RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ

ಗೋಕಾಕ:ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ 

ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ

ಗೋಕಾಕ ಜ12 : ವಿವೇಕಾನಂದರ ಸಶಕ್ತ ಭಾರತದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಅವರು ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರದಂದು ನಗರದ ಕರವೇ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚಾರಣೆ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಏಳಿ ಏದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ, ನಿಮ್ಮ ಏಳ್ಗಿಗೆ ನೀವೆ ಶಿಲ್ಪಿಗಳು ಎಂದು ಕರೆ ನೀಡಿ ಯುವಕರಲ್ಲಿ ಅಗಾಧ ದೇಶಪ್ರೇಮವನ್ನು ತುಂಬಿದ ಅವರು ಆಶಿಸಿದ್ದ ಸಶಕ್ತ ಭವ್ಯ ಭಾರತವನ್ನು ನಾವಿಂದು ಕಟ್ಟಬೇಕಾಗಿದೆ. ಇದಕ್ಕಾಗಿ ದೇಶದ ಪ್ರತಿಯೊಬ್ಬ ಯುವಕ ಸಂಕಲ್ಪ ಮಾಡಬೇಕಾಗಿದೆ. ಈ ರಾಷ್ಟ್ರೀಯ ಯುವ ದಿನಾಚಾರಣೆ ನಿಜಕ್ಕೂ ಸ್ವಾರ್ಥಕವಾಗಬೇಕಾದರೆ ವಿವೇಕಾನಂದರ ನಡೆದು ಬಂದ ದಾರಿಯಲ್ಲಿ ಯುವಪಡೆ ಸಾಗಬೇಕು. ವಿವೇಕಾನಂದರು ಕಂಡ ಕನಸುಗಳನ್ನು ನನಸುಗೊಳಿಸುವ ಸನ್ಮಾರ್ಗದಲ್ಲಿ ನಾವಿಂದು ಸಾಗಬೇಕು ಇದೇ ನಾವು ವೀರ ಸನ್ಯಾಸಿ ವಿವೇಕಾನಂದರಿಗೆ ಸಲ್ಲಿಸುವ ಬಹುದೊಡ್ಡ ಗೌರವ. ಆ ದಿಶೆಯಲ್ಲಿ ಎಲ್ಲಾ ಯುವಕರು ಪ್ರತಿಜ್ಞೆ ಮಾಡಬೇಕಾಗಿದೆ.
ಯಾರೇ ಒಬ್ಬರು ವಿವೇಕಾನಂದರ ವಿಚಾರಗಳನ್ನು ಯುವಕರಿಗೆ ಮುಟ್ಟಿಸುವ ಕಾರ್ಯ ಮಾಡಿದರೆ ಸಾಲದು ಎಲ್ಲರೂ ಒಗ್ಗೂಡಿಕೊಂಡು ಜಾತಿ, ಧರ್ಮ ಪಂಗಡಗಳನ್ನು ಬದಿಗೊತ್ತಿ ವಿವೇಕಾನಂದರ ಆದರ್ಶಗಳನ್ನು ಪ್ರತಿಪಾದಿಸಿ ಭಾರತದ ಯುವಕರಿಗೆ ಮುಟ್ಟಿಸುವ ಪವಿತ್ರ ಕಾರ್ಯ ಮಾಡಬೇಕಾಗಿದೆ ಎಂದು ಖಾನಪ್ಪನವರ ಹೇಳಿದರು.
ಈ ಸಂದರ್ಭದಲ್ಲಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ಭೀಮಾ ಶಂಕರ ಪುಟಾಣಿ, ದುಂಡಯ್ಯ ಹುಕ್ಕೇರಿಮಠ, ಗುರು ಮುನ್ನೋಳಿಮಠ, ಸಂತೋಷ ನಾಯಕ, ಲಕ್ಷ್ಮಣ ಬಿಲಾಯಿ, ಪವನ ಆಶಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: