RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ

ಗೋಕಾಕ:ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ 

ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ
ಗೋಕಾಕ : ಜ.6 : ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ ಎಂದು ಸಾಹಿತಿ ಜಯಾನಂದ ಮಾದರ ಅಭಿಪ್ರಾಯ ಪಟ್ಟರು.
ಅವರು ಶನಿವಾರದಂದು ನಗರದ ಕಾಡಸಿದ್ದೇಶ್ವರ ಮಠದಲ್ಲಿ ಕರ್ನಾಟಕ ರಕ್ಷಣಾ  ವೇದಿಕೆ ಗೋಕಾಕ ತಾಲೂಕಾ ಘಟಕ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಸುಮಾರು 2000 ವರ್ಷಗಳ ಇತಿಹಾಸವುಳ್ಳ ಕನ್ನಡದ ಭಾಷೆಯನ್ನು ರಕ್ಷಿಸಲು ಸಂಘಟನೆಗಳು , ಪ್ರಾಧಿಕಾರಗಳು ಹುಟ್ಟಿಕೊಂಡಿರುವುದು ನಮ್ಮ ದುರ್ದೈವ. ಕನ್ನಡಿಗರ ಉದಾರ ಮನೋಭಾವದಿಂದ ಇಂದು ಕನ್ನಡ ಭಾಷೆಯನ್ನು ಬೇರೆ ಭಾಷೆಗಳು ಆಕ್ರಮಣ ಮಾಡುತ್ತಿವೆ. ಇದರ ಬಗ್ಗೆ ಜಾಗೃತಿ ಮೂಡಿಸಿ ಪರಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸುವ ಮಹತ್ತರ ಕಾರ್ಯ ಕನ್ನಡದ ಮನಸ್ಸುಗಳು ಮಾಡಬೇಕಾಗಿದೆ.

 

ಕರವೇ ಕಾರ್ಯರ್ತರ ಸಮಾವೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿಸುತ್ತಿರುವುದು

ಕನ್ನಡ ಭಾಷೆಯನ್ನು ಬೇರು ಮಟ್ಟದಲ್ಲಿ ಬೆಳೆಸಲು ಗ್ರಾಮೀಣ ಭಾಗಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸುವ ಜೊತೆಗೆ ಭಾಷಾಭಿಮಾನ ಜಾಗೃತಿಗೊಳಿಸಲು ನಾವೆಲ್ಲ ಪಣ ತೊಡಬೇಕಾಗಿದೆ. ಶಿಕ್ಷಕ, ಸೈನಿಕ, ಕೃಷಿಕ ಇರುವುದರಿಂದ ನಾವಿಂದು ಉತ್ತಮ ಬದುಕನ್ನು ಸಾಗಿಸುತ್ತಿದ್ದೇವೆ. ಅವರನ್ನು ಗೌರವಿಸಿ, ಪೂಜಿಸುವ ಕೆಲಸ ಇಂದು ನಾವೆಲ್ಲ ಮಾಡಬೇಕಲ್ಲದೆ ಕನ್ನಡದ ಮನಸ್ಸುಗಳನ್ನು ಗಟ್ಟಿಗೊಳಿಸುವ ಕಾಯಕ ಕನ್ನಡಪರ ಸಂಘಟನೆಗಳಿಂದ ಆಗಬೇಕಾಗಿದೆಯಂದು ಜಯಾನಂದ ಮಾದರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ.ರ.ವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಕನ್ನಡ ಭಾಷೆಯ ಉಳುವಿಗಾಗಿ ಗಡಿಭಾಗದಲ್ಲಿರುವ ಕನ್ನಡದ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಮಾಡುವ ಕಾರ್ಯ ಮುಂದಿನ ದಿನಗಳಲ್ಲಿ ಕರವೇಯಿಂದ ಹಮ್ಮಿಕೊಂಡು ಗಡಿ ಭಾಗಗಳಲ್ಲಿ ಕನ್ನಡ ಮತ್ತು ಮರಾಠಿ ಭಾಷೆಗಳ ಮಧ್ಯ ಸಾಮರಸ್ಯ ಸಾರುವ ಕಾರ್ಯಕ್ರಮಗಳು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಾಡಲು ಪ್ರಾಮಾಣೀಕ ಪ್ರಯತ್ನ ಮಾಡಲಾಗುವುದೆಂದು ಹೇಳಿದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ 32 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಗರದ ಖ್ಯಾತ ವೈದ್ಯ ಡಾ|| ಬಸವರಾಜ ಮದಭಾಂವಿ ಮತ್ತು ಸಂಗೀತ ಕ್ಷೇತ್ರದಲ್ಲಿ ಅಮೋಘ ಸಾಧನೆಗೈಯುತ್ತಿರುವ ಸ್ಥಳೀಯ ಕಲಾವಿದ ಗುರುಪಾದ ಮದನ್ನವರ ಹಾಗೂ ನೂತನವಾಗಿ ಕರವೇ ಯುವ ಘಟಕದ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ, ಕರವೇ ಮಹಿಳಾ ನೂತನ ಜಿಲ್ಲಾಧ್ಯಕ್ಷೆ ಶ್ರೀಮತಿ ಫರೀದಾ ದೇವಲಾಪೂರೆ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಉಪನ್ಯಾಸಕರಾಗಿ ಆಗಮಿಸಿದ ಗೋಕಾಕ ಉಪಕಾರಾಗೃಹದ ಮುಖ್ಯ ಪೇದೆ ಶಕೀಲ ಜಕಾತಿ ಅವರು ಕನ್ನಡ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ವೇದಿಕೆ ಸಂಸ್ಕೃತಿಕ ಘಟಕ ಅಧ್ಯಕ್ಷ ಶಿವಾನಂದ ಪೂಜೇರಿ ನಿರೂಪಿಸಿ ವಂದಿಸಿದರು.
ಈ ಸಂದರ್ಬದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಮಹಾದೇವ ಮಕ್ಕಳಗೇರಿ, ಹನೀಫಸಾಬ ಸನದಿ, ರಹೇಮಾನ ಮೋಕಾಶಿ, ರಮೇಶ ಕಮತಿ, ಮಲ್ಲು ಸಂಪಗಾರ, ಕೆಂಪಣ್ಣಾ ಕಡಕೋಳ, ಶೆಟ್ಟೆಪ್ಪ ಗಾಡಿವಡ್ಡರ, ಲಕ್ಷ್ಮಣ ಗೊರಗುದ್ದಿ, ಬಸವರಾಜ ಗಾಡಿವಡ್ಡರ, ಸಂಜು ಗಾಡಿ ವಡ್ಡರ, ದುಂಡಪ್ಪ ಮೆಳವಂಕಿ, ಅಶೋಕ ಬಂಡಿವಡ್ಡರ, ದುರ್ಗಪ್ಪ ಬಂಡಿವಡ್ಡರ, ಶಾನೂಲ ದೇಸಾಯಿ, ಮಲ್ಲಪ್ಪ ತಲೆಪ್ಪಗೋಳ, ಫಕೀರಪ್ಪ ಗಣಾಚಾರಿ, ರಮೇಶ ನಾಕಾ, ಗುರು ಮುನ್ನೋಳಿಮಠ ಸೇರಿದಂತೆ ಇನ್ನೂ ಅನೇಕರ ಉಪಸ್ಥಿತರಿದ್ದರು.
ನಂತರ ಕಲಾವಿದ ಕಾಶಿನಾಥ ಸಂಸುದ್ಧಿ ಮತ್ತು ತಂಡದಿಂದ ಸಾಂಸ್ಕಂತಿಕ ಕಾರ್ಯಕ್ರಮಗಳು ಜರುಗಿದವು.

Related posts: