ಗೋಕಾಕ:ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಪ್ರತಿಭಟನೆ : 100 ಕ್ಕೂ ಹೆಚ್ಚು ಡಿಎಸ್ಎಸ್ ಕಾರ್ಯಕರ್ತರ ಬಂಧನ
ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಪ್ರತಿಭಟನೆ : 100 ಕ್ಕೂ ಹೆಚ್ಚು ಡಿಎಸ್ಎಸ್ ಕಾರ್ಯಕರ್ತರ ಬಂಧನ
ಗೋಕಾಕ ಜ 7 : ಗೋಕಾಕ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಗೆ ಆಗಮಿಸಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ವಿರುದ್ಧ ಪ್ರತಿಭಟನೆಗೆ ಮುಂದಾದ ಡಿಎಸ್ಎಸ್ ಕಾರ್ಯಕರ್ತರನ್ನು ನಗರದ ಬಸವೇಶ್ವರ ವೃತ್ತದಲ್ಲಿ ಬಂಧಿಸಿರುವ ಪೊಲೀಸರು ನಗರದ ಹೊರ ವಲಯದಲ್ಲಿರುವ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಇರಿಸಿರುವ ಘಟನೆ ರವಿವಾರ ಮುಂಜಾನೆ ಜರುಗಿದೆ
ಡಾ . ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ತಿದ್ದುಪಡಿ ಮಾಡುವುದಾಗಿ ಮತ್ತು ಸಂವಿಧಾನ ಬದಲಿಸವುದಾಗಿ ಹೇಳಿಕೆಯನ್ನು ವಿರೋಧಿಸಿ ರಾಜ್ಯದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರು ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಲು ಮುಂದಾದಾಗ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಪೋಲಿಸರು ಬಂಧಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸತ್ಯಪ್ಪ ಕರವಾಡೆ, ಜಿಲ್ಲಾ ಸಂಚಾಲಕ ರಮೇಶ ಮಾದರ, ಲಕ್ಷ್ಮಣ ತೆಳಗಡೆ , ಬೀರಪ್ಪ ಮೈಲನ್ನವರ , ರಮೇಶ್ ಕರಿಗಾರ , ರವಿ ಕಡಕೋಳ, ಶಿವಾನಂದ ಹೊಸಮನಿ , ಸುರೇಶ್ ಸಣ್ಣಕ್ಕಿ , ವೀರಭದ್ರ ಮೈಲನ್ನವರ , ಬಬಲೇಪ್ಪ ಮಾದರ , ಜಿಲ್ಲಾ ಮಹಿಳಾ ಸಂಚಾಲಕಿ ಸುಧಾ ಮುರಕುಂಬಿ, ಬಾಳೇಶ ಸಂತವ್ವಗೋಳ, ಅಲ್ಲಾಭಕ್ಷ ಮುಲ್ಲಾ, ದುರ್ಗಪ್ಪ ಮೇತ್ರಿ, ದೊಡ್ಡವ್ವ ತೇಳಗೇರಿ,ಸೇರಿದಂತೆ 100 ಕ್ಕೂ ಹೆಚ್ಚು ಕಾರ್ಯರ್ತರನ್ನು ಬಂಧಿಸಲಾಗಿದೆ