ಘಟಪ್ರಭಾ:ಗುರುವಿನ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟು ಪೂಜಿಸಿದರೇ ಜೀವನದಲ್ಲಿ ಮುಕ್ತಿ ದೊರೆಯುತ್ತಿದೆ : ಮುರುಘರಾಜೇಂದ್ರ ಶ್ರೀ
ಗುರುವಿನ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟು ಪೂಜಿಸಿದರೇ ಜೀವನದಲ್ಲಿ ಮುಕ್ತಿ ದೊರೆಯುತ್ತಿದೆ : ಮುರುಘರಾಜೇಂದ್ರ ಶ್ರೀ
ಘಟಪ್ರಭಾ ಜ 4: ಮಾತೃಹೃದಯಿ ನಿಜಗುಣದೇವರು ಈ ಭಾಗದ ಭಕ್ತರಿಗೆ ನಾಡಿನ ಮಠಾಧೀಶರ ದರ್ಶನ ಆಶೀರ್ವಾದ ಉಣಬಡಿಸುತ್ತಾ ಬಂದಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಗೋಕಾಕದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು,
ಅವರು ಬುಧವಾರದಂದು ಸಮೀಪದ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ 19ನೇ ಸತ್ಸಂಗ ಸಂಭ್ರಮ ಸಮಾರಂಭದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಗುರುವಿನ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟು ಪೂಜಿಸಿದರೇ ಜೀವನದಲ್ಲಿ ಮುಕ್ತಿ ದೊರೆಯುತ್ತಿದೆ. ಈ ಸದ್ಗುರುವಿನ ಕೃಪಾ ಆಶೀರ್ವಾದ ಆಗಬೇಕಾದರೆ ಗುರುವಿನ ಮೇಲೆ ಇಟ್ಟ ಪ್ರೀತಿ ಮತ್ತು ಗುರು ಭಕ್ತರ ಮೇಲೆ ಇಟ್ಟಿರುವ ಪ್ರೀತಿಯೇ ಜೀವನದಲ್ಲಿ ಉಜ್ವಲ ಭವಿಷ್ಯ ಹೊಂದಲು ಸಾಧ್ಯವೆಂದರಲ್ಲದೇ ಮನುಷ್ಯ ಧರ್ಮದಿಂದ ನಡೆದುಕೊಳ್ಳಬೇಕು. ಜ್ಞಾನ ಮೂಲಕ ಲೋಕ ಕಲ್ಯಾಣವಾಗುತ್ತದೆ. ನಿಜಗುಣದೇವರು ಸಂಸ್ಕøತಿ, ಸಂಸ್ಕಾರ, ಸಂಗೀತ, ಶೈಕ್ಷಣಿಕ, ಅಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗೈದು ಎಲ್ಲರನ್ನು ಪ್ರೀತಿಯಿಂದ ಕಾಣುವ ಮೂಲಕ ಪ್ರೀತಿಯೇ ದೇವರಾಗಿದ್ದಾರೆ. ಸಿದ್ಧಲಿಂಗ ಯತಿರಾಜರ ಪರಮ ಶಿಷ್ಯರಾಗಿ ಗುರುವಿನ ಕೃಪಾಶೀರ್ವಾದದಿಂದ ಗುರುವಿನ ತೊಟ್ಟಿಲೋತ್ಸವ, ಸತ್ಸಂಗ ಸಮ್ಮೇಳನ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಶ್ರೀಮಠದ ಪೀಠಾಧಿಪತಿ ಪೂಜ್ಯ ಶ್ರೀ ನಿಜಗುಣದೇವರು ಮಾತನಾಡಿ ನಾನು ನನ್ನದು ಎಂಬುದು ಎನಿಲ್ಲ, ಆ ದೇವ ಆಡಿಸಿದಂತೆ ಆಡುವ ಕಾಯಕ ನಮ್ಮದು. ನಾಡಿನ ಹೆಸರಾಂತ ಸತ್ಪುರುಷರ ಆಶೀರ್ವಾದ,ಮಾರ್ಗದರ್ಶನದಿಂದ ನಾನು ಭಕ್ತರ ಇಚ್ಚೆಯಂತೆ ಆಧ್ಯಾತ್ಮಿಕ ಸೇವೆಗೈಯುತ್ತಿರುವೆ ಎಂದರು.
ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀ ನಿಜಗುಣದೇವರು ಅವರಿಗೆ ಬಾಳಪ್ಪ ಕಮತ, ವೆಂಕನಗೌಡ ಪಾಟೀಲ, ಬಸವರಾಜ ಖಡಕಭಾವಿ, ಶಿವಲಿಂಗಪ್ಪ ಕೊಣ್ಣೂರು, ಬಾಳಾಸೋ ಹಿರೆಗೊಂಡ, ರಾಮಪ್ಪ ಬೆಳಗಾವಿ ತುಲಾಭಾರ ಸೇವೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಗುರುನಾಥ ಶಾಸ್ತ್ರೀ ಕರಿಕಟ್ಟಿ ನಿರೂಪಿಸಿದರು.
ವೇದಿಕೆ ಮೇಲೆ ಬಸವಕಲ್ಯಾಣದ ಸಸ್ತಾಪುರದ ಸದಾನಂದ ಸ್ವಾಮಿಜಿ, ಗೂಗದಡಿಯ ಸಿದ್ಧರಾಮ ಮಹಾಸ್ವಾಮಿಜಿ, ತೊಂಡೀಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಬೀದರದ ಗಣೇಶ ಮಹಾರಾಜರು, ಚಿದಾನಂದ ಸ್ವಾಮಿಜಿ, ಭೀಮಾನಂದ ಸ್ವಾಮಿಜಿ, ಚಂಪಮ್ಮತಾಯಿ, ಅನುಸೂಯಾದೇವಿ, ಶಾಂತಮ್ಮ, ಸಿದ್ಧೇಶ್ವರ ತಾಯಿ, ಅಕ್ಕಮಹಾದೇವಿ ಇದ್ದರು.