RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ

ಗೋಕಾಕ:ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ 

ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ

ಗೋಕಾಕ ಜ 12 : ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಸ್ಥಳೀಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಹೇಳಿದರು.
ಅವರು, ನಗರದ ಬಾಂಬೇಚಾಳನ ಸ್ಫರ್ಧಾ ವಿವೇಕ ಗೋಕಾಕ ಸಂಸ್ಥೆಯ ಕೆಎಎಸ್ ಮತ್ತು ಪಿಎಸ್‍ಐ ತರಬೇತಿ ಕೇಂದ್ರದ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳ ಬಿಳ್ಕೋಡುಗೆ, ಹೊಸ ಬ್ಯಾಚ್ ಪ್ರಾರಂಭ ಕಾರ್ಯಾಗಾರ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆನೀಡಿ ಮಾತನಾಡಿದರು.
ಎಲ್ಲರೂ ಸದ್ಗುಣ, ಸದಾಚಾರ, ಸತ್ಕಾರ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಫರ್ಧಾ-ವಿವೇಕ-ಗೋಕಾಕ ಸಂಸ್ಥೆ ಪ್ರಥಮ ಬಾರಿಗೆ ಕೆಎಎಸ್ ಬ್ಯಾಚ್ ಯಶಸ್ವಿಯಾಗಿ ಪೂರ್ಣಗೊಳಿಸಿ ಎರಡನೇಯ ಬ್ಯಾಚ್ ಪ್ರಾರಂಭ ಮಾಡಿರುವದು ಗೋಕಾಕ ನಗರದ ಮತ್ತು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಒಂದು ಸದವಕಾಶ ಕಲ್ಪಿಸಿದೆ ಎಂದರು.
ಸಂಸ್ಥೆಯ ಸಂಸ್ಥಾಪಕರಾದ ಎಸ್ ಕೆ ಕಬಾಡಗಿ ಅವರು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಸ್ವದೇಶಿ ಮಂತ್ರ ಭೋದಿಸಿದರು.
ವೇದಿಕೆಯ ಮೇಲೆ ಕೆಎಎಸ್ ಶಿಕ್ಷಕರಾದ ನಿಂಗಪ್ಪ ಅಸ್ಕಿ, ಪ್ರೀಯಾಂಕಾ ಎಸ್ ಬಡಿಗೇರ, ರಾಹುಲ ಪಿ ಜಾಧವ, ಅಡಿವೆಪ್ಪ ಪಾಟೀಲ, ಬಾಳೇಶ ಮಗದುಮ್, ಪತ್ರಕರ್ತ ಪ್ರದೀಪ ನಾಗನೂರ ಇತರರು ಇದ್ದರು.

Related posts: