ಪೊಲೀಸರು
ಬೆಳಗಾವಿ ಡಿ 13: ಕಳೆದ ಎರೆಡು ದಿನಗಳ ಹಿಂದೆ ನಿರ್ಜನ ಪ್ರದೇಶದಲ್ಲಿ ಏಕಾಂತದಲ್ಲಿದ ಪ್ರೇಮಿಗಳ ಮೇಲೆ ದಾಳಿ ಮಾಡಿದ ಕಿರಾತಕರ ತಂಡವೊಂದನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ
ನಗರದ ಸಿಪಿಎಡ್ ಮೈದಾನದ ಬಳಿಯ ನಿರ್ಜನ ಪ್ರದೇಶದಲ್ಲಿ ಪ್ರೇಮಿಗಳ ಮೇಲೆ ಐವರು ಯುವಕರ ಗುಂಪು ದಾಳಿ ನಡೆಸಿ, ಯುವತಿ ಕೈಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಬಳಿಕ, ಚೂರಿ ತೋರಿಸಿ ಮದುವೆ ಮಾಡಿಸುತ್ತೇವೆ ಎಂಬ ಬೆದರಿಕೆಯನ್ನೂ ಹಾಕಿದ್ದು, ಹಣ, ಚಿನ್ನಾಭರಣ ನೀಡುವಂತೆ ಒತ್ತಾಯಿಸಿದ್ದಾರೆ. ಇದೆಲ್ಲವನ್ನು ದುರುಳರು ವಿಡಿಯೋ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕೀಚಕರು ಚಿತ್ರಿಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯ ಎಸಗಿದವರು ಬೆಳಗಾವಿ ನಗರದವರೇ ಎಂದು ತಿಳಿದುಬಂದಿದ್ದು, ಬಂಧಿತರ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಕ್ಯಾಂಪ್ ಪೊಲೀಸರು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ