ಗೋಕಾಕ:ಜ.5.ರಂದು “ಎಲ್ಲಿಗೆ ಬಂತೊ ಯಾರಿಗೆ ಬಂತೋ 47 ರ ಸ್ವಾತಂತ್ರ್ಯ ಎಂಬ ಬೃಹತ ಪ್ರತಿಭಟನಾ ಮೆರವಣಿಗೆ : ರಮೇಶ ಮಾದರ
ಜ.5.ರಂದು “ಎಲ್ಲಿಗೆ ಬಂತೊ ಯಾರಿಗೆ ಬಂತೋ 47 ರ ಸ್ವಾತಂತ್ರ್ಯ ಎಂಬ ಬೃಹತ ಪ್ರತಿಭಟನಾ ಮೆರವಣಿಗೆ : ರಮೇಶ ಮಾದರ
ಗೋಕಾಕ ಜ 4 : ದಲಿತ ಸಂಘರ್ಷ ಸಮಿತಿಯ ತಾಲೂಕಾ ಘಟಕದ ನೇತ್ರತ್ವದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಒತ್ತಾಯಿಸಿ “ಎಲ್ಲಿಗೆ ಬಂತೊ ಯಾರಿಗೆ ಬಂತೋ 47 ರ ಸ್ವಾತಂತ್ರ್ಯ ಎಂಬ ಬೃಹತ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್‍ಎಸ್ ಜಿಲ್ಲಾ ಸಂಚಾಲಕ ರಮೇಶ ಮಾದರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು, ಸರ್ಕಾರಗಳ ದಲಿತ ವಿರೋಧಿ ನೀತಿಯನ್ನು ಖಂಡಿಸಿ, ಸಂವಿಧಾನ ಬದ್ಧ ವಿವಿಧ ಹಕ್ಕೋತ್ತಾಯಗಳಿಗಾಗಿ ಆಗ್ರಹಿಸಿ ಜ.5 ರಂದು ಮುಂಜಾನೆ 10.30 ಗಂಟೆಗೆ ನಗರದ ಶ್ರೀ ಸಂಗೋಳ್ಳಿ ರಾಯಣ್ಣ ವೃತ್ತದಿಂದ ತಹಶೀಲದಾರ ಕಚೇರಿಗೆ ತೆರಳಿ ತಹಶೀಲದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಪ್ರತಿಭಟನೆಯಲ್ಲಿ ದಲಿತ ಪರ ಸಂಘಟನೆಗಳು, ರೈತ ಪರ ಹೋರಾಟಗಾರರು, ಬುದ್ದಿ ಜೀವಿಗಳು, ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮಾದರ ಕೋರಿದ್ದಾರೆ.