ಗೋಕಾಕ:ವೈದ್ಯಕೀಯ ವೃತ್ತಿಯೊಂದಿಗೆ ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ : ಜಿ.ಬಿ.ಬಳಗಾರ
ವೈದ್ಯಕೀಯ ವೃತ್ತಿಯೊಂದಿಗೆ ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ : ಜಿ.ಬಿ.ಬಳಗಾರ
ಗೋಕಾಕ ಜ 7: ವೈದ್ಯಕೀಯ ವೃತ್ತಿಯೊಂದಿಗೆ ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ ಎಂದು ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ರವಿವಾರದಂದು ಇಲ್ಲಿಯ ಸಮುದಾಯ ಭವನದಲ್ಲಿ ಶ್ರೀ ಅಲ್ಲಮಪ್ರಭು ಪೌಂಡಶೇಷನ್ ತುಕ್ಕಾರ ಸ್ಕೂಲ್ ಆಫ್ ನರ್ಸಿಂಗ್‍ನ ಅಂತಿಮ ವರ್ಷದ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿಜ್ಞಾವಿದಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇವರಿಗೆ ಸಮನಾದ ವೈದ್ಯರಿಗೆ ಸಹಾಯಕರಾಗಿ ಕಾರ್ಯ ಮಾಡುವ ಪವಿತ್ರ ವೃತ್ತಿ ಶುಶ್ರೊಷಿಕ ವೃತಿಯಾಗಿದೆ. ರೋಗಿಗಳ ರೋಗಗಳು ಗುಣಮುಖರಾಗುವಲ್ಲಿ ನಿಮ್ಮ ಸೇವೆಗೆ ಮಹತ್ವದ ಸ್ಥಾನವಿದೆ. ಅದನ್ನು ಶೃದ್ಧೆ, ಪ್ರೀತಿ, ವಾತ್ಸಲದಿಂದ ಮಾಡಿ ಅವರ ಆಶಿರ್ವಾದದೊಂದಿಗೆ ನಿಮ್ಮ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.
ದೀಪದಾನ ಮಾಡಿ, ಪ್ರತಿಜ್ಞಾವಿದಿ ಭೋದಿಸಿದ ಬೆಳಗಾವಿಯ ಸರ್ಕಾರಿ ನರ್ಸಿಂಗ್ ಶಾಲೆಯ ಉಪಪ್ರಾಚಾರ್ಯೆ ದೀಪಾಲಿ ಕುರಡೇಕರ ಮಾತನಾಡಿ ನರ್ಸಿಂಗ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ತ್ವರಿತಗತಿಯಲ್ಲಿ ಖಾಸಗಿ ಹಾಗೂ ಸರ್ಕಾರಿ ಹುದ್ದೆಗಳು ದೊರೆಯುವವು, ದೇಶ ವಿದೇಶಗಳಲ್ಲಿ ಈ ವೃತ್ತಿಪರ ಉದ್ಯೋಗಿಗಳ ಕೊರೆತೆ ಇದ್ದು, ಎಲ್ಲ ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆಯುವುದರೊಂದಿಗೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮಾನವ ಹುಟ್ಟಿನಿಂದ ಸಾಯುವವರಗೆ ನಿಮ್ಮ ಸೇವೆ ಅಮೂಲ್ಯವಾಗಿದ್ದು, ಸಮಾಜದಿಂದ ನಿಮಗೆ ಗೌರವದ ಸ್ಥಾನ ದೊರೆಯುವುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಮಹಾಂತೇಶ ಕಡಾಡಿ ವಹಿಸಿದ್ದರು. ವೇದಿಕೆ ಮೇಲೆ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎ.ವಾಯ್.ಹಾದಿಮನಿ, ಸಂಸ್ಥೆಯ ನಿರ್ದೇಶಕಿ ಡಾ. ಮಯೂರಿ ಕಡಾಡಿ, ಪ್ರಾಚಾರ್ಯ ವಿಜಯಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು