RNI NO. KARKAN/2006/27779|Saturday, October 19, 2024
You are here: Home » breaking news » ಖಾನಾಪುರ:ವಿದ್ಯಾರ್ಥಿಗಳು ಶಿಕ್ಷಣ ‌ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು : ಡಾ.ಚಂದ್ರಶೇಖರ ಲಮಾಣಿ

ಖಾನಾಪುರ:ವಿದ್ಯಾರ್ಥಿಗಳು ಶಿಕ್ಷಣ ‌ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು : ಡಾ.ಚಂದ್ರಶೇಖರ ಲಮಾಣಿ 

ವಿದ್ಯಾರ್ಥಿಗಳು ಶಿಕ್ಷಣ ‌ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು : ಡಾ.ಚಂದ್ರಶೇಖರ ಲಮಾಣಿ

ಖಾನಾಪುರ/ಹಳಿಯಾಳ ಜ 7 : ಸರಕಾರಿ ಕಾಲೇಜುಗಳಿಗೆ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ, ಹೆಚ್ಚಿನ ಸಹಾಯ-ಸಹಜಾರ ನೀಡುತ್ತಿದೆ. ಏಕೆಂದರೆ ಬಡ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ‌ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕೆಂಬುದೇ ಸರಕಾರದ ಧ್ಯೇಯೋದ್ದೇಶವಾಗಿದೆ ಎಂದು ಹವಗಿ(ಹಳಿಯಾಳ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ ಲಮಾಣಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಹತ್ತಿರವಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರದಂದು ಹಮ್ಮಿಕೊಂಡಂತಹ “ಹಳೆಯ ವಿದ್ಯಾರ್ಥಿಗಳ ಸಂಘ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೋತೆಗೆ ನೂತನವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು “ಹಳೆಯ ವಿದ್ಯಾರ್ಥಿಗಳ ಸಂಘ”ದ ನೂತನ ಅಧ್ಯಕ್ಷರನ್ನಾಗಿ ಹಳಿಯಾಳದ ೧೯೮೭ರ ಬ್ಯಾಚನ ಇಮ್ತಿಯಾಜ ಮನಿಯಾರ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಇವರ ಜೋತೆಗೆ ಸದಸ್ಯರನ್ನಾಗಿ ಡಾ.ಎನ್.ಎಮ್.ಜಂಗುಬಾಯಿ, ಅಲ್ತಾಫ ಪುಂಗಿ,‌ ಸುಂದರ ಕನಕತ್ರಿ ಅವರನ್ನು ಸಹ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದರ ಜೋತೆಗೆ ಪ್ರತಿ ವರ್ಷದ‌ ಒಬ್ಬ ವಿದ್ಯಾರ್ಥಿಯನ್ನು ಆಡಳಿತ ಸಂಘದ ಸದಸ್ಯರನ್ನಾಗಿ ಹಾಗೂ ಎಲ್ಲ ಹಳೆಯ ವಿದ್ಯಾರ್ಥಿಗಳಿಗೆ ಸದಸ್ಯರನ್ನಾಗಿ ಮಡುತ್ತೆವೆ ವಿಶ್ವಾಸ ವ್ಯಕ್ತಪಡಿಸಿದರು. ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ಹಳೆಯ ವಿದ್ಯಾರ್ಥಿಗಳ ಸಭೆಯ ಕರೆಯುವುದಾಗಿ ಭರವಸೆ ನೀಡಿದರು.

ಈ‌ ಸಂಧರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ‌ಅನಿಸಿಕೆಗಳನ್ನು ಹೇಳಿಕೊಂಡರು.

ಕಾಲೇಜಿನ ಹಳೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಶಾಲು ಹೊದಿಸಿ ಸತ್ಕರಿಸಲಾಯಿತು.

ಕಾರ್ಯಕ್ರಮವನ್ನು ಉಪನ್ಯಾಸಕಿ ಡಾ.ಅನ್ನಪೂರ್ಣ ಪಾಟೀಲ ನಿರೂಪಿಸಿದರು. ಉಪನ್ಯಾಸಕಿ ಪಿ.ಎಮ್. ಶೇಖ ಸ್ವಾಗತಿಸಿದರು. ಉಪನ್ಯಾಸಕ ಪರಮಾನಂದ ದಾಸರ ವಂದಿಸಿದರು.

ಈ ಸಂಧರ್ಭದಲ್ಲಿ ರಮೇಶ ಬಿಳೆಕಲ, ಕಾಶೀಮ ಹಟ್ಟಿಹೋಳಿ, ರಂಜಿತಾ ಅಂಬಿಪ್ಪಿ, ಸುಶಾಂತ ಮೇತ್ರಿ, ದೀಪಾ‌ ಬಾಗೇವಾಡಿ, ವೆಂಕಟೇಶ ಸಾಳುಂಕೆ, ಮಂಜುನಾಥ ಪಾಟೀಲ, ಹರ್ಷದಾ, ಅಮೃತಾ, ಹಾಗೂ ಕಾಲೇಜಿನ ಎಲ್ಲ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts: