ಮೂಡಲಗಿ :ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಮಾರ್ಚ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು : ಶಾಸಕ ಬಾಲಚಂದ್ರ
ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಮಾರ್ಚ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು : ಶಾಸಕ ಬಾಲಚಂದ್ರ
ಮೂಡಲಗಿ ಜ 3: ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಮಾರ್ಚ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ವಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಒಟ್ಟು 80 ಲಕ್ಷ ರೂ.ಗಳ ವೆಚ್ಚದ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ವಡೇರಹಟ್ಟಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಸರಕಾರದ ಹಲವು ಜನೋಪಯೋಗಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಸಮಗ್ರ ಪ್ರಗತಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು. 30 ಲಕ್ಷ ರೂ. ವೆಚ್ಚದ ಸಕ್ಕರೆ ಕರದಡಿ ವಡೇರಹಟ್ಟಿಯಿಂದ ಮುಧೋಳಮರಡಿವರೆಗೆ ರಸ್ತೆ ಸುಧಾರಣೆ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ಯಾದವಾಡ ಮುಖ್ಯರಸ್ತೆಯಿಂದ ಮರಡಿಸಿದ್ಧೇಶ್ವರ ದೇವಸ್ಥಾನದವರೆಗೆ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ವಡೇರಹಟ್ಟಿಯಿಂದ ಲಕ್ಷ್ಮೀ ದೇವಸ್ಥಾನದವರೆಗೆ ರಸ್ತೆ ಸುಧಾರಣೆಯನ್ನು ಮಾರ್ಚ ತಿಂಗಳೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದರು.
ವಡೇರಹಟ್ಟಿಗೆ ಗ್ರಾಮ ವಿಕಾಸ ಯೋಜನೆ : ವಡೇರಹಟ್ಟಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ 1 ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಗ್ರಾಮವಿಕಾಸ ಯೋಜನೆಯನ್ನು ಜಾರಿಗೊಳಿಸಿದ್ದು ಶೀಘ್ರದಲ್ಲಿಯೇ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈ ಯೋಜನೆ ಅನುಷ್ಠಾನದಿಂದ ಕಾಂಕ್ರೀಟ ರಸ್ತೆ, ಸಮುದಾಯ ಭವನ, ಗರಡಿ ಮನೆ, ದೇವಸ್ಥಾನ ಜೀರ್ಣೋದ್ಧಾರ, ಸೋಲಾರ ದೀಪಗಳು ಸೇರಿದಂತೆ ಅನೇಕ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದರು
ಗುದ್ದಲಿ ಪೂಜೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 30 ಲಕ್ಷ ರೂ. ವೆಚ್ಚದ ಸಕ್ಕರೆ ಕರದಡಿ ರಸ್ತೆ ಕಾಮಗಾರಿ ಹಾಗೂ ಪಿಡಬ್ಲೂಡಿ ಇಲಾಖೆಯ 20 ಲಕ್ಷ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. 30 ಲಕ್ಷ ರೂ. ವೆಚ್ಚದ ಮರಡಿಸಿದ್ಧೇಶ್ವರ ತೋಟ ಹಾಗೂ ಲಕ್ಷ್ಮೀದೇವರ ತೋಟದ ನಿವಾಸಿಗಳಿಗೆ ಕುಡಿಯುವ ನೀರಿನ ಕಾಮಗಾರಿಯನ್ನು ಉದ್ಘಾಟಿಸಿದರು.
ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಮುನ್ಯಾಳ, ತಾಪಂ ಸದಸ್ಯ ಗೋಪಾಲ ಕುದರಿ, ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ವಕೀಲ ಮುತ್ತೆಪ್ಪ ಕುಳ್ಳೂರ, ಬನಪ್ಪ ವಡೇರ, ವಿಠ್ಠಲ ಗಿಡೋಜಿ, ಅಡಿವೆಪ್ಪ ಹಾದಿಮನಿ, ಚಂದ್ರು ಮೋಟೆಪ್ಪಗೋಳ, ಶಿದ್ಲಿಂಗ ಗಿಡೋಜಿ, ರುದ್ರಗೌಡ ಪಾಟೀಲ, ಬಾಲಚಂದ್ರ ಪೂಜೇರಿ, ಸಂಗಪ್ಪ ಪೂಜೇರಿ, ಮಾರುತಿ ಸೊಡ್ರುಗೋಳ, ಅರ್ಜುನ ಕುರಣಗಿ, ಪರಸಪ್ಪ ಸಾರಾಪೂರ, ಶಿವಪ್ಪ ಗಿಡೋಜಿ, ಗೋಪಾಲ ಬೀರನಗಡ್ಡಿ, ರೆಬ್ಬೋಜಿ ಮಳಿವಡೇರ, ಸಿದ್ದಪ್ಪ ಪಡಚಿ, ಶಿದ್ಲಿಂಗ ಕಂಬಳಿ, ಬನಪ್ಪ ಮಳಿವಡೇರ, ಜಿಪಂ ಎಇಇ ಎಂ.ಎಂ. ಘೂಳಪ್ಪನವರ, ಮುಂತಾದವರು ಉಪಸ್ಥಿತರಿದ್ದರು.