RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ: ಚಕ್ರವರ್ತಿ ಸೂಲೆಬೆಲೆ

ಘಟಪ್ರಭಾ:ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ: ಚಕ್ರವರ್ತಿ ಸೂಲೆಬೆಲೆ 

ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ: ಚಕ್ರವರ್ತಿ ಸೂಲೆಬೆಲೆ

ಘಟಪ್ರಭಾ ಜ 11: ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದು ಚಕ್ರವರ್ತಿ ಸೂಲೆಬೆಲೆ ಹೇಳಿದರು ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಮುಗಳಖೋಡದಲ್ಲಿ ಜರಗುವ ಸಹಸ್ರ ಸಹಸ್ರ ವಿವೇಕ ಆವಾಹನಾ ಕಾರ್ಯಕ್ರಮದ ನಿಮಿತ್ಯ ಪಂಜಿನ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ತಮ್ಮ ತಾರುಣ್ಯದ ಜೀವನದಲ್ಲಿ ಸಮೃದ್ಧ ದೇಶವನ್ನು ಕಟ್ಟುವ ಕೆಲಸ ಮಾಡಬೇಕು. ಗ್ರಾಮೀಣ ಅಭಿವೃದ್ದಿಯಲ್ಲಿ ತೊಡಗಿ ಗ್ರಾಮವನ್ನು ಸುಂದರ ಗ್ರಾಮವನ್ನಾಗಿ ಪರಿವರ್ತಿಸಿ ರಾಜ್ಯದಲ್ಲಿಯೇ ಮಾದರಿ ಗ್ರಾಮವನ್ನಾಗಿ ರೂಪಿಸಬೇಕು. ಯುವಕರೇ ದೇಶದ ಸಂಪತ್ತು ಯುವಕರು ಮನಸ್ಸು ಮಾಡಿದರೇ ಏನಾದರೂ ಸಾಧಿಸಬಹುದು. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮೃದ್ಧ ರಾಷ್ಟ್ರ ನಿರ್ಮಾಣದ ನಿರ್ಮಾಪಕರಾಗಬೇಕು.
ಅಭಿವೃದ್ದಿ ಕಾರ್ಯದಲ್ಲಿ ಜಾತಿ ಬೇಧ ಭಾವ ಮರೆತು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಹೊಂದಬೇಕು. ಕರ್ನಾಟಕವನ್ನು ವಿಶ್ವಗುರು ಮಾಡಬೇಕು. ಕನಸಿನ ಕರ್ನಾಟಕ ಮಾಡಬೇಕು. ಈ ನಿಟ್ಟಿನಲ್ಲಿ ಯುವಕರು ಮುಂದಿನ ಪೀಳಿಗಿಗೆ ಸಮೃದ್ಧ ಕರ್ನಾಟಕವನ್ನು ತೋರಿಸವಂತಹ ಕಾರ್ಯವಾಗಬೇಕು. ಬರುವ ದಿ.12ರಂದು ಸ್ವಾಮಿ ವಿವೇಕಾನಂದರ ಜಯಂತಿಗೆ ಮುಗಳಖೋಡದ ಬ್ರಹ್ಮನಮಠದಲ್ಲಿ ಬೃಹತ್ ಸ್ವಾಮಿ ವಿವೇಕಾನಂದರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಯುವಕರ ಶಕ್ತಿಯೇ ದೇಶದ ಶಕ್ತಿಯಾಗಿದ್ದಾರೆ. ತಾರುಣ್ಯದಲ್ಲಿ ಯಾವುದೇ ದುಶ್ಚಟಕ್ಕೆ ಅಂಟಿಕೊಳ್ಳದೇ ಶಾರೀರಿಕ ಬೆಳವಣಿಗೆಯನ್ನು ಹೊಂದಬೇಕೆಂದು ಹೇಳಿದರು.

ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಜರುಗಿದ ಮುಗಳಖೋಡದಲ್ಲಿ ಜರಗುವ ಸಹಸ್ರ ಸಹಸ್ರ ವಿವೇಕ ಆವಾಹನಾ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಕ್ಕೇರಿಯ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಮಾತನಾಡಿ ಭಾರತ ಬೆಳಗಬೇಕು. ಆ ಬೆಳಕಿನಲ್ಲಿ ಯುವ ಶಕ್ತಿ ಮುಂದಾಗಬೇಕು. ದೇಶ ನಮಗೆ ಸ್ವಾತಂತ್ರ ಭಾರತ ನೀಡಿದೆ. ದೇಶಕ್ಕೆ ಯುವಕರ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಯುವಕರು ದೇಶ ಕಟ್ಟುವ ನವ ನಿರ್ಮಾಪಕರಾಗಬೇಕೆಂದರು.
ಸಾನಿಧ್ಯವನ್ನು ಶ್ರೀ ವಿಠ್ಠಲ ದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ ವಹಿಸಿದ್ದರು. ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಚಕ್ರವರ್ತಿ ಸೂಲೆಬೆಲೆ ಅಭಿಮಾನಿ ಬಳಗದ ವತಿಯಿಂದ ಚಕ್ರವರ್ತಿ ಸೂಲೆಬೆಲೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಂದಿಕುರಬೇಟ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಂದ ಚಕ್ರವರ್ತಿ ಸೂಲಿಬೆಲೆ ಅಭಿಮಾನಿಗಳು, ಯುವಕರು, ಗ್ರಾಮದ ಮುಖಂಡರು ಭಾಗವಹಿಸಿದ್ದರು.

Related posts: