ಘಟಪ್ರಭಾ:ದಿವ್ಯಾಂಗರಿಗೆ ದ್ವಿಚಕ್ರ ವಾಹನ ವಿತರಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ
ದಿವ್ಯಾಂಗರಿಗೆ ದ್ವಿಚಕ್ರ ವಾಹನ ವಿತರಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ
ಘಟಪ್ರಭಾ ಜ 6: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸನ್ 2017-18 ನೇ ಸಾಲಿನ ಎಸ್.ಎಫ್.ಸಿ ಯೋಜನೆಯ ಶೇ. 3 ರಷ್ಟು ಅನುದಾನದಲ್ಲಿ ದಿವ್ಯಾಂಗರಿಗೆ ದ್ವಿಚಕ್ರ ವಾಹನವನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎಂ.ದಳವಾಯಿ, ಸುಭಾಸ ಹುಕ್ಕೇರಿ, ಗುರಸಿದ್ದ ಅಂಗಡಿ, ಪ.ಪಂ ಅಧ್ಯಕ್ಷೆ ಸುಜಾತಾ ಪೂಜೇರಿ, ಉಪಾಧ್ಯಕ್ಷೆ ಕಸ್ತೂರಿ ಚೌಕಶಿ, ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ಗಂಗಾಧರ ಬಡಕುಂದ್ರಿ, ರಾಮಪ್ಪಾ ನಾಯಿಕ, ಈರಗೌಡಾ ಕಲಕುಟಗಿ, ಪ್ರವೀಣ ಮಟಗಾರ, ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಸುರೇಶ ಪೂಜೇರಿ, ಕೆಂಪಣ್ಣ ಚೌಕಶಿ, ಇಕ್ಬಾಲ ಮೋಕಾಶಿ, ನಾಗರಾಜ ಜಂಬ್ರಿ, ಸಿಬ್ಬಂದಿಗಳಾದ ಆನಂದ ಬಡಾಯಿ ಇದ್ದರು.