ಯಮಕನಮರಡಿ : ನಾನು ಈ ನಾಡಿನ ಮಣ್ಣಿನ ಮಗ ಯು.ಪಿ ಮುಖ್ಯಮಂತ್ರಿಯಿಂದ ಪಾಠ ಕಲಿಯಬೇಕಾದ ಅಗತ್ಯ ವಿಲ್ಲಾ : ಸಿ.ಎಂ. ಸಿದ್ದರಾಮಯ್ಯ ತಿರುಗೇಟು
ನಾನು ಈ ನಾಡಿನ ಮಣ್ಣಿನ ಮಗ ಯು.ಪಿ ಮುಖ್ಯಮಂತ್ರಿಯಿಂದ ಪಾಠ ಕಲಿಯಬೇಕಾದ ಅಗತ್ಯ ವಿಲ್ಲಾ : ಸಿ.ಎಂ. ಸಿದ್ದರಾಮಯ್ಯ ತಿರುಗೇಟು
ಯಮಕನಮರಡಿ ಡಿ 22: ನಾನು ಈ ನಾಡಿನ ಮಣ್ಣಿನ ಮಗ ಯುಪಿ ಮುಖ್ಯಮಂತ್ರಿಯಿಂದ ನಮ್ಮ ಕರ್ನಾಟಕ ಇತಿಹಾಸದ ಪಾಠ ಕಲಿಯುವ ಅಗತ್ಯವಿಲ್ಲ , ಈ ನಾಡಿನ ಇತಿಹಾಸ ನಮ್ಮಗೆ ಗೊತ್ತು ಹೊರತಾಗಿ ಯೋಗಿಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು
ಅವರು ಶುಕ್ರವಾರದಂದು ಬೆಳಗಾವಿ ಜಿಲ್ಲೆ ಯಮಕನಮರಡಿ ಗ್ರಾಮದ ಸಿಇಎಸ್ ಹೈಸ್ಕೂಲ್ ಮೈದಾನದಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ದೇಶದಲ್ಲಿ ಯಾವುದಾರರು ರಾಜ್ಯ ಜಂಗಲ್ ರಾಜ್ಯ ಎಂದು ಕರೆಯಲ್ಲಪಡುತ್ತಿದ್ದರೆ ಅದು ಉತ್ತರ ಪ್ರದೇಶ ಅದನ್ನು ಸುಧಾರಿಸುವುದತ್ತ ಯೋಗಿ ಗಮನ ಹರಿಸಲಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತಿರುಗೇಟು ನೀಡಿದರು
ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ 50 ಸಾವಿರ ಕೋಟಿಗೂ ಅಧಿಕ ಖರ್ಚು ಮಾಡಿ ದಾಖಲೆ ನಿರ್ಮಿಸಿದ್ದೇವೆ
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಕೇಳುವ ಪ್ರತಿಪಕ್ಷ ಮುಖಂಡರು ಸದನದಲ್ಲಿ ನಾನು ಉತ್ತರ ನೀಡುವಾಗ ಯಾವ ಮುಖಂಡರು ಇರಲಿಲ್ಲ.
ಒಂದು ವೇಳೆ ಸರ್ಕಾರದ ಸಾಧನೆಯ ಅಂಕಿ-ಅಂಶಗಳು ಸುಳ್ಳಾಗಿದ್ದರೆ ಯಾವುದೇ ವೇದಿಕೆಯಲ್ಲಿ ನಮ್ಮನ್ನು ಪ್ರಶ್ನಿಸಲಿ ಬಹಿರಂಗ ಚರ್ಚೆಗೆ ಸಿದ್ಧ ಎಂದು ಇದೇ ವೇಳೆ ಸವಾಲು ಹಾಕಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವಂತೆ ಪ್ರಧಾನಮಂತ್ರಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ದು ಗೋಗರೆದರೆ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಅದೇ ರೀತಿ ಈಗ ಯಾಕೆ ಸಾಧ್ಯವಾಗಲ್ಲ ಎಂದು ಸಿಎಂ ಪ್ರಶ್ನಿಸಿದರು
ಮೂಢನಂಬಿಕೆ- ಕಂದಾಚಾರದ ವಿರುದ್ಧ ಸತೀಶ ಜಾರಕಿಹೊಳಿ ಅವರಿಗೆ ಸ್ಪಷ್ಟತೆ ಇದೆ. ವೈಚಾರಿಕತೆ ಇರುವರಿಗೆ ಮಾತ್ರ ಸ್ಪಷ್ಟತೆ ಸಾಧ್ಯ. ಅವರು ವೈಚಾರಿಕತೆ ಹೊಂದಿರುವ ಸೂಕ್ಷ್ಮ ಮನಸ್ಸಿನ ರಾಜಕಾರಣಿ. ಸೌಮ್ಯ ಸ್ವಭಾವದ ಪ್ರಭಾವಿ ರಾಜಕಾರಣಿ ಎಂದು ಅವರು ಬಣ್ಣಿಸಿದರು.
ರಾಜ್ಯದಲ್ಲಿ ಕೆಲವರು ಸಾಮರಸ್ಯ ಹಾಳುಗೆಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ಪರವಾಗಿರುವ ಜನರಲ್ಲ. ನಾವು ಹಿಂದುತ್ವ, ಇಸ್ಲಾಂ, ಕ್ರೈಸ್ತರು, ಜೈನರ ವಿರೋಧಿಗಳಲ್ಲ. ನಾವು ಬಹುತೇಕರು ಹಿಂದೂಗಳು.
ನಾವು ಟಿಪ್ಪು ಮಾತ್ರವಲ್ಲ, ಅಂಬೇಡ್ಕರ್, ಬಸವಣ್ಣ, ಕನಕ, ವಾಲ್ಮೀಕಿ, ಭಗೀರಥ, ರಾಣಿ ಚನ್ನಮ್ಮ, ಅಂಬಿಗರ ಚೌಡಯ್ಯ ಹೀಗೆ ಎಲ್ಲ ಮಹನೀಯರ ಜಯಂತಿ ಮಾಡುತ್ತೇವೆ ಎಂದು ಗುಡುಗಿದರು.
ನಾವು ಇನ್ನೊಬ್ಬರಿಂದ ದೇಶಪ್ರೇಮ ಅಥವಾ ಇತಿಹಾಸ ತಿಳಿಯುವ ಅಗತ್ಯವಿಲ್ಲ. ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಲು ಟಿಪ್ಪು ಜಯಂತಿ ವಿರೋಧಿಸುವುದು ಚರಿತ್ರೆಗೆ ಮಾಡುತ್ತಿರುವ ಅವಮಾನ ಎಂದು ಅಭಿಪ್ರಾಯಪಟ್ಟರು
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಸತೀಶ ಸರಕಾದ ಮತ್ತು ಕಳೆದ 9 ವರ್ಷಗಳಿಂದ ಯಮಕನಮರಡಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದ್ದರಲ್ಲದೆ ರಾಜಕೀಯಕ್ಕಿಂತ ಸಮಾಜಿಕ ಕ್ಷೇತ್ರದ ಕಡೆಗೆ ಹೆಚ್ಚು ಗಮನ ಹರಿಸಿ ಸಮಾಜವನ್ನು ಸದೃಢವಾಗಿ ನಿರ್ಮಿಸುವತ್ತ ಶ್ರಮಿಸುತ್ತಿರುವುದಾಗಿ ಸಿ.ಎಂ ಸಿದ್ದರಾಮಯ್ಯ ನವರಿಗೆ ಮನವರಿಕೆ ಮಾಡಿದರು
ವೇದಿಕೆಯಲ್ಲಿ ನೀರಾವರಿ ಸಚಿವ ಎಂ.ಬಿ. ಪಾಟೀಲ , ಸಹಕಾರ ಸಚಿವ ರಮೇಶ ಜಾರಕಿಹೊಳಿ , ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ , ಶಾಸಕ ಫೀರೋಜ ಸೇಠ , ಜಿಲ್ಲಾಧಿಕಾರಿ ಜಿಯಾವುಲ್ಲಾ , ಜಿ.ಪಂ ಅಧ್ಯಕ್ಷೆ ಶ್ರೀಮತಿ ಆಶಾ ಐಹೋಳೆ , ಬಾಲ ಭವನ ಅಧ್ಯಕ್ಷೆ ಶ್ರೀಮತಿ ಅಂಜಲಿ ನಿಂಬಾಳ್ಕರ , ಮಾಜಿ ಶಾಸಕ ಕಾಕಾಸಾಬ ಪಾಟೀಲ , ಮಾಜಿ ಸಚಿವ ಎ.ಬಿ.ಪಾಟೀಲ , ಸೇರಿದಂತೆ ಅನೇಕರು ಇದ್ದರು
ಕಾರ್ಯಕ್ರಮವನ್ನು ಎ.ಜಿ ಕೋಳಿ ನಿರೂಪಿಸಿದರು ಕೊನೆಯಲ್ಲಿ ಕಾಂಗ್ರೆಸ್ ಯುವ ಧುರೀಣ ಕಿರಣಸಿಂಗ್ ರಜಪೂತ ವಂದಿಸಿದರು