RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕೌಜಲಗಿ ಹೋಬಳಿಯನ್ನು ನೂತನ ಮೂಡಲಗಿ ತಾಲೂಕಿನಲ್ಲಿ ಸೇರಿಸುವುದಕ್ಕೆ ವಿರೋಧ : ಕೌಜಲಗಿ ಬಂದ್ ಯಶಸ್ವಿ

ಗೋಕಾಕ:ಕೌಜಲಗಿ ಹೋಬಳಿಯನ್ನು ನೂತನ ಮೂಡಲಗಿ ತಾಲೂಕಿನಲ್ಲಿ ಸೇರಿಸುವುದಕ್ಕೆ ವಿರೋಧ : ಕೌಜಲಗಿ ಬಂದ್ ಯಶಸ್ವಿ 

ಕೌಜಲಗಿ ಹೋಬಳಿಯನ್ನು ನೂತನ ಮೂಡಲಗಿ ತಾಲೂಕಿನಲ್ಲಿ ಸೇರಿಸುವುದಕ್ಕೆ ವಿರೋಧ : ಕೌಜಲಗಿ ಬಂದ್ ಯಶಸ್ವಿ 

ಗೋಕಾಕ ಡಿ 29 : ಊರಿನ ಹಿತಾಸಕ್ತಿ ಬಂದಾಗ ನಾವೆಲ್ಲರೂ ಪಕ್ಷಾತಿತವಾಗಿ ಹೋರಾಟ ಮಾಡಬೇಕಾಗುತ್ತದೆ. ರಾಜಕರಣವೇ ಬೇರೆ, ಊರ ಅಭಿಮಾನವೇ ಬೇರೆ. ಕೌಜಲಗಿ 40 ವರ್ಷಗಳಿಂದ ತಾಲೂಕ ರಚಣೆಗಾಗಿ ಹೋರಾಡುತ್ತಾ ಬಂದಿದೆ. ಆದರೆ ಸರಕಾರ ಕೌಜಲಗಿ ತಾಲೂಕನ್ನು ಪಟ್ಟಿಯಿಂದ ಕೈಬಿಟ್ಟು ಅನ್ಯಾಯ ಮಾಡಿದೆ. 20 ವರ್ಷಗಳಿಂದ ಕೌಜಲಗಿ ಅಭಿವೃದ್ಧಿಯನ್ನು ಹೊಂದುತ್ತಾ ಬಂದಿದೆ. ಅದರೇ ಸರಕಾರ ಕೌಜಲಗಿಯನ್ನು ತಾಲೂಕಾಗಿಸಲಿಲ್ಲ. ಈಗ ಕೌಜಲಗಿ ಹೋಬಳಿಯನ್ನು ನೂತನ ಮೂಡಲಗಿ ತಾಲೂಕಿನಲ್ಲಿ ಸೇರಿಸುವ ಪ್ರಯತ್ನಗಳು ನಡೆದಿವೆ. ಯಾವೂದೇ ಕಾರಣಕ್ಕೂ ಕೌಜಲಗಿ ಹೋಬಳಿಯನ್ನು ಮೂಡಲಗಿ ತಾಲೂಕಿಗೆ ಸೇರಿಸಬಾರದು ಎಂದು ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಸಮೀತಿಯ ಪ್ರ.ಕಾರ್ಯದರ್ಶಿ ರಾಜೇಂದ್ರ ಸಣ್ಣಕ್ಕಿ ಹೇಳಿದರು. ಇವರು ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಇಂದು ನಡೆದ ಕೌಜಲಗಿ ತಾಲೂಕು ಹೋರಾಟದಲ್ಲಿ ಭಾಗವಹಿಸಿ ಮಾತನಾಡುತ್ತ, ಕೌಜಲಗಿ ಹೋಬಳಿ ಕೇಂದ್ರವನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರರೆಸಬೇಕು. ಮೂಡಲಗಿ ತಾಲೂಕಿಗೆ ಸೆರಿಸಬಾರದು ಎಂದು ವಿರೋದಿಸಿ ನಿಯೋಜಿತ ಕೌಜಲಗಿ ತಾಲೂಕಾ ಹೋರಾಟ ಸಮೀತಿ ಹಾಗೂ ಗ್ರಾಮದ ವಿವಿಧ ಸಂಘಟನೆಗಳಿಂದ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ ಇಂದಿನ ಹೋರಾಟ ಶಾಸಕ ಬಾಲಚಂದ್ರ ಜಾರಕಿಹೋಳಿ ವಿರುದ್ದ ಅಲ್ಲಾ. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುತ್ತಿದ್ದೇವೆ. ಕೌಜಲಗಿ ಹೋಬಳಿ ತಾಲೂಕು ರಚನೆಗೊಳ್ಳುವವರೆಗೆ ಗೋಕಾಕ ತಾಲೂಕಿನಲ್ಲೇ ಮುಂದುವರೆಯಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯತ, ತಾಪಂ, ಜಿಪಂ ಹಾಗೂ ಪಿ.ಕೆ.ಪಿಎಸ್ ನ ಎಲ್ಲ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದರು.
ಗೋಕಾಕ ತಹಶೀಲ್ದಾರ ಜಿ.ಎಸ್ ಮಳಗಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ,ಕಂದಾಯ ಸಚಿವ ಕಗೋಡು ತಿಮ್ಮಪ್ಪ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಬಾಗೋಜೀಕೊಪ್ಪದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,ಕೌಜಲಗಿ ಸಂಸ್ಥಾನಿಕರ ಊರು 4 ದಶಕಗಳಿಂದ ತಾಲೂಕಿಗಾಗಿ ಹೋರಾಡುತ್ತಿದ್ದು.ಹೋಬಳಿ ಕೇಂದ್ರವು ಆಗಿದೆ. ತಾಲೂಕಿಗೆ ಬೇಕಾಗಿರುವ ಎಲ್ಲ ಅರ್ಹತೆಗಳನ್ನು ಕೌಜಲಗಿ ಪಡೆದುಕೊಂಡಿದ್ದು ಕೌಜಲಗಿಯ ಜನ ಹೋರಟದ ಕಿಚ್ಚನ್ನು ಹಚ್ಚಿಕೊಂಡರೆ.ಕೌಜಲಗಿ ಕಂಡಿತಯಾಗಿ ತಾಲೂಕಾಗುತ್ತದೆ.ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮೂಡಲಗಿ ತಾಲೂಕು ಮಾಡಿದಂತೆ ಈ ಭಾಗದ ಅಭಿವೃದ್ದಿಗಾಗಿ ಕೌಜಲಗಿ ಹೋಬಳಿಯನ್ನು ಮೂಡಲಗಿಗೆ ಸೇರಿಸದೆ ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿಸಲು ಪ್ರಯತ್ನ ಮಾಡಬೇಕು. ಇದರಿಂದ ರಾಮದುರ್ಗ,ಸವದತ್ತಿ ತಾಲೂಕಿನ ಗಡಿ ಗ್ರಾಮಗಳಿಗೆ ಹೆಚ್ಚಿನ ಅನೂಕುಲವಾಗುತ್ತದೆ ಅಲ್ಲಿಯವರೆಗೆ ಗೋಕಾಕ ತಾಲೂಕಿನಲ್ಲಿಯೋ ಕೌಜಲಗಿ ಹೋಬಳಿ ಮುಂದುವರೆಯಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಗೋಕಾಕ ತಹಶಿಲ್ದಾರ ಜಿ.ಎಸ್ ಮಲಗಿಯವರು ಮನವಿ ಸ್ವೀಕರಿಸಿ .ತಕ್ಷಣವೇ ನಿಮ್ಮ ಮನವಿಗಳನ್ನು ಸರಕಾರಕ್ಕೆ ಮುಟ್ಟಿಸುತ್ತೇನೆಂದು ಹೇಳಿದರು.
ಮನವಿ ಅರ್ಪಣೆಯ ಸಂದರ್ಭದಲ್ಲಿ ಅಶೋಕ ಪರುಶೆಟ್ಟಿ.ಶಿವಾನಂದ ಲೋಕನ್ನವರ.ರಾಯಪ್ಪ ಬಳ್ಳೋಲದಾರ.ಶಾಂತಪ್ಪ ಹಿರೇಮೇತ್ರಿ. ಸುಭಾಸ ಕೌಜಲಗಿ, ಶಿವಲಿಂಗ ಬಳಿಗಾರ.ಲಕ್ಷ್ಮಣ ಚಂದರಗಿ.ಜಾಖಿರಸಾಬ ಜಮಾದಾರ.ರೈತ ಮುಖಂಡರಾದ ಉದ್ದಪ್ಪ ಹಳ್ಳೂರ, ಮಾರುತಿ ಥರಕರ, ಮಾಂತಪ್ಪ ಶಿವನಮಾರಿ, ರವಜಾನ ಪೋದಿ, ಕರೇಪ್ಪ ಬಿಜಗುಪ್ಪಿ, ರಾಮಯ್ಯಸ್ವಾಮಿ ಮಠದ, ಸಾಹಿತಿ ರಾಜು ಕಂಬಾರ, ನೀಲಪ್ಪ ಕೇವಟಿ ಮುಂತಾದವರು ಇದ್ದರು.

Related posts: