ಬೈಲಹೊಂಗಲ:ನೇಗಿನಹಾಳದಲ್ಲಿ ಖಾಲಿ ಗಾಡಾ ಓಡಿಸುವ ಶರತ್ತಿಗೆ ಶ್ರೀಗಳಿಂದ ಚಾಲನೆ
ನೇಗಿನಹಾಳದಲ್ಲಿ ಖಾಲಿ ಗಾಡಾ ಓಡಿಸುವ ಶರತ್ತಿಗೆ ಶ್ರೀಗಳಿಂದ ಚಾಲನೆ
ಬೈಲಹೊಂಗಲ 10 :ನೇಗಿನಹಾಳ ಗ್ರಾಮದ ಐತಿಹಾಸಿಕ ಪ್ರಸಿದ್ಧ ವಿಠ್ಠಲ-ರುಕ್ಮೀಣಿ ಮಂದಿರದ 110ವರ್ಷದ ದೀಂಡಿ ಜಾತ್ತಾ ಮಹೋತ್ಸವದ ನಿಮಿತ್ತ್ತ ಗ್ರಾಮದ ಹಾದಿ ಬಸವೇಶ್ವರ ಯುವಕ ಮಂಡಳದಿಂದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆಗೆ ಗ್ರಾಮದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಮಹಾಸ್ವಾಮೀಜಿಗಳಿಂದ ಚಾಲನೆ ನೀಡಲಾಯಿತು.
ಹಾದಿ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿ ಮುಖ್ಯ ಅತಿಥಿಗಳಾಗಿ ಜಾತ್ರಾ ಕಮೀಟಿ ಅದ್ಯಕ್ಷ ನಾನಾಸಾಹೇಬ ಪಾಟೀಲ, ಯುವ ಮುಖಂಡರಾದ ವಿಕ್ರಮ ಇನಾಮದಾರ, ಬೈಲಹೊಂಗಲ ಸೋನಾಲಿಕ ಟ್ರ್ಯಾಕಟ್ರ್ಸ್ ಅಧಿಕೃತ ವಿತರಕ ಸುಹಾಸ ಕುಲ್ಲೋಳ್ಳಿ, ಗುತ್ತಿಗೆದಾರ ಶಿವಾನಂದ ದಿವಾಣದ, ಲಕ್ಷ್ಮೀ ಟ್ರೇಡರ್ಸ್ ಡೀಲರ್ ಮಹರುದ್ರಪ್ಪ ಭೋಳೆತ್ತಿನ, ಬಾಳೇಶ ಪಟ್ಟೇದ, ನಾಗಪ್ಪ ಗಾಡದ, ಶಿಕ್ಷಕ ಬಸವರಾಜ ಬಾಳೆಕುಂದರಗಿ, ಸುಭಾಷ ನರಸನ್ನವರ ಈರಣ್ಣಾ ಉಳವಿ, ಶ್ರೀಶೈಲ ಚನ್ನಪಗೌಡರ, ಚಂದ್ರಶೇಖರ ಬೆಳಗಾವಿ, ಹಾದಿ ಬಸವೇಶ್ವರ ಯುವಕ ಮಂಡಳದ ಮುಖಂಡರಾದ ಅಶೋಕ ಜೈನರ, ಪಕ್ಕೀರಪ್ಪ ಬಾಳೇಕುಂದರಗಿ, ಸುರೇಶ ಗುಡಿ, ಗದಿಗೆಪ್ಪ ತಲ್ಲೂರ, ರಾಚಪ್ಪ ಚನ್ನಪ್ಪಗೌಡರ ಹಾಗೂ ಸುತ್ತಮೂತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.