RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ

ಗೋಕಾಕ:ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ 

ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ

ಗೋಕಾಕ ಜ 5 : ಸನ್ 2016-17ನೇ ಸಾಲಿನ ತಾಲೂಕ ಪಂಚಾಯತ ಜಮಾಬಂದಿಯ ಸಭೆಯನ್ನು ಶುಕ್ರವಾರದಂದು ತಾಲೂಕ ಪಂಚಾಯತ ಸಭಾ ಭವನದಲ್ಲಿ ಜರುಗಿತು.
ತಾ. ಪಂ ಯೋಜನಾಧಿಕಾರಿ ಹಾಗೂ ಸಹಾಯಕ ಲೆಕ್ಕಾಧಿಕಾರಿ ಬಿ.ಆರ್ ಪಾಟೀಲ ಅವರು ಜಮಾಬಂದಿ ವರದಿಯ ಮಾಹಿತಿಯನ್ನು ನೀಡಿದರು. ಸದರಿ ಸಾಲಿನಲ್ಲಿ ಅನುಷ್ಠಾನಗೊಂಡ ಸರ್ಕಾರದ ವಿವಿಧ ಯೋಜನೆಗಳ ಹಾಗೂ ಇಲಾಖೆಗಳಿಗೆ 148.72 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ, ವೇತನ ಮತ್ತು ವೇತನೇತರ ಖರ್ಚು 135.27 ಕೋಟಿ ರೂ. ಗಳಾಗಿದೆ. ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ ಎಂದು ತಿಳಿಸಿದರು.
ಬೆಳಗಾವಿ ಜಿ.ಪಂ. ಉಪ ಅರಣ್ಯ ಸಂರಕ್ಷಣಾಧಿಕಾರಿ  ಅಶೋಕ ಆರ್. ಪಾಟೀಲ ನೊಡಲ್ ಅಧಿಕಾರಿಯಾಗಿ ಆಗಮಿಸಿದ್ದರು. ತಾ.ಪಂ. ಅಧ್ಯಕ್ಷೆ ಸುನಂದಾ ಕರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಸದಸ್ಯರಾದ ಸಿದ್ದಪ್ಪ ಸನ್ನಾಯಿಕ, ಘೋಳಪ್ಪ ಹಡಗಿನಾಳ, ಸುಮಿತ್ರಾ ಅಂತರಗಟ್ಟಿ, ಲಗಮಣ್ಣಾ ನಾಗನ್ನವರ, ಚಿದಾನಂದ ಶಿರಗಾಂವಿ, ಭರಮಪ್ಪ ಮುತ್ತೇಣ್ಣವರ, ನಿಂಗಪ್ಪ ಬಂಬಲಾಡಿ, ಶಾಂತಪ್ಪ ಹಿರೇಮೇತ್ರಿ, ನೀಲವ್ವ ಬಳಿಗಾರ, ಕಾರ್ಯನಿರ್ವಾಹಕ ಅಧಿಕಾರಿ ಎಫ್. ಜಿ. ಚಿನ್ನನವರ, ವ್ಯವಸ್ಥಾಪಕರು ಎಸ್. ಡಿ. ಮಳಿಮಠ ಸೇರಿದಂತೆ ಇತರರು ಇದ್ದರು.

Related posts: