RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸ್ವಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಪರಿಸರ ಅಭೀಯಂತರ ಗಜಾಕೋಶ ಸಲಹೆ

ಗೋಕಾಕ:ಸ್ವಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಪರಿಸರ ಅಭೀಯಂತರ ಗಜಾಕೋಶ ಸಲಹೆ 

ಕಾಂಗ್ರೆಸ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಪರಿಸರ ಅಭೀಯಂತರ ಗಜಾಕೋಶ ಸಲಹೆ
ಗೋಕಾಕ ಮೇ 17: ತಮ್ಮ ಮನೆಗಳ ಸುತ್ತಮುತ್ತ ಸ್ವಚತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೆಕೇಂದು ನಗರಸಭೆ ಪರಿಸರ ಅಭೀಯಂತರ ಗಜಾಕೋಶ ಹೇಳಿದರು .


ಅವರು ಇಂದು ಮುಂಜಾನೆ ಇಲ್ಲಿಯ
ಇಲ್ಲಿಯ ವಾರ್ಡ ನಂ 20 ಮತ್ತು 21 ರಲ್ಲಿ ಸ್ವಚ ಭಾರತ ಮಿಷನ್ ಅಡಿಯಲ್ಲಿ ನಗರಸಭೆ ಗೋಕಾಕ ವತಿಯಿಂದ ನಾಗರಿಕರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಮಾಹಿತಿ ,ಶಿಕ್ಷಣ ಮತ್ತು ಸಂದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಸವನ್ನು ಗಟಾರ,ರಸ್ತೆಗಳಲ್ಲಿ ಬೀಸಾಡದೆ ಪ್ರತಿ ನಿತ್ಯ ನಗರಸಭೆ ವತಿಯಿಂದ ಬರುವ ಘಂಟೆ ಗಾಡಿಗೆ ಕಸವನ್ನು ನೀಡಿ ಸಂಕ್ರಾಮಿಕ ರೋಗಗಳು ಹರಡದಂತೆ ಸಹಕರಿಸಬೇಕು ಇದು ಪ್ರತಿ ಯೊಬ್ಬರ ಕರ್ತವ್ಯವಾದಾಗ ಮಾತ್ರ ಸಾಧ್ಯ ಆ ನೀಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತವಾಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮುಖಾಂತರ  ನಗರಸಭೆ ಸದ್ಯಸೆ ಶ್ರೀಮತಿ ವೆಂಕವ್ವಾ ದು ಶಾಸ್ತ್ರೀಗೋಲ್ಲರ ಉಧ್ಘಾಟಿಸಿದರು ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಅಬ್ದುಲರಹೇಮಾನ ದೇಸಾಯಿ, ದುರ್ಗಪ್ಪಾ ಶಾಸ್ತ್ರೀಗೋಲ್ಲರ , ನಗರಸಭೆ ಆರೋಗ್ಯ ನಿರೀಕ್ಷಕರಾದ ರವಿ ರಂಗಸುಭೆ,ಜೆ.ಸಿ ತಾಂಬೋಳೆ, ಸೂಪರವೈಜರ ರಮೇಶ ಕಳ್ಳಿಮನಿ ಉಪಸ್ಥಿತರಿದ್ದರು

ನಂತರ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಕಲಾವಿದರಿಂದ ಸ್ವಚ್ಛ ನಗರ ಎಂಬ ಬೀದಿ ನಾಟಕ ಪ್ರರ್ದಶಿಸಿ ಸ್ವಚತೆ ಬಗ್ಗೆ ಜಾಗೃತಿ ಮೂಡಿಸುವ ಜಾನಪದ ಗೀತೆಗಳನ್ನು ಹಾಡಿ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

Related posts: