ಗೋಕಾಕ:ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಭವ್ಯ ಸ್ವಾಗತ
ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಭವ್ಯ ಸ್ವಾಗತ
ಗೋಕಾಕ ಜ 9 : ಶೂರ ಸಂಗೊಳ್ಳಿ ರಾಯಣ್ಣ ವೀರಜ್ಯೋತಿಯು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರದಂದು ಸಂಜೆ ಭವ್ಯ ಸ್ವಾಗತ ಮೂಲಕ ಬರ ಮಾಡಿಕೊಳ್ಳಲಾಯಿತು.
ನಗರದಲ್ಲಿರುವ ಸಂಗೋಳ್ಳಿ ರಾಯಣ್ಣ ವೃತ್ತವು ಅಲಂಕರಿಸಲಾಗಿತ್ತು. ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಝಾಂಜ ಪಥಕ ಮತ್ತು ಸಕಲ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆ ಮೂಲಕ ಕನಕದಾಸ ವೃತ್ತದಿಂದ ಆದಿ ಜಾಂಬವ ನಗರದ ರಸ್ತೆ ಮೂಲಕ ಬೀರೇಶ್ವರ ಸಮುದಾಯ ಭವನಕ್ಕೆ ತಲುಪಿತು.
ಈ ಸಂದರ್ಭದಲ್ಲಿ ತಹಶೀಲದಾರ ಎಸ್.ಕೆ.ಕುಲಕರ್ಣಿ, ತಾ.ಪಂ ಇಒ ಎಫ್.ಜಿ. ಚಿನ್ನನವರ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸ್ಥಾಯಿ ಸಮಿತಿ ಚೇರಮನ್ ಭಗವಂತ ಹುಳ್ಳಿ, ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ, ಕುರುಬರ ಸಂಘದ ತಾಲೂಕಾಧ್ಯಕ್ಷ ಸಿದ್ಲಿಂಗ ದಳವಾಯಿ, ಜಿ.ಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಅನಿಲ ತುರಾಯಿದಾರ, ಕರವೇ ತಾಲೂಕಾಧ್ಯಕ್ಷರುಗಳಾದ ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಡಾ| ಮೋಹನ ಕಮತ, ಡಾ| ಆರ್.ಎಸ್.ಬೆಣಚಿನಮರಡಿ, ಬಿಇಓಗಳಾದ ಎ.ಸಿ.ಗಂಗಾಧರ, ಜಿ.ಬಿ.ಬಳಿಗಾರ, ಕಂದಾಯ ನಿರೀಕ್ಷಕ ಎಸ್.ಬಿ.ಕಟ್ಟಿಮನಿ, ನಗರಸಭೆ ಸದಸ್ಯರು ಸೇರಿದಂತೆ ಇತರರು ಇದ್ದರು.