RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ಪ್ರಯತ್ನ ಮಾಡಿ : ಪುರಸಭೆ ಸದಸ್ಯರಿಗೆ ಶಾಸಕ ಬಾಲಚಂದ್ರ ಕಿವಿ ಮಾತು

ಮೂಡಲಗಿ:ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ಪ್ರಯತ್ನ ಮಾಡಿ : ಪುರಸಭೆ ಸದಸ್ಯರಿಗೆ ಶಾಸಕ ಬಾಲಚಂದ್ರ ಕಿವಿ ಮಾತು 

ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ಪ್ರಯತ್ನ ಮಾಡಿ : ಪುರಸಭೆ ಸದಸ್ಯರಿಗೆ ಶಾಸಕ ಬಾಲಚಂದ್ರ ಕಿವಿ ಮಾತು

ಮೂಡಲಗಿ ಡಿ 19 : ಸಾರ್ವಜನಿಕರ ಕುಂದು ಕೊರತೆಗಳಿಗೆ ಪುರಸಭೆ ಸದಸ್ಯರು ಸ್ಪಂದಿಸುವ ಮೂಲಕ ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಸರಕಾರದಿಂದ ಬರುವ ಹಲವಾರು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ಪ್ರಯತ್ನ ಮಾಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸದಸ್ಯರಿಗೆ ಕಿವಿ ಮಾತು ಹೇಳಿದರು.

ಅವರು ಮೂಡಲಗಿಯ ಗವಿ ಮಠದಲ್ಲಿ ಮಂಗಳವಾರದಂದು ಜರುಗಿದ ಜನ ಸಂಪರ್ಕ ಸಭೆಯಲ್ಲಿ ಮಾತನಾಡುತ್ತಿದ್ದರು.

ಇಲ್ಲಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ್ದೇನೆ. ಅದರಲ್ಲಿ ಬಹುತೇಕರು ನಿವೇಶನವನ್ನು ಕೇಳಿದ್ದಾರೆ. ಆದರೆ ಮೂಡಲಗಿ ತಾಲೂಕು ಕೇಂದ್ರವಾಗಿರುವದರಿಂದ ಇಲ್ಲಿಯ ನಿವೇಶನಗಳಿಗೆ ಈಗ ಬಂಗಾರದ ಬೆಲೆ ಬಂದಿದೆ. ಜಾಗೆಯ ಸಮಸ್ಯೆಯು ಕೂಡಾ ಇದೆ. ಹೀಗಾಗಿ ಅಂತಹ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಯಾವುದಾದರೂ ಪರ್ಯಾಯ ವ್ಯವಸ್ಥೆ ಮಾಡಲಾಗುವದು. ಸಾರ್ವಜನಿಕರಿಂದ ಬಂದ ಅಹವಾಲುಗಳಲ್ಲಿ ಅರ್ಧದಷ್ಟು ಎರಡು ತಿಂಗಳ ಒಳಗೆ ಪರಿಹಾರ ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಮುಂದಿನ ಜ.1 ರಿಂದ ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿ ಕಾರ್ಯಾರಂಭ ಮಾಡಲಿದೆ. ತಾಲೂಕಾ ಮಟ್ಟದ ಕೆಲ ಸರಕಾರಿ ಕಛೇರಿಗಳು ಆರಂಭವಾಗಲಿವೆ. ಮೂಡಲಗಿ ತಾಲೂಕು ದೃಷ್ಠಿಯನ್ನಿಟ್ಟುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವಶ್ಯಕತೆ ಇದೆ ಎಂದು ಸೂಚಿಸಿದರು.
ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷ ವೀರಣ್ಣಾ ಹೊಸೂರ, ರಾಮಚಂದ್ರ ಬಡಗನ್ನವರ, ಪುರಸಭೆ ಅಧ್ಯಕ್ಷೆ ಕಮಲವ್ವಾ ಹಳಬರ, ಉಪಾಧ್ಯಕ್ಷ ರವಿ ಸೋನವಾಲ್ಕರ, ರವಿ ಸಣ್ಣಕ್ಕಿ, ರಾಮಣ್ಣಾ ಹಂದಿಗುಂದ, ಸಂತೋಷ ಸೋನವಾಲ್ಕರ, ಈರಣ್ಣಾ ಬನ್ನೂರ, ಪ್ರಭು ಬಂಗೆನ್ನವರ, ಜಿ.ಟಿ.ಸೋನವಾಲ್ಕರ, ಬಿ.ಎಚ್.ಸೋನವಾಲ್ಕರ, ರಮೇಶ ಸಣ್ಣಕ್ಕಿ, ಅಜಿಜ ಡಾಂಗೆ, ಎನ್.ಎಮ್.ಥರಥರಿ, ಶಿವು ಚಂಡಕಿ, ಮಲ್ಲಿಕ ಹುಣಶ್ಯಾಳ, ಡಾ: ಎಸ್.ಎಸ್.ಪಾಟೀಲ, ಶಂಕರ ತಾಂವಶಿ, ಕಾಡಪ್ಪ ಮಗದುಮ್ಮ, ರಾಜು ಪೂಜೆರಿ, ರಾಚಪ್ಪ ಬೆಳಕುಡ, ಸತ್ತೇಪ್ಪ ವಾಲಿ, ಅಜ್ಜಪ್ಪ ಹುಣಶ್ಯಾಳ, ಡ್ಯಾನಿಯಲ್ ಬಾಬು, ಮರೆಪ್ಪ ಮರೆಪ್ಪಗೋಳ, ಝಂಡೆಕುರಬರ, ಪುರಸಭೆ ಸರ್ವ ಸದಸ್ಯರು ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪಧಾದಿಕಾರಿಗಳು ಮತ್ತು ವಿವಿಧ ಸಮಾಜದ ಮುಖಂಡರು ಸತ್ಕರಿಸಿದರು.

Related posts: