RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ಎಕ್ಸಿಸ್ ಬ್ಯಾಂಕಿನ ಎಟಿಎಂ ಒಡೆದು ಕಳ್ಳತನ : ಘಟಪ್ರಭಾದಲ್ಲಿ ಘಟನೆ

ಘಟಪ್ರಭಾ:ಎಕ್ಸಿಸ್ ಬ್ಯಾಂಕಿನ ಎಟಿಎಂ ಒಡೆದು ಕಳ್ಳತನ : ಘಟಪ್ರಭಾದಲ್ಲಿ ಘಟನೆ 

ಎಕ್ಸಿಸ್ ಬ್ಯಾಂಕಿನ ಎಟಿಎಂ ಒಡೆದು  ಕಳ್ಳತನ : ಘಟಪ್ರಭಾದಲ್ಲಿ ಘಟನೆ

ಘಟಪ್ರಭಾ ಡಿ 21: ಇಲ್ಲಿಯ ಮುಖ್ಯ ರಸ್ತೆಯ ಕರೋಶಿ ಕಾಂಪ್ಲೆಕ್ಸನಲ್ಲಿರುವ ಎಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ. ಕಳ್ಳರು ಎಟಿಎಂ ಯಂತ್ರವನ್ನು ಒಡೆದು ಅದರಲ್ಲಿನ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ಬೆಳಗಾವಿಯಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನಗಳನ್ನು ಕರೆಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಎಟಿಎಂನಿಂದ ಕಳ್ಳತನವಾದ ಮೊತ್ತದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಘಟಪ್ರಭಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: