RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಫೈಲವಾನ್ ಆದಮಸಾಬ ಮೂಡಲಗಿ ಅವರ ತಂಡದ ಸಾಹಸ ಕ್ರೀಡಾ ಪ್ರದರ್ಶನಕ್ಕೆ ಫೀದಾ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಫೈಲವಾನ್ ಆದಮಸಾಬ ಮೂಡಲಗಿ ಅವರ ತಂಡದ ಸಾಹಸ ಕ್ರೀಡಾ ಪ್ರದರ್ಶನಕ್ಕೆ ಫೀದಾ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ 

ಫೈಲವಾನ್ ಆದಮಸಾಬ ಮೂಡಲಗಿ ಅವರ ತಂಡದ ಸಾಹಸ ಕ್ರೀಡಾ ಪ್ರದರ್ಶನಕ್ಕೆ ಫೀದಾ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಡಿ 31 : ದೂರದರ್ಶನ ಹಾವಳಿ, ಪಾಶ್ಚಿಮಾತ್ಯ ಸಂಸ್ಕಂತಿ ಪ್ರಭಾವಕ್ಕೆ ಒಳಗಾಗಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಕ್ರೀಡೆಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ಮೂಡಲಗಿಯ ಆದಮಸಾಹೇಬ ಫೈಲವಾನ್ ಮತ್ತು ಅವರ ತಂಡ ತೋರಿಸಿಕೊಟ್ಟಿದೆ.

ಬಂಡಿಯ ನಾಲ್ಕು ಚಕ್ರಗಳನ್ನು ಎದೆಯ ಮೇಲೆ ಇಟ್ಟುಕೊಂಡು ಪ್ರದರ್ಶನ ಮಾಡುತ್ತಿರುವುದು.

ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಇತ್ತೀಚೆಗೆ ನೂರಾರು ಸಭಿಕರ ಮಧ್ಯ ತಮ್ಮ ಶಕ್ತಿ ಪ್ರದರ್ಶನ ತೋರಿಸಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಸ್ವತಃ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆಯೂ ಶಕ್ತಿ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

60 ಕಿಲೋ ತೂಕದ ನೇಗಿಲನ್ನು ಹಲ್ಲಿನಿಂದ ಎತ್ತುವ ಪ್ರದರ್ಶನ.

ಮೂಡಲಗಿಯ ಫೈಲವಾನ್ ಕುಟುಂಬದ ಆದಮಸಾಹೇಬ, ಮುಗುಟಸಾಬ, ಮಲೀಕಸಾಬ, ರಾಜೇಸಾಬ, ಶಬ್ಬೀರ, ರಿಯಾಜ್, ಅನ್ವರ, ಆಸೀನಸಾಬ ಹಾಗೂ ಸಲ್ಮಾನ ಅವರು ತಮ್ಮ ಜೀವದ ಹಂಗು ತೊರೆದು ಶಕ್ತಿ ಪ್ರದರ್ಶನ ಮಾಡಿರುವುದು ನೆರೆದಿದ್ದ ಸಭಿಕರನ್ನು ಮೂಕವಿಸ್ಮಿತಗೊಳಿಸಿತು.

ಎದೆಯ ಮೇಲೆ 50 ಕಿಲೋ ಕಲ್ಲನ್ನು ಒಡೆಯುವ ದೃಶ್ಯ.

560 ಕಿಲೋ ಒಳಕಲ್ಲನ್ನು ಎದೆಯ ಮೇಲಿನಿಂದ ಹಾಯಿಸುವುದು, 70 ಕಿಲೋ ಕಲ್ಲನ್ನು ಬೆನ್ನಿನ ಮೇಲಿಟ್ಟು ಒಡೆಯುವುದು, 60 ಕಿಲೋ ತೂಕದ ನೇಗಿಲನ್ನು ಹಲ್ಲಿನಿಂದ ಎತ್ತುವುದು, 80 ಕಿಲೋ ಎರಡು ಬಂಡಿ ಗಾಲಿಗಳನ್ನು ಎರಡು ಭುಜಗಳಿಂದ ಎತ್ತಿ ಫ್ಯಾನಿನಂತೆ ತಿರುಗಿಸುವುದು, ಎದೆಯ ಮೇಲೆ 50 ಕಿಲೋ ಕಲ್ಲನ್ನು ಇಟ್ಟು ಒಡೆಯವುದು, ಜೀಪನ್ನು ಎದೆಯ ಮೇಲಿನಿಂದ ಹಾಯಿಸುವುದು, ಬಂಡಿಯ ನಾಲ್ಕು ಚಕ್ರಗಳನ್ನು ಎದೆಯ ಮೇಲಿಟ್ಟುಕೊಳ್ಳುವುದು, 30 ಕಿಲೋ ಕಲ್ಲನ್ನು ಕೈಯಿಂದಲೇ ಒಡೆಯುವ ಸಾಹಸ ಕ್ರೀಡೆಗಳು ಜನಮನಸೂರೆಗೊಂಡವು.

560 ಕಿಲೋ ಒಳಕಲ್ಲನ್ನು ಎದೆಯ ಮೇಲಿನಿಂದ ಹಾಯಿಸುವುದು

ಫೈಲವಾನ್ ಆದಮಸಾಬ ಮೂಡಲಗಿ ಅವರ ತಂಡದ ಸಾಹಸ ಕ್ರೀಡಾ ಪ್ರದರ್ಶನಕ್ಕೆ ಫೀದಾ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಇಂತಹ ಸಾಹಸ ಕ್ರೀಡೆಗಳು ಇಂದು ಮಾಯವಾಗುತ್ತಿವೆ. ಇಂತಹ ಕ್ರೀಡೆಗಳನ್ನು ಪ್ರದರ್ಶಿಸಿದರೆ ನಮ್ಮ ಗತಕಾಲದ ವೈಭವವು ಮತ್ತೇ ಮರುಕಳಿಸಬಹುದು. ಜೀವದ ಹಂಗುಬಿಟ್ಟು ಪ್ರದರ್ಶನ ಮಾಡುತ್ತಿರುವ ಫೈಲವಾನ್ ಕುಟುಂಬಕ್ಕೆ ನೆರವು ಕಲ್ಪಿಸುವ ಭರವಸೆ ನೀಡಿದರು.

Related posts: