RNI NO. KARKAN/2006/27779|Monday, November 25, 2024
You are here: Home » breaking news » ಗೋಕಾಕ:ಸರಕಾರಗಳ ಇಚ್ಚಾಶಕ್ತಿ ಕೋರತೆಯಿಂದ ಉತ್ತರ ಕರ್ನಾಟಕದ ಜನತೆ ಅನ್ಯಾಯವಾಗುತ್ತಿದೆ : ಖಾನಪ್ಪನವರ ಆಕ್ರೋಶ

ಗೋಕಾಕ:ಸರಕಾರಗಳ ಇಚ್ಚಾಶಕ್ತಿ ಕೋರತೆಯಿಂದ ಉತ್ತರ ಕರ್ನಾಟಕದ ಜನತೆ ಅನ್ಯಾಯವಾಗುತ್ತಿದೆ : ಖಾನಪ್ಪನವರ ಆಕ್ರೋಶ 

ಸರಕಾರಗಳ ಇಚ್ಚಾಶಕ್ತಿ ಕೋರತೆಯಿಂದ ಉತ್ತರ ಕರ್ನಾಟಕದ ಜನತೆ ಅನ್ಯಾಯವಾಗುತ್ತಿದೆ : ಖಾನಪ್ಪನವರ ಆಕ್ರೋಶ

ಗೋಕಾಕ ಡಿ 27: ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರೆ ನೀಡಿದ ಉತ್ತರ ಕರ್ನಾಟಕ ಬಂದಗೆ ಬೆಂಬಲ ವ್ಯಕ್ತ ಪಡಿಸಿ ಕನ್ನಡಪರ ಸಂಘಟನೆಗಳ, ರೈತ ಸಂಘಟನೆಗಳ ಕಾರ್ಯಕರ್ತರು ಕನ್ನಡಪರ ಸಂಘಟನೆ ಮುಖಂಡ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಬುಧವಾರದಂದು ಪ್ರತಿಭಟನೆ ನಡೆಸಿದರು.

ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯವನ್ನಾಳಿದ, ಆಳುತ್ತಿರುವ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಷ ವ್ಯಕ್ಷಪಡಿಸಿದರಲ್ಲದೆ ಮೆರವಣಿಗೆ ನಡೆಸಿ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.

ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಖಾನಪ್ಪನವರ ಮತ್ತು ಭೀಮಶಿ ಗದಾಡಿ ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಉತ್ತರ ಕರ್ನಾಟಕದ ಮಹಾತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ರಾಜ್ಯವನ್ನಾಳಿದ ಸರಕಾರಗಳ ಇಚ್ಚಾ ಶಕ್ತಿ ಹೊಂದದಿರುವುದರಿಂದ ಉತ್ತರ ಕರ್ನಾಟಕದ ಜನತೆ ಅನ್ಯಾಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿರುವ ಎಲ್ಲಾ ಪಕ್ಷದ ಮುಖಂಡರು ಒಗ್ಗಟ್ಟಾಗಿ ಕಳಸ ಬಂಡಾರಿ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಪ್ರಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳ ನೇತೃತ್ವದಲ್ಲಿ ರಾಜಕಾರಣಿಗಳಿಗೆ ತಕ್ಕ ಉತ್ತರ ನೀಡಲಾಗುವುದೆಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದು ದಶಕದಿಂದ ಹೆಚ್ಚಿನ ಕಾಲ ನೆನೆಗುದ್ದಿಗೆ ಬಿದ್ದಿರುವ ಉತ್ತರ ಕರ್ನಾಟಕದ ಮಹಾತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಕಳಸಾ ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಬೇಕೆಂದು ಹಲವು ಬಾರಿ ಹೋರಾಟಗಳನ್ನು ಮಾಡಿ ಸರಕಾರಗಳಿಗೆ ಮನವಿ ಅರ್ಪಿಸಿದರೂ ಯಾವುದೇ ಪ್ರಯೋಜನೆವಾಗಿಲ್ಲಾ. ಇದರಿಂದ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳು ಕುಡಿಯುವ ನೀರಿನ ಯೋಜನೆಯಿಂದ ವಂಚಿತವಾಗಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈ ಹಿಂದೆ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ರಚಿಸಿದ ಯಾವುದೇ ನ್ಯಾಯ ಮಂಡಳಿಗಳಿಂದ ನ್ಯಾಯ ಸಿಕ್ಕಿಲ್ಲ.
ರಾಜ್ಯಪಾಲರು ಈ ಯೋಜನೆಗೆ ಮಧ್ಯಸ್ಥಿಕೆ ವಹಿಸಿ ಈ ಯೋಜನೆಯ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿರುವ ಗೋವಾ ಸರಕಾರಕ್ಕೆ ಕರ್ನಾಟದ ವಾಸ್ತವ ಸ್ಥಿತಿಗತಿಯ ಬಗ್ಗೆ ಅರಿವು ಮೂಡಿಸಿ ಕಳಸಾ ಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು ಸಹ ಕಾವೇರಿ, ಮೇಕೆದಾಟು ಯೋಜನೆಗೆ ಆಸಕ್ತಿ ತೋರಿದಂತೆ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೂ ಕಾಳಜಿ ತೋರಿ ಅತ್ಯಂತ ಶೀಘ್ರದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಲ್ಲದೇ ಮಹಾರಾಷ್ಟ್ರ ಹಾಗೂ ಗೋವಾ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ರಾಜಕಾರಣ ಮಾಡದೇ ನೈಜವಾದ ಕಳಕಳಿಯಿಂದ ಕಾರ್ಯನಿರ್ವಹಿಸಲು ಮನಸ್ಸು ಮಾಡಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯ ಪ್ರವೃತ್ತರಾಗಿ ಈ ಯೋಜನೆ ಅನುಷ್ಠಾನಕ್ಕೆ ನಿಗಾವಹಿಸಬೇಕೆಂದು ಸಮಸ್ತ ಜನತೆ ಪರವಾಗಿ, ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ತಮ್ಮಲ್ಲಿ ವಿನಂತಿಸಲಾಗಿದೆ. ಇದಕ್ಕೆ ತಪ್ಪಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಈ ಮನವಿ ಮೂಲಕ ಎಚ್ಚರಿಸಲಾಗಿದೆ.

ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಭೀಮಶಿ ಗದಾಡಿ, ಕರವೇ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕರವೇ ಸ್ವಾಭಿಮಾನಿ ಬಣ ಅಧ್ಯಕ್ಷೆ ಯಶೋಧಾ ಬಿರಡಿ, ಅಯುಬ ಫಿರಾಜಾದೆ, ಮುತ್ತೆಪ್ಪ ಬಾಗನ್ನವರ, ಕೃಷ್ಣಾ ಖಾನಪ್ಪನವರ, ಸಂತೋಷ ಖಂಡ್ರೆ, ದೀಪಕ ಹಂಜಿ, ಪವನ ಮಹಾಲಿಂಗಪೂರ, ಅಪ್ಪಾಸಾಬ ಮುಲ್ಲಾ, ಮಂಜುನಾಥ ಪೂಜೇರಿ, ಯಲ್ಲಪ್ಪ ತಿಗಡಿ, ಶೀವು ಇಳಿಗೇರ, ಗೋಪಾಲ ಕುಕನೂರ, ಪ್ರಕಾಶ ಹಾಲನ್ನವರ, ಮಂಜುನಾಥ ಝಲ್ಲಿ, ಮಂಜುನಾಥ ಆರ್.ಜೆ. ಮುತ್ತು ರಾಮಣ್ಣವರ, ಹನೀಫಸಾಬ ಸನದಿ, ಮಲ್ಲಪ್ಪ ತಲೆಪ್ಪಗೋಳ, ಬಸು ಗಾಡಿವಡ್ಡರ, ಪ್ರವೀಣ ಧನಶೆಟ್ಟಿ, ಲಕ್ಕಪ್ಪ ನಂದಿ, ಮೈಬೂಬ ಫಿರಜಾದೆ, ದಸ್ತಗೀರ ಹವಾಲದಾರ, ರಮೇಶ ಕೆ. ಇಮ್ರಾನ ಜಕಾತಿ, ಬಸವರಾಜ ಹುಲ್ಯಾಳ, ವಿಶಾಲ ಭಾಗಾಯಿ, ಗುರು ಮುನ್ನೋಳಿಮಠ, ಲಕ್ಷ್ಮೀ ಪಾಟೀಲ ಇನ್ನೂ ಅನೇಕರು ಹಾಜರಿದ್ದರು.

Related posts: