RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ದಿ. 25 ರಂದು ಪ್ರೊ. ಶಕುಂತಲಾ ಹಿರೇಮಠರ ತ್ರಿವಳಿ ಚೊಚ್ಚಲ ಪುಸ್ತಕಗಳ ಬಿಡುಗಡೆ

ಗೋಕಾಕ:ದಿ. 25 ರಂದು ಪ್ರೊ. ಶಕುಂತಲಾ ಹಿರೇಮಠರ ತ್ರಿವಳಿ ಚೊಚ್ಚಲ ಪುಸ್ತಕಗಳ ಬಿಡುಗಡೆ 

ದಿ. 25 ರಂದು ಪ್ರೊ. ಶಕುಂತಲಾ ಹಿರೇಮಠರ ತ್ರಿವಳಿ ಚೊಚ್ಚಲ ಪುಸ್ತಕಗಳ ಬಿಡುಗಡೆ

ಗೋಕಾಕ : ಸಾಹಿತ್ಯ ಚಿಂತನ ಕಮ್ಮಟದ 250ರ ಮಾಸಿಕ ಉಪನ್ಯಾಸ ಸಂಭ್ರಮದೊಂದಿಗೆ, ದಿ. 25 ರಂದು ಮುಂಜಾನೆ 9-30 ಗಂಟೆಗೆ ನಗರದ ಪ್ರೋಫೆಸರ್ ಕಾಲನಿಯಲ್ಲಿರುವ ಶ್ರೀ ಸಿದ್ಧಿವಿದ್ಯಾ ವಿನಾಯಕ ಮಂದಿರದ ಸಭಾಂಗಣದಲ್ಲಿ ಪ್ರೊ. ಶ್ರೀಮತಿ ಶಕುಂತಲಾ ಹಿರೇಮಠರ ಚೊಚ್ಚಲ ತ್ರಿವಳಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಮದಾಪೂರದ ಶ್ರೀ ಚರಮೂರ್ತೀಶ್ವರ ಮಠದ ಪರಮಪೂಜ್ಯ ಶ್ರೀ ಚರಮೂರ್ತೀಶ್ವರ ಮಹಾಸ್ವಾಮಿಗಳ ವಹಿಸುವರು. ಜ್ಞಾನ ಮಂದಿರದ ಧರ್ಮದರ್ಶಿನಿ ಸುವರ್ಣಾತಾಯಿ ಹೊಸಮಠ ಅವರು ಉದ್ಘಾಟಿಸುವರು. ಬೆಳಗಾವಿ ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ|ಗುರುದೇವಿ ಹುಲೆಪ್ಪನವರಮಠ ಅವರು “ಸಮರಸವೇ ಜೀವನ” ಸ್ವ-ರಚಿತ ಕವನ ಸಂಕಲನ ಕುರಿತು ಮಾತನಾಡುವರು. “ರೆಕ್ಕೆ ಬಲಿತ ಹಕ್ಕಿ” ಕಥಾ ಸಂಕಲನದ ಕುರಿತು ಪ್ರೊ. ಚಂದ್ರಶೇಖರ ಅಕ್ಕಿ ಹಾಗೂ ವಿಚಾರಮಂಥನ ವೈಚಾರಿಕ ಲೇಖನಗಳ ಕುರಿತು ಡಾ|ಸಿ.ಕೆ. ನಾವಲಗಿಯವರು ಮಾತನಾಡುವರು. ಡಾ|ಮೈತ್ರೆಯಣಿ ಗದಿಗೆಪ್ಪಗೌಡರ, ಶಕುಂತಲಾ ದಂಡಗಿ, ಶಿರೀಷ ಜೋಶಿ, ಮಹಾಂತೇಶ ತಾಂವಶಿ, ಮಹಾಲಿಂಗ ಮಂಗಿ, ಟಿ.ಸಿ. ಮೊಹರೆ, ವಸಂತರಾವ್ ಕುಲಕರ್ಣಿ, ರಾಮಪ್ಪ ಮಿರ್ಜಿ ಮುಂತಾದವರು ಉಪಸ್ಥಿತರಿರುವರು. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಚಾಲಕರಾದ ಈಶ್ವರಚಂದ್ರ ಬೆಟಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: