ಮೂಡಲಗಿ:ಜನೇವರಿ ತಿಂಗಳೊಳಗೆ ಅರಭಾವಿ ಕ್ಷೇತ್ರದ 10 ಗ್ರಾಮ ಪಂಚಾಯತಿಗಳಲ್ಲಿ 3000 ಶೌಚಾಲಯಗಳನ್ನು ನಿರ್ಮಿಸುವ ಉದ್ಧೇಶ ಹೊಂದಲಾಗಿದೆ : ಶಾಸಕ ಬಾಲಚಂದ್ರ
ಜನೇವರಿ ತಿಂಗಳೊಳಗೆ ಅರಭಾವಿ ಕ್ಷೇತ್ರದ 10 ಗ್ರಾಮ ಪಂಚಾಯತಿಗಳಲ್ಲಿ 3000 ಶೌಚಾಲಯಗಳನ್ನು ನಿರ್ಮಿಸುವ ಉದ್ಧೇಶ ಹೊಂದಲಾಗಿದೆ : ಶಾಸಕ ಬಾಲಚಂದ್ರ
ಮೂಡಲಗಿ ಡಿ 30 : ಜನೇವರಿ ತಿಂಗಳೊಳಗೆ ಅರಭಾವಿ ಕ್ಷೇತ್ರದ 10 ಗ್ರಾಮ ಪಂಚಾಯತಿಗಳಲ್ಲಿ 3000 ಶೌಚಾಲಯಗಳನ್ನು ನಿರ್ಮಿಸುವ ಉದ್ಧೇಶ ಹೊಂದಲಾಗಿದೆ. ಬೀಸನಕೊಪ್ಪ ಗ್ರಾಮಕ್ಕೆ ನೂರು ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಮುಕ್ತ ಶೌಚಾಲಯ ಗ್ರಾಮವನ್ನಾಗಿ ರೂಪಿಸಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಬೀಸನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ತಲಾ 15 ಸಾವಿರ ರೂ, ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ತಲಾ 12 ಸಾವಿರ ರೂ.ಗಳ ಅನುದಾನದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಶೌಚಾಲಯಗಳಿಗೆ ತಲಾ 3500 ರೂ.ಗಳನ್ನು ವೈಯಕ್ತಿಕವಾಗಿ ನೀಡುತ್ತಿರುವುದಾಗಿ ಅವರು ಹೇಳಿದರು.
ಬೀಸನಕೊಪ್ಪ ಗ್ರಾಮಾಭಿವೃದ್ಧಿಗೆ ಸರ್ಕಾರದಿಂದ ಹಲವು ಜನೋಪಯೋಗಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. 4.50 ಕೋಟಿ ರೂ. ವೆಚ್ಚದ ಪಿಎಂಜಿಎಸ್‍ವಾಯ್ ಯೋಜನೆಯಡಿ ಢವಳೇಶ್ವರದಿಂದ ಬೀಸನಕೊಪ್ಪ ಮಾರ್ಗವಾಗಿ ಕಮಲದಿನ್ನಿವರೆಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿಯ ಹನಮಂತ ದೇವರ ದೇವಸ್ಥಾನದ ದ್ವಾರ ಬಾಗಿಲ ನಿರ್ಮಾಣಕ್ಕಾಗಿ 10 ಲಕ್ಷ ರೂ.ಗಳನ್ನು ನೀಡಿದ್ದಾಗಿ ಅವರು ಹೇಳಿದರು.
ಮಾರ್ಚ ತಿಂಗಳೊಳಗೆ ರೈತರ ಹೊಲದ ರಸ್ತೆಗಳನ್ನು ದುರಸ್ತಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಎಲ್ಲರೂ ಒಗ್ಗೂಡಿ ನೆರವೇರಿಸಬೇಕು. ಯುವಕರು ಸಹ ಗ್ರಾಮೀಣ ಪ್ರಗತಿಗೆ ದುಡಿಯುವಂತಾಗಬೇಕು. ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ನೀಡಬೇಕೆಂದು ಅವರು ಹೇಳಿದರು.
ಮುಖಂಡ ಅಶೋಕ ಪರುಶೆಟ್ಟಿ, ಹುಣಶ್ಯಾಳ ಪಿವಾಯ್ ಪಿಕೆಪಿಎಸ್ ಅಧ್ಯಕ್ಷ ಎ.ಟಿ. ಗಿರಡ್ಡಿ, ದುಂಡಪ್ಪ ಕಲ್ಲಾರ, ಬಸಪ್ಪ ಗಿರಡ್ಡಿ, ಅರ್ಜುನ ಜಿಡ್ಡಿಮನಿ, ಹಣಮಂತ ರಡ್ರಟ್ಟಿ, ಭೀಮಶಿ ವೆಂಕಟಾಪೂರ, ಬಸಪ್ಪ ಸಾರಾಪೂರ, ಪ್ರಕಾಶ ಪಾಟೀಲ, ಮಲ್ಲಪ್ಪ ಬಟಕುರ್ಕಿ, ಬಸಪ್ಪ ಉಳ್ಳಾಗಡ್ಡಿ, ಶ್ರೀಶೈಲ ರಡ್ರಟ್ಟಿ, ವೆಂಕಟೇಶ ಪಾಟೀಲ, ಪ್ರಕಾಶ ದರೂರ, ಮುಂತಾದವರು ಉಪಸ್ಥಿತರಿದ್ದರು.