ಬೆಳಗಾವಿ:ಮಿ.ಸತೀಶ ಶುಗರ್ಸ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಗಳಿಗೆಸ್ಫೂರ್ತಿಯಾಗಿದೆ : ಅವಿನಾಶ ಪೋತದಾರ್
ಮಿ.ಸತೀಶ ಶುಗರ್ಸ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಗಳಿಗೆಸ್ಫೂರ್ತಿಯಾಗಿದೆ : ಅವಿನಾಶ ಪೋತದಾರ್
ಬೆಳಗಾವಿ ಡಿ 15 : ದೇಹದಾರ್ಢ್ಯ ಸ್ಪರ್ಧೆಗಳು ಕ್ರೀಡಾ ಕ್ಷೇತ್ರದ ಸ್ಫೂರ್ತಿಯಾಗಿವೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ದೇಹದಾರ್ಢ್ಯ ಪಟುಗಳನ್ನು ಪರಿಚಯಿಸಿ ಅವರ ಕ್ರೀಡಾ ಜೀವನಕ್ಕೆ ಬೆನ್ನೆಲುಬಾಗಿರುವ ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಕ್ರೀಡಾ ರಂಗಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಬೆಳಗಾವಿ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಅವಿನಾಶ ಪೋತದಾರ್ ಹೇಳಿದರು.
ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ 10 ನೇ ಮಿ.ಸತೀಶ ಶುಗರ್ಸ ಕ್ಲಾಸಿಕ್-2017 ಮೂರು ದಿನಗಳ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಶುಕ್ರವಾರ ಸಂಜೆ ವಿಧ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ನಾಡಿನ ಅಭಿವೃದ್ಧಿಗೆ ಕೆಲಸ ಮಾಡುತ್ತ ಜನಪ್ರೀತಿ ಸಂಪಾದಿಸಿರುವ ಶಾಸಕ ಸತೀಶ ಜಾರಕಿಹೊಳಿ ಅವರು, ಕಲೆ, ಸಾಹಿತ್ಯ, ಸಂಸ್ಕಂತಿ ಕ್ಷೇತ್ರಗಳ ಜೊತೆಗೆ ಕ್ರೀಡಾ ಕ್ಷೇತ್ರದ ಸಾಧಕರಿಗೂ ಬೆಂಬಲವಾಗಿ ನಿಂತಿದ್ದಾರೆ. ಕಳೆದ 10 ವರ್ಷಗಳಿಂದ ಸತೀಶ್ ಶುಗರ್ಸ್ ದೇಹದಾರ್ಢ್ಯ ಚಾಂಪಿಯನ್‍ಶಿಪ್ ಆಯೋಜಿಸುವ ಮೂಲಕ ಕ್ರೀಡೆಗಳು ಉಳಿದು ಬೆಳೆಯಲು, ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಎಲ್ಲ ನೆರವನ್ನೂ ನೀಡಿದ್ದಾರೆ. ತೆರೆಯ ಹಿಂದೆ ನಿಂತುಕೊಂಡೇ ಅವರು ಕ್ರೀಡಾಳುಗಳಿಗೆ ಸ್ಫೂರ್ತಿ ನೀಡುತ್ತಿರುವುದು ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಅಸೋಶಿಯೇಶನ್‍ನಿಂದ ಮಾನ್ಯತೆ ಪಡೆದ ದೇಹದಾರ್ಢ್ಯ ಚಾಂಪಿಯನ್‍ಶಿಪ್ ಉದ್ಘಾಟಿಸುವುದು ಹೆಮ್ಮೆ ಪಡುವಂಥದು. ಕ್ರೀಡಾ ಸ್ಫೂರ್ತಿ ಪ್ರತಿಭೆಗಳನ್ನು ಬೆಳಕಿಗೆ ತರಲು, ಬೆಳಗಿಸಲು ಸಹಕಾರಿಯಾಗಿರುತ್ತದೆ. ಇದು ದೊಡ್ಡ ಕೆಲಸ ಎಂದು ಪ್ರಶಂಸಿಸಿದರು.
ಒಟ್ಟು 40 ಲಕ್ಷ ರೂ. ಬಹುಮಾನ ಮೊತ್ತದ ಚಾಂಪಿಯನ್‍ಶಿಪ್ ಗೆ ಅದ್ಧೂರಿ ಚಾಲನೆ ದೊರೆಯುವದರೊಂದಿಗೆ ಮೂರು ದಿನಗಳ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳು ಆರಂಭಗೊಂಡವು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಂದರಗಿ ಕ್ರೀಡಾ ಶಾಲೆಯ ಮುಖ್ಯಸ್ಥರಾದ ಎಸ್.ಜಿ. ಬಾಳೆಕುಂದ್ರಿ, ಬಾಡಿ ಬಿಲ್ಡಿಂಗ್ ಅಸೋಶಿಯೇಶನ್ ಕಾರ್ಯದರ್ಶಿ ಅಜಿತ್ ಸಿದ್ದನ್ನವರ, ಚಾಂಪಿಯನ್‍ಶಿಪ್ ಸಂಘಟನೆಯಲ್ಲಿ ಸಕ್ರೀಯರಾಗಿರುವ ಕಲಾವಿದ ರಿಯಾಜ್ ಚೌಗುಲಾ, ಎಂ.ಕೆ. ಗುರವ್, ಮಹೇಶ ಸಾತ್ಪುತೆ, ಸಂಜಯ ದೇವರಮನಿ, ಎಸ್.ಎ.ರಾಮಗಾನಟ್ಟಿ, ಶರದ ಪೈ, ರಮೇಶ್ ಕಳ್ಳಿಮನಿ, ಎಂ.ಗಂಗಾಧರ್, ಕಳೆದ ಬಾರಿಯ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಾಂತ್ ಕನ್ನೂಕರ್ ಮತ್ತಿತರರು ಇದ್ದರು.