RNI NO. KARKAN/2006/27779|Monday, January 6, 2025
You are here: Home » breaking news » ಗೋಕಾಕ:ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ನಾಳೆ ಸಾಂಕೇತಿಕ ಧರಣಿ

ಗೋಕಾಕ:ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ನಾಳೆ ಸಾಂಕೇತಿಕ ಧರಣಿ 

ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ನಾಳೆ ಸಾಂಕೇತಿಕ ಧರಣಿ

ಗೋಕಾಕ ಡಿ 19: ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಹಾಗೂ ಸ್ಥಳೀಯ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ದಿ. 20 ರಂದು ಬಸವೇಶ್ವರ ವೃತ್ತದಲ್ಲಿ ಒಂದು ದಿನ ಸಾಂಕೇತಿಕ ಧರಣಿ ಬೆಳಿಗ್ಗೆ 11 ಗಂ ನಡೆಯಲಿದೆ.

ಮಂಗಳವಾರದಂದು ಸಂಜೆ ಜಿಲ್ಲಾ ಹೋರಾಟಕ್ಕೆ ಸಂಭಂದಿಸಿದಂತೆ ಇಲ್ಲಿಯ ಶೂನ್ಯ ಸಂಪಾದನಮಠದಲ್ಲಿ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಮತ್ತು ನ್ಯಾಯವಾದಿಗಳ ಸಂಘದಿಂದ ಸಭೆ ನಡೆಸಿ ಈ ತಿರ್ಮಾನ ಕೈಗೊಳ್ಳಲಾಯಿತು.

ದಿ.20 ರಂದು ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ನಡೆಯಲಿರುವ ಒಂದು ದಿನ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ತಾಲೂಕಿನ ಮಠಾಧೀಶರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಕನ್ನಡಪರ ಹಾಗೂ ವಿವಿಧ ಸಂಘಟನೆಗಳು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಚಾಲನಾ ಸಮಿತಿ ಅಧ್ಯಕ್ಷರು ಶ್ರೀ ಮುರುಘರಾಜೇಂದ್ರ ಸ್ವಾಮಿಜಿಯವರು ಹಾಗೂ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಸಿ ಬಿ ಗಿಡ್ಡನವರ ತಿಳಿಸಿದ್ದಾರೆ.

ಈ ಸಭೆಯಲ್ಲಿ ಮಾಜಿ ಜಿಪಂ ಅಧ್ಯಕ್ಷ ಬಸಗೌಡ ಪಾಟೀಲ, ಪ್ರಭಾ ಶುಗರ್ಸ ಅಧ್ಯಕ್ಷ ಅಶೋಕ ಪಾಟೀಲ, ನಗರಸಭೆ ಹಿರಿಯ ಸದಸ್ಯ ಎಸ್ ಎ ಕೋತವಾಲ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಡಿ ವಾಯ್ ಖಂಡೇಪಟ್ಟಿ, ಡಿ ಎಮ್ ಮಡಿವಾಳರ, ನ್ಯಾಯವಾದಿಳಾದ ಜಿ ಆರ್ ಪೂಜೇರ, ಜಿ ಎಸ್ ನಂದಿ, ಬಿ ಆರ್ ತೋಟಗಿ, ಸಿ ಡಿ ಹಕ್ಕೇರಿ, ವಿಷ್ಣು ಲಾತೂರ, ಬಿ ಬಿ ಮರೇಪ್ಪಗೋಳ, ಕೆ ಆರ್ ಪವಾರ್, ಎಸ್ ಆರ್ ನಾಯಿಕ, ಶಂಕರ ಧರೆನ್ನವರ, ನಗರಸಭೆ ಸದಸ್ಯರಾದ ಭೀಮಶಿ ಭರಮನ್ನವರ, ಜಯಾನಂದ ಹುಣಶ್ಯಾಳಿ, ಪರಶುರಾಮ ಭಗತ, ಮುರುಘೇಶ ಹುಕ್ಕೇರಿ, ಶಿವಾನಂದ ಹತ್ತಿ ಸೇರಿದಂತೆ ಅನೇಕರು ಇದ್ದರು.

Related posts: