RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಯುವಕರಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ : ಜೆಸಿಐ ವಲಯ ಅಧ್ಯಕ್ಷ ಪವನಕುಮಾರ

ಗೋಕಾಕ:ಯುವಕರಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ : ಜೆಸಿಐ ವಲಯ ಅಧ್ಯಕ್ಷ ಪವನಕುಮಾರ 

ಯುವಕರಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ : ಜೆಸಿಐ ವಲಯ ಅಧ್ಯಕ್ಷ ಪವನಕುಮಾರ

ಗೋಕಾಕ ಡಿ 24: ಜೆಸಿಐ ಸಂಸ್ಥೆ ಜಗತ್ತಿನ 140 ರಾಷ್ಟ್ರಗಳಲ್ಲಿ ಉತ್ತಮರಾಗಿ, ಉತ್ತಮ ಕಾರ್ಯ ಮಾಡಿರೆಂಬ ಧ್ಯೇಯದೊಂದಿಗೆ ಸಾಮಾಜಿಕ ಸೇವೆ ಮಾಡುತ್ತಿದೆ ಎಂದು ಜೆಸಿಐ ವಲಯ ಅಧ್ಯಕ್ಷ ಪವನಕುಮಾರ. ಸಿ. ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾ ಭವನದಲ್ಲಿ ಜ್ಯೂನಿಯರ್ ಚೇಂಬರ್ ಇಂಟರನ್ಯಾಶನಲ್ ಇಂಡಿಯಾ ಕರದಂಟು ಸಿಟಿ ಗೋಕಾಕ ಘಟಕದ ಅಧಿಕಾರ ಹಸ್ತಾಂತರ ಸಮಾರಂಭದ ಹಸ್ತಾಂತರ ಅಧಿಕಾರಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠವಾದ ಯುವ ಶಕ್ತಿಯನ್ನು ಭಾರತ ದೇಶ ಹೊಂದಿದೆ, ಯುವಕರಿಗೆ ಸೂಕ್ತವಾದ ಮಾರ್ಗದರ್ಶನ ನೀಡಿದರೇ ಯುವ ಸಮೂಹ ಸಾಧಕರಾಗುವುದರೊಂದಿಗೆ ದೇಶದ ಹೆಸರನ್ನು ಅಂತರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದಂತಾಗುತ್ತದೆ. ಯುವಕರಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ. ಇಲ್ಲಿಯ ಜೆಸಿಐ ಸಂಸ್ಥೆಯು ಹಲವಾರು ಸಾಮಾಜಿಕ ಸುಧಾರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಲ್ಲಿಯ ಕರದಂಟಿನ ಸಿಹಿಯಂತೆ ಜನಮನ ಗೆದ್ದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಗುರುರಾಜ ನಿಡೋಣಿ ಅವರಿಗೆ ಪೂರ್ವಾಧ್ಯಕ್ಷ ವಿಷ್ಣು ಲಾತೂರ ಅಧಿಕಾರ ಹಸ್ತಾಂತರ ಮಾಡಿದರು. ಕಾರ್ಯದರ್ಶಿಯಾಗಿ ಕೆಂಪಣ್ಣ ಚಿಂಚಲಿ, ಖಜಾಂಚಿಯಾಗಿ ಮಲ್ಲಪ್ಪ ಮದಿಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ಸುಧಾ ನಿಡೋಣಿ, ಕಾರ್ಯದರ್ಶಿಯಾಗಿ ಶ್ರೀಮತಿ ಶೋಭಾ ಚಿಂಚಲಿ ಯುವ ಘಟಕದ ಅಧ್ಯಕ್ಷರಾಗಿ ಧೃವಾ ಕಿತ್ತೂರ, ಕಾರ್ಯದರ್ಶಿಯಾಗಿ ಪ್ರದೀಪ ತಡಸಲೂರ ಅಧಿಕಾರ ಸ್ವೀಕರಿಸಿದರು.
ವೇದಿಕೆ ಮೇಲೆ ಜೆಸಿಐ ಸಂಸ್ಥೆಯ ವಲಯ ಉಪಾಧ್ಯಕ್ಷ ಡಾ|| ಕುಮಾರಗೌಡ ಪಾಟೀಲ, ನಗರ ಸಭೆ ಪೌರಾಯುಕ್ತ ವಿ.ಸಿ,ಚಿನ್ನಪ್ಪಗೌಡರ, ತಾಲೂಕಾ ವೈದ್ಯಾಧಿಕಾರಿ ಡಾ|| ಆರ್.ಎಸ್.ಬೆಣಚಿನಮರಡಿ, ಸಂಸ್ಥೆಯ ಸದಸ್ಯರಾದ ಧನ್ಯಕುಮಾರ ಕಿತ್ತೂರ, ವಿಜಯಕುಮಾರ ಖಾರೆಪಾಟಣ ನೇತ್ರಾವತಿ ಲಾತೂರ ಇದ್ದರು.
ಮೀನಾಕ್ಷಿ ಸವದಿ ಸ್ವಾಗತಿಸಿದರು, ಶೈಲಾ ಕೊಕ್ಕರಿ ನಿರೂಪಿಸಿದರು, ಕೆಂಪಣ್ಣ ಚಿಂಚಲಿ ವಂದಿಸಿದರು.

Related posts: