ಗೋಕಾಕ:ನಾಳಿನ ಕೌಜಲಗಿ ಬಂದಗೂ, ಚಾಲನಾ ಸಮಿತಿಗೂ ಯಾವುದೆ ಸಂಬಂಧ ವಿಲ್ಲಾ : ಸಣ್ಣಕ್ಕಿ ಸ್ವಷ್ಟನೆ
ನಾಳಿನ ಕೌಜಲಗಿ ಬಂದಗೂ, ಚಾಲನಾ ಸಮಿತಿಗೂ ಯಾವುದೆ ಸಂಬಂಧ ವಿಲ್ಲಾ : ಸಣ್ಣಕ್ಕಿ ಸ್ವಷ್ಟನೆ
ಗೋಕಾಕ ಡಿ 18: ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಸರ್ಕಾರವನ್ನು ಆಗ್ರಹಪಡಿಸಲು ನಾಳೆ ದಿ. 19 ರಂದು ಸಂಘಟನೆಯೊಂದು ಕೌಜಲಗಿ ಬಂದ್‍ಗೆ ಕರೆ ನೀಡಿದ್ದು, ಈ ಬಂದ್ ಕಾರ್ಯಕ್ರಮಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಚಾಲನಾ ಸಮೀತಿ ತಿಳಿಸಿದೆ.
ಈ ಬಗ್ಗೆ ಜಂಟಿ ಪ್ರಕಟಣೆ ನೀಡಿರುವ ಸಮೀತಿಯ ಅಧ್ಯಕ್ಷ ಎಂ.ಆರ್. ಭೋವಿ, ಪ್ರಧಾನ ಕಾರ್ಯದರ್ಶಿ ಡಾ.ರಾಜೇಂದ್ರ ಸಣ್ಣಕ್ಕಿ, ಕಾರ್ಯಾಧ್ಯಕ್ಷ ಎ.ಎ. ಪರುಶೆಟ್ಟಿ, ಉಪಾಧ್ಯಕ್ಷ ಶಿವಾನಂದ ಲೋಕನ್ನವರ ಅವರು ಕೌಜಲಗಿ ತಾಲೂಕು ಆಗಬೇಕೆಂಬುದು ಕಳೆದ 4 ದಶಕಗಳ ಹೋರಾಟವಾಗಿದೆ. ಈ ಹೋರಾಟವನ್ನು ನಾವೆಲ್ಲರೂ ಪಕ್ಷಾತೀತವಾಗಿ ಮಾಡಿಕೊಂಡು ಬಂದಿರುತ್ತೇವೆ. ಆದರಿಂದು ಕೌಜಲಗಿಯಲ್ಲಿ ಸಂಘಟನೆಯೊಂದು ಬಂದ್‍ಗೆ ಕರೆ ನೀಡಿದೆ. ಚಾಲನಾ ಸಮೀತಿಗೂ ಆ ಸಂಘಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಸಮೀತಿಯ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಡಿ.21 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗೋಕಾಕ ನಗರಕ್ಕೆ ಆಗಮಿಸುತ್ತಿರುವುದರಿಂದ ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಚಾಲನಾ ಸಮೀತಿಯಿಂದ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೂ ಸಹ ಮನವಿ ಸಲ್ಲಿಸಲಾಗುವುದು ಎಂದು ಸಮೀತಿಯ ಮುಖಂಡರು ತಿಳಿಸಿದ್ದಾರೆ.