ಘಟಪ್ರಭಾ:ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು : ಭರಮಣ್ಣಾ ಉಪ್ಪಾರ
ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು : ಭರಮಣ್ಣಾ ಉಪ್ಪಾರ
ಘಟಪ್ರಭಾ ಜ 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ರಾಜಾಪೂರ ಇವುಗಳ ಸಂಯುಕ್ತಾಶ್ರಯ ಮತ್ತು ಡಾ|| ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜಾಪೂರ ವಲಯ ಮಟ್ಟದ ಕೃಷಿ ಸಂಕೀರಣ ಸಮಾರಂಭವು ಸಮೀಪದ ತುಕ್ಕಾನಟ್ಟಿ ಗ್ರಾಮದಲ್ಲಿ ಶುಕ್ರವಾರದಂದು ಜರುಗಿತು.
ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಭರಮಣ್ಣಾ ಉಪ್ಪಾರ ಉದ್ಘಾಟಿಸಿ ಮಾತನಾಡಿ, ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು. ಇಂತಹ ವಿಚಾರ ಸಂಕೀರ್ಣಗಳು ಗ್ರಾಮದಲ್ಲಿ ಜರುಗುವದರಿಂದ ರೈತಾಪಿ ಜನರಿಗೆ ಹೊರ ದೇಶದ ಜನರು ಅಲ್ಪ ಭೂಮಿಯಲ್ಲಿ ಹೆಚ್ಚಿನ ಬೆಳೆ ಹೇಗೆ ಬೆಳೆಯುತ್ತಾರೆ ಎಂಬುದರ ಮಾಹಿತಿ ದೊರೆಯುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಜು ಬೈರುಗೋಳ ಆಧುನಿಕ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ಸುದೀರ್ಘ ಮಾಹಿತಿ ನೀಡಿದರು. ಇನ್ನೂರ್ವ ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ವಿಜ್ಞಾನಿ ಹಾಗೂ ಐ.ಸಿಎ.ಆರ್ ಬಡ್ಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಿ.ಸಿ.ಚೌಗಲೆ ಮಾತನಾಡಿ ಕೃಷಿಯಲ್ಲಿ ಹೈನುಗಾರಿಕೆ ಹಾಗೂ ಸಾವಯವ ಗೊಬ್ಬರಗಳ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಕ್ಕಾನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ನಾವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕ ಸುರೇಶ ಮೈಲಿ, ತಾ.ಪಂ. ಸದಸ್ಯರಾದ ಶಿವಪ್ಪ ಮರ್ದಿ, ಹಿರಿಯರಾದ ಸಿದ್ದಪ್ಪ ಹಮ್ಮನ್ನವರ, ಪ್ರಕಾಶ ಬಾಗೇವಾಡಿ, ಭೀಮಶಿ ಗದಾಡಿ, ಮೇಲ್ವಿಚಾರಕರು ಸೇವಾ ಪ್ರತಿನಿದಿಗಳು ರಾಜಾಪೂರ, ಅಧ್ಯಕ್ಷರು, ಪದಾಧಿಕಾರಿಗಳು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕೃಷಿ ಮೇಲ್ವಿಚಾರಕರು ಸೇರಿದಂತೆ ತುಕ್ಕಾನಟ್ಟಿ ಗ್ರಾಮದ ಹಿರಿಯರು ಸೇರಿದಂತೆ ಅನೇಕರು ಇದ್ದರು.