RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕಾವೇರಿದ ಗೋಕಾಕ ಜಿಲ್ಲಾ ಹೋರಾಟ : ದಿ .15 ಗೋಕಾಕ ಬಂದ್ ಕರೆಗೆ ಪಕ್ಷಾತೀತ ಬೆಂಬಲ : ಅಶೋಕ ಪೂಜಾರಿ

ಗೋಕಾಕ:ಕಾವೇರಿದ ಗೋಕಾಕ ಜಿಲ್ಲಾ ಹೋರಾಟ : ದಿ .15 ಗೋಕಾಕ ಬಂದ್ ಕರೆಗೆ ಪಕ್ಷಾತೀತ ಬೆಂಬಲ : ಅಶೋಕ ಪೂಜಾರಿ 

ಕಾವೇರಿದ ಗೋಕಾಕ ಜಿಲ್ಲಾ ಹೋರಾಟ : ದಿ .15  ಗೋಕಾಕ ಬಂದ್ ಕರೆಗೆ  ಪಕ್ಷಾತೀತ ಬೆಂಬಲ : ಅಶೋಕ ಪೂಜಾರಿ

ಗೋಕಾಕ 13: ಸರಕಾರ ನೇಮಿಸಿದ ವರದಿಗಳ ಆಧರಿಸಿ ಈ ಹಿಂದೆಯೇ ಜೆ.ಎಚ್. ಪಟೇಲರವರು ಮುಖ್ಯಮಂತ್ರಿಗಳಾಗಿದ್ದಾಗ ಘೋಷಿಸಿದ್ದ ಗೋಕಾಕನ್ನು ಕೂಡಲೇ ಜಿಲ್ಲಾ ಕೇಂದ್ರವನ್ನಾಗಿ ಪುನಃ ಘೋಷಿಸಬೇಕೆಂದು ಆಗ್ರಹಿಸಿ ಇದೇ ಶುಕ್ರವಾರ ದಿನಾಂಕ: 15-12-2017 ರಂದು ಗೋಕಾಕ ಬಂದ್ ಕರೆಗೆ ಸಂಪೂರ್ಣ ಬೆಂಬಲ ನೀಡಲು ತಾಲೂಕಿನ ಮುಖಂಡರು ಪಕ್ಷಾತೀತವಾಗಿ ನಿರ್ಧರಿಸಲಾಗಿದೆ ಎಂದು ಬಿ.ಜೆ.ಪಿ. ಮುಖಂಡ ಈರಣ್ಣಾ ಕಡಾಡಿ ಮತ್ತು ಅಶೋಕ ಪೂಜಾರಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ಇಂದು ತಮ್ಮ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಗೋಕಾಕ ಜಿಲ್ಲಾ ರಚನೆಯ ಬೇಡಿಕೆ ಅತ್ಯಂತ ನಾಯಸಮ್ಮತವಾಗಿದೆ. ಆಢಳಿತಾತ್ಮಕ ದೃಷ್ಠಿಯಿಂದ ಗೋಕಾಕನ್ನು ಜಿಲ್ಲಾ ಕೇಂದ್ರ ಸ್ಥಳವನ್ನಾಗಿ ಘೋಷಿಸುವುದು ಅತ್ಯಂತ ಅವಶ್ಯಕವಾಗಿದೆ. ಆದರೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯೋ? ಅಥವಾ ಇನ್ನಾವುದೇ ಕಾರಣದಿಂದ ಜಿಲ್ಲಾ ರಚನೆಯ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಆದರೆ ಗೋಕಾಕ ತಾಲೂಕಿನ ಜನತೆ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಎಂತಹ ಹೋರಾಟಕ್ಕೂ ಸನ್ನದ್ಧವಾಗಿದೆ ಎಂದು ಅವರುಗಳು ತಿಳಿಸಿದರು.
ದಿನಾಂಕ: 15 ರಂದು ನಡೆಯಲಿರುವ ಗೋಕಾಕ ಬಂದ್‍ಗೆ ಯಾವುದೇ ಬಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಠ ಪಡಿಸಿದ ಅವರು ಜಿಲ್ಲಾ ರಚನೆಯ ಹೋರಾಟದ ರೂಪರೇಷಗಳಲ್ಲಿ ತಾತ್ಕಾಲಿಕ ವೈಚಾರಿಕವಾದ ವೈಪರಿತ್ಯಗಳು ಇರಬಹುದು. ಆದರೆ ಗೋಕಾಕ ಜಿಲ್ಲಾ ರಚನೆಯ ವಿಚಾರಧಾರೆಯಲ್ಲಿ ಎಲ್ಲ ಮುಖಂಡರುಗಳು ಒಂದಾಗಿದ್ದೇವೆ ಎಂದು ಸ್ಪಷ್ಠಪಡಿಸಿದರು. ಗೋಕಾಕ ಜಿಲ್ಲೆ ರಚನೆಯಾಗುವವರೆಗೆ ನಮ್ಮ ಒಮ್ಮನಸ್ಸಿನ ಸಾಂಗೀಕ ಹೋರಾಟ ನಿಶ್ಚಿತ ಎಂದು ದೃಢಸಂಕಲ್ಪದಿಂದ ಹೇಳಿದರು. ನ್ಯಾಯವಾದಿಗಳ ಸಂಘ ಕರೆ ನೀಡಿರುವ ಈ ಬಂದ್ ಕರೆಯ ಹೋರಾಟದಲ್ಲಿ ತಾಲೂಕಿನ ಎಲ್ಲ ಮಠಾಧೀಶರುಗಳು, ತಾಲೂಕಿನ ಶಾಸಕರುಗಳು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ಮುಖಂಡರುಗಳು, ಸಂಘ ಸಂಸ್ಥೆಗಳ ಪ್ರಮುಖರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪತ್ರಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಎಮ್.ಎಲ್. ಮುತ್ತೆನ್ನವರ, ಕಾಂಗ್ರೇಸ್ ಮುಖಂಡ ರಮೇಶ ಉಟಗಿ, ಲಕ್ಕಣ್ಣ ಸವಸುದ್ದಿ, ಶ್ರೀರಾಮ ಸೇನೆ ಮುಖಂಡ ಸುನೀಲ ಮುರ್ಕಿಭಾಂವಿ, ರಾಜಕೀಯ ಧುರೀಣರುಗಳಾದ ಅಡಿವೆಪ್ಪಾ ಮರಲಿಂಗನ್ನವರ, ಶ್ರೀಮತಿ ಶ್ರೀದೇವಿ ತಡಕೋಡ, ಚಿದಾನಂದ ದೇಮಶಟ್ಟಿ, ಲಕ್ಕಪ್ಪ ತಹಶೀಲ್ದಾರ, ಈರಣ್ಣಾ ಅಂಗಡಿ, ಎಮ್.ಟಿ. ಪಾಟೀಲ, ಶಕೀಲ ದಾರವಾಢಕರ, ಸಂತೋಷ ಹುಂಡೇಕಾರ, ಬಸವರಾಜ ಹುಳ್ಳೇರ, ಲಕ್ಕಪ್ಪ ಬಂಡಿ, ಪ್ರೇಮಾ ಚಿಕ್ಕೋಡಿ, ಸುಭಾಸ ಸಣ್ಣತಿಪ್ಪಗೋಳ, ತವನಪ್ಪ ಬೆನ್ನಾಡಿ, ಮಹಾಂತೇಶ ಪಾಟೀಲ, ಮಾಳಪ್ಪಾ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

Related posts: