RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಬಿಜೆಪಿ ಅವರದ್ದು ಬರಿ ಮನ ಕೀ ಬಾತ , ನಮ್ಮದು ಕಾಮ ಕೀ ಬಾತ : ಸಿ.ಎಂ. ಸಿದ್ದರಾಮಯ್ಯ ವ್ಯಂಗ್ಯ

ಗೋಕಾಕ:ಬಿಜೆಪಿ ಅವರದ್ದು ಬರಿ ಮನ ಕೀ ಬಾತ , ನಮ್ಮದು ಕಾಮ ಕೀ ಬಾತ : ಸಿ.ಎಂ. ಸಿದ್ದರಾಮಯ್ಯ ವ್ಯಂಗ್ಯ 

ಬಿಜೆಪಿ ಅವರದ್ದು ಬರಿ ಮನ ಕೀ ಬಾತ , ನಮ್ಮದು ಕಾಮ ಕೀ ಬಾತ : ಸಿ.ಎಂ. ಸಿದ್ದರಾಮಯ್ಯ ವ್ಯಂಗ್ಯ

ಗೋಕಾಕ ಡಿ 21: ಪ್ರಧಾನಿ ನರೇಂದ್ರ ಮೋದಿ ಅವರದ್ದು ಬರೀ ಮನಕೀ ಬಾತ ನಮ್ಮದು ಕಾಮ ಕೀ ಬಾತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಕುರಿತು ವ್ಯಂಗವಾಡಿದರು

ಅವರು ಗುರುವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗೋಕಾಕ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಮತ್ತು ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು

ಕಳೆದ ಐದು ವರ್ಷಗಳಿಂದ ರಾಜ್ಯವನ್ನಾಳುತ್ತಿರುವ ಕಾಂಗ್ರೆಸ್ ಸರಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದ್ದು ಅವರಿಗಾಗಿ ಕ್ಷೀರಭಾಗ್ಯ, ಅನ್ನಭಾಗ್ಯ, ಯಶಸ್ವಿನಿ ,ಮನಸ್ವನೀಯ , ಶೂಭಾಗ್ಯ, ಆರೋಗ್ಯ ಭಾಗ್ಯ , ಸೇರಿದಂತೆ ಹತ್ತಾರು ಯೋಜನೆಗಳನ್ನು ಯಶ್ವಸಿಯಾಗಿ ಜಾರಿಗೋಳಿಸಿದೆ , ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಅಚ್ಛೇ ದಿನ ಆಯೇಂ ಎಂದು ಮೋಸ ಮಾಡುತ್ತಿದ್ದಾರೆ .

ದೇಶದಲ್ಲಿ ಬಡವರಿಗೆ ಅಚ್ಚೇ ದಿನ ಬರದೆ ಬರಿ ಅಂಭಾನಿ , ಅಂಧಾನಿ , ಬಾಬಾ ರಾಮದೇವ ರಂತಹ ಶ್ರೀಮಂತರಿಗೆ ಮಾತ್ರ ಅಚ್ಚೇ ದಿನ ಬಂದಿವೆ 


3 ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ , 50 ಸಾವಿರ ವರೆಗೆ ಸಾಲಮನ್ನಾ ಮಾಡಿದ ಹೆಮ್ಮೆ ನಮ್ಮದು , ರಾಷ್ಟ್ರೀಕೃತ ಬ್ಯಾಂಕಗಳಲ್ಲಿಯ ಸಾಲಮನ್ನಾ ಮಾಡಿ ಎಂದು ಮೋದಿ ಅವರ ಬಳಿ ನಿಯೋಗ ಹೋದಾಗ ಬಿಜೆಪಿಯ ಯಡಿಯೂರಪ್ಪ ಅವರು ತೂಟಿ ಪೀಟ್ಟಕನ್ನದೇ ಸುಮ್ಮನಿದ್ದು ಈಗ ಕಾಂಗ್ರೆಸ್ ಏನು ಮಾಡಿಲ್ಲ ಎನ್ನುವುದು ಸರಿಯಲ್ಲ ಎಂದ ಸಿದ್ದರಾಮಯ್ಯ ಮನಮೋಹನ್ ಸಿಂಗ ಸರಕಾರ ವಿದ್ದಾಗ 78 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಸಾಲಮನ್ನಾ ಮಾಡುವುದನ್ನು ಬಿಟ್ಟು ವಿದೇಶ ಸುತ್ತುವುದು ಮತ್ತು ಮನ್ ಕೀ ಬಾತ ಹೇಳುವುದು ಮಾಡುತ್ತಿದ್ದಾರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಕ್ಷದ ಕಾರ್ಯಕರ್ತರು ಸನ್ಮಾನಿಸುತ್ತಿರುವುದು

ಕರ್ನಾಟಕವು ಕನಕ ,ವಾಲ್ಮೀಕಿ , ವಿವೇಕಾನಂದ , ಸೂಫೀ ಸಂತರ ನಾಡು ಇಲ್ಲಿ ಬಿಜೆಪಿಯ ಅಮಿತ ಶಾ , ಮೋದಿ ಅವರ ಆಟ ನಡೆಯದು ಕರ್ನಾಟಕದಲ್ಲಿ ಯಾವುದೆ ಬದಲಾವಣೆ ಯಾಗುವುದಿಲ್ಲಾ ಯಡಿಯೂರಪ್ಪ ಅವರ 150 ಮೀಷನ್ ಈಗ ಟೂಸ ಆಗಿ ಬರೀ 50 ಗೆ ಬಂದು ನಿಂತಂತಾಗಿದೆ ಎಂದ ಸಿದ್ದರಾಮಯ್ಯ ಪ್ರತಿ ವರ್ಷ 2 ಸಾವಿರ ಉದ್ಯೋಗ ಸೃಷ್ಟಿ ಮಾಡುತ್ತೆವೆಂದು ಹೇಳಿದ ಮೋದಿ ಮೂರು ವರ್ಷಗಳಲ್ಲಿ 2 ಸಾವಿರ ಉದ್ಯೋಗ ಸೃಷ್ಟಿಸಲು ಸಾಧ್ಯ ವಾಗಲಿಲ್ಲಾ ಆದರೆ ಕಾಂಗ್ರೆಸ್ ಪಕ್ಷ 14 ಲಕ್ಷ ಉದ್ಯೋಗ ಸೃಷ್ಟಿ ಮಾಡಿದೆ ಎಂದು ರಿರ್ಜವ ಬ್ಯಾಂಕ್ ಆಫ್ ಇಂಡಿಯಾ ಸ್ವಷ್ಟ ಪಡಿಸಿದನ್ನು ಗಮನಿಸಬಹುದೆಂದ ಮುಖ್ಯಮಂತ್ರಿ ಯವರು ರಾಜ್ಯದಲ್ಲಿ ಬಿಜೆಪಿಯವರು ಅಬಿವೃದ್ದಿ ಕಾರ್ಯಗಳನ್ನು ಮಾಡದೆ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ , ಧರ್ಮದ ಹೆಸರಿನಲ್ಲಿ , ಜಾತಿಗಳ ಹೆಸರಿನಲ್ಲಿ ಜಗಳ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು

ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಿ.ಎಂ ಸಿದ್ದರಾಮಯ್ಯ

ಹಸಿವು ಮುಕ್ತ ಬರಮುಕ್ತ, ಅಪೌಷ್ಟಿಕತೆ ಮುಕ್ತ, ಋಣಮುಕ್ತ, ಕರ್ನಾಟಕ ನಿರ್ಮಾಣ ಮಾಡುವುದೇ ಕಾಂಗ್ರೆಸ್ ಪಕ್ಷದ ಮುಂದಿನ ಗುರಿಯಾಗಿದೆ . ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿದೆ ಎಲ್ಲರೂ ಕೂಡಿಕೊಂಡು ಪಕ್ಷದ ಮತ್ತು ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಿದರೇ 18 ಕ್ಷೇತ್ರಗಳಲ್ಲಿ ಕನಿಷ್ಠ 15 ಕ್ಷೇತ್ರಗಳಲ್ಲಿ ಕಾಂಗ್ರೇಸ ಗೆಲುವು ಸಾಧಿಸುವಲ್ಲಿ ಎರೆಡು ಮಾತ್ತಿಲ್ಲಾ ಆ ನೀಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಪಕ್ಕದ ಗೆಲುವಿಗೆ ಶ್ರಮಿಸಬೇಕೆಂದು ಇದೇ ಸಂದರ್ಭದಲ್ಲಿ ಸಿ.ಎಂ ನಾಯಕರಿಗೆ ಕಿವಿಮಾತು ಹೇಳಿದರು.

ಮಧ್ಯ ಮಾತು ನಿಲ್ಲಿಸಿದ ಸಿ.ಎಂ: ಸಮಾವೇಶದಲ್ಲಿ ಆವೇಶದಲ್ಲಿ ಮಾತನಾಡುತ್ತಿದ ಸಿ.ಎಂಸಿದ್ದರಾಮಯ್ಯ ನವರು ಆಝಾನ ಧ್ವನಿಕೇಳಿ ಕೆಲಹೊತ್ತು ಭಾಷಣ ನಿಲ್ಲಿಸಿ ಗೌರವ ಸೂಚಿಸಿದ್ದು ಎಲ್ಲರ ಗಮನ ಸೆಳೆಯಿತು .

ಇದಕ್ಕೂ ಮೊದಲು ಸಿ.ಎಂ ಸಿದ್ದರಾಮಯ್ಯ ನವರು ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆ ,ರಸ್ತೆ ಅಭಿವೃದ್ಧಿ ,ಆರೋಗ್ಯ ,ಸಣ್ಣ ನೀರಾವರಿ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 10932,66 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೇರವೆರಿಸಿದರು

ಸಮಾವೇಶದಲ್ಲಿ ಸಿ.ಎಂ .ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ತಾಕಾರದ ಹಾರಹಾಕಿ ಸತ್ಕರಿಸಿ ಗೌರವಿಸಿದರು

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸ್ವಾಗತಿಸಿದರು , ಎ.ಜಿ.ಕೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು
ವೇದಿಕೆಯಲ್ಲಿ ನೀರಾವರಿ ಸಚಿವ ಎಂ.ಬಿ ಪಾಟೀಲ , ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವ ರಮೇಶ ಜಾರಕಿಹೊಳಿ , ಜಿ.ಪಂ ಅಧ್ಯಕ್ಷೆ ಶ್ರೀಮತಿ ಆಶಾ ಐಹೋಳೆ , ಯುವ ಧುರೀಣ ಲಖನ್ ಜಾರಕಿಹೊಳಿ , ತಾ.ಪಂ ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ , ನಗರಸಭೆ ಅಧ್ಯಕ್ಷ ತಳದಪ್ಪಾ ಅಮ್ಮಣಗಿ , ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ್ , ಮಡ್ಡೆಪ್ಪಾ ತೋಳಿನವರ , ರಾವಸಾಬ ಪಾಟೀಲ , ನಜೀರ ಶೇಖಶ, ಎಸ್.ಎ. ಕೋತವಾಲ , ಅಬ್ಬಾಸ ದೇಸಾಯಿ , ಆನಂದ ಚೋಪ್ರಾ , ಶಿವಾನಂದ ಡೋಣಿ ,ಅರವಿಂದ ದಳವಾಯಿ , ಯಲಿಗಾರ , ವಿಶ್ವಾಸ ವೈದ್ಯ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು

Related posts: