ಗೋಕಾಕ:ಕಾಂಕ್ರಿಟ್ ರಸ್ತೆಯ ಕಾಮಗಾರಿಗೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಚಾಲನೆ
ಕಾಂಕ್ರಿಟ್ ರಸ್ತೆಯ ಕಾಮಗಾರಿಗೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಚಾಲನೆ
ಗೋಕಾಕ ಜ 9 : ತಾಲೂಕಿನ ಮಮದಾಪೂರ ಗ್ರಾಮದ ಮಾಲದಿನ್ನಿ ರಸ್ತೆಯಿಂದ ಪಟಗುಂದಿ ಮನೆಯವರೆಗೆ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠರವರ ಬಯಲು ಸೀಮೆ ಪ್ರದೇಶ ಅಭಿವೃದ್ದಿ ಅನುದಾನದಡಿಯಲ್ಲಿ 5 ಲಕ್ಷ ರೂಪಾಯಿಯ ಸಿಮೆಂಟ್ ಕಾಂಕ್ರಿಟ್ ರಸ್ತೆಯ ಕಾಮಗಾರಿಯನ್ನು ಬಿಜೆಪಿ ಮುಖಂಡ ಅಶೋಕ ಪೂಜಾರಿ ಗುದ್ದಲಿ ಪೂಜೆ ನೆರವೇರಿಸುವುದರ ಮುಖಾಂತರ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ. ಮುಖಂಡರಾದ ಅಶೋಕ ಪೂಜಾರಿ ಈ ಭಾಗದಲ್ಲಿ ಇನ್ನೂ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಲೋಕಸಭಾ ಸದಸ್ಯ ಸುರೇಶ ಅಂಗಡಿ ಹಾಗೂ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಇವರ ಅನುದಾನದಡಿಯಲ್ಲಿ ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶಾಂತಾರೂಢ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಹಾದೇವ ಪಟಗುಂದಿ, ಈರಪ್ಪಾ ಜನಮಟ್ಟಿ, ಅಜ್ಜಪ್ಪ ಜನಮಟ್ಟಿ, ಈರಪ್ಪ ಸೊಂಡೂರ, ಚಂದ್ರಶೇಖರ ಕೊಳವಿ, ಮಹೇಶ ಗೌಡರ, ಗೌಡಪ್ಪಾ ಪಾಟೀಲ, ಶಿವಪ್ಪ ದಳವಾಯಿ, ಲಕ್ಷ್ಮಣ ಶಿವಾಪೂರ, ನಿಂಗಪ್ಪ ಅಮ್ಮಿನಬಾವಿ, ಮಹಾಂತೇಶ ಜನಮಟ್ಟಿ, ಮಹಾಂತೇಶ ಮಲಕನ್ನವರ, ಪ್ರವೀಣ ಕಮತ, ಶ್ರೀಕಾಂತ ಗಿಡ್ಡಗೌಡ್ರ ಸೇರಿದಂತೆ ಇತರರು ಇದ್ದರು.