ಗೋಕಾಕ:ಪರೇಶ ಮೆಸ್ತಾ ಹತ್ಯೆ ಖಂಡಿಸಿ ವಿಹಿಂಪ , ಬಜರಂಗದಳ ಕಾರ್ಯಕರ್ತರಿಂದ ಪ್ರತಿಭಟನೆ
ಪರೇಶ ಮೆಸ್ತಾ ಹತ್ಯೆ ಖಂಡಿಸಿ ವಿಹಿಂಪ , ಬಜರಂಗದಳ ಕಾರ್ಯಕರ್ತರಿಂದ ಪ್ರತಿಭಟನೆ
ಗೋಕಾಕ ಡಿ 16 : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಇತ್ತಿಚೆಗೆ ನಡೆದ ಪರೇಶ ಮೇಸ್ತ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗ ದಳ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ನಗರದ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲದಾರ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು
ಹೊನ್ನಾವರದಲ್ಲಿ ನಡೆದ ಪರೇಶ ಮೇಸ್ತ ಅವರ ಹತ್ಯೆ ಪ್ರಕರಣ ಅಲ್ಲಿಯೇ ಪೋಲಿಸ್ ವ್ಯವಸ್ಥೆಯ ವೈಪಲ್ಯವೇ ಮೂಲ ಕಾರಣವಾಗಿದ್ದು, ಅಲ್ಲದೇ ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಸರಣಿ ಹತ್ಯೆಗಳು ನಡೆಯುತ್ತಿದ್ದು, ಇದಕ್ಕೆಲ್ಲಾ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ತುಷ್ಟಿಕರಣವೇ ಮೂಲ ಕಾರಣವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಎಚ್ಚೆತ್ತು ಕೃತ್ಯಗಳನ್ನು ಎಸಗಿದವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ
ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹೊನ್ನಾವರದಲ್ಲಿ ಕೇವಲ 18 ರ ಹದಿಹರೆಯದ ಯುವಕನ ಕೊಲೆ ಮಾಡಲಾಗಿದೆ. ಇಂತಹ ದೇಶದ್ರೋಹಿಗಳನ್ನು, ಹಿಂದೂ ವಿರೋಧಿಗಳನ್ನು ಸರಕಾರ ನಿಯಂತ್ರಿಸಲು ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವಿಎಚ್‍ಪಿ ಬೆಳಗಾವಿ ವಿಭಾಗ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ , ಬಜರಂಗ ದಳದ ಜಿಲ್ಲಾ ಸಂಚಾಲಕ ಸದಾಶಿವ ಗುದುಗಗೋಳ , ಗುರು ಬೆನವಾಡ , ಸಂತೋಷ ಗೊಂಧಳಿ , ನಾಮದೇವ ಚಿರ್ಕೋಡೆ , ಕಿರಣ ಮೀರಜಕರ , ಪಿಂಟು ಓಸ್ವಾಲ , ಶಿವಲಿಂಗ ಮಾಯಗೊಂಡ , ಲಕ್ಷ್ಮಣ ಮೀಶಾಳೆ ಸೇರಿದಂತೆ ಅನೇಕರು ಇದ್ದರು